ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಿಲ್ಲ, ಭಾರದ್ವಾಜ್

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಗುರುವಾರ ಇಲ್ಲಿ ಏರ್ಪಡಿಸಿದ್ದ ಕೃಷಿಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂತ್ರಸ್ತ ಜನ ನನ್ನ ಬಳಿ ಬಂದು, ನಮಗೆ ಪರಿಹಾರ ಸಿಕ್ಕಿಲ್ಲ ಎಂದು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದಾರೆ. ಆದರೆ, ಸರಕಾರ ಮಾತ್ರ ಈ ಬಗ್ಗೆ ನನಗೆ ಯಾವುದೇ ಮಾಹಿತಿ ನೀಡಿಲ್ಲ ಎಂದರು.
ಪರಿಹಾರ ಕಾರ್ಯಕ್ಕೆ ಹಣದ ಕೊರತೆ ಇಲ್ಲ. ಪ್ರವಾಹ ಉಂಟಾದ ಕೂಡಲೇ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸಿ ಒಂದು ಸಾವಿರ ಕೋಟಿ ನೆರವು ಘೋಷಿಸಿದ್ದಾರೆ. ಈಗಾಗಲೇ ಹಣವೂ ಬಂದಿದೆ. 500 ಕೋಟಿ ರುಪಾಯಿ ಖರ್ಚು ಮಾಡುವ ಸಂಬಂಧ ಸುಗ್ರಿವಾಜ್ಞೆಗೆ ಸಹಿ ಹಾಕಿದ್ದೇನೆ. ಆದರೆ, ಸರಕಾರ ಸಂತ್ರಸ್ತ ನೆರವಿಗೆ ಸ್ಪಂದಿಸಿಲ್ಲ ಎಂದು ಹರಿಹಾಯ್ದರು.
(ದಟ್ಸ್ ಕನ್ನಡ ವಾರ್ತೆ)











Click it and Unblock the Notifications