ನಂಬಿಸಿ ಅತ್ಯಾಚಾರವೆಸಗಿದ ಟೆಕ್ಕಿ

ಕೇರಳ ಮೂಲದ ಲಿನೋ ವರ್ಗೀಸ್ ಪ್ರೇಯಸಿಗೆ ಕೈಕೊಟ್ಟು ತಲೆಮರೆಸಿಕೊಂಡಿರುವ ಆರೋಪಿಯಾಗಿದ್ದಾನೆ. ಈ ಹಿಂದೆ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಇಬ್ಬರು ಕೆಲಸ ಮಾಡುತ್ತಿದ್ದರು. ಭವಾನಿ ನಗರದಲ್ಲಿ ವಾಸವಿದ್ದ ಅವರಿಬ್ಬರು ನಂತರ ಬೇರೆ ಕಂಪನಿಗೆ ಸೇರಿದರು. ಮೂರು ವರ್ಷದಿಂದ ಇಬ್ಬರಿಗೂ ಪರಿಚಯವಿತ್ತು.
ಮದುವೆಯಾಗುವುದಾಗಿ ಯುವತಿಗೆ ಆಶ್ವಾಸನೆ ನೀಡಿದ್ದ ವರ್ಗೀಸ್, ಈ ಬಗ್ಗೆ ಪ್ರಶ್ನೆಸಿದಾಗಲ್ಲೆಲ್ಲಾ ಸುಳ್ಳು ಹೇಳುತ್ತಿದ್ದ. ಬನ್ನೇರುಘಟ್ಟ ರಸ್ತೆಯಲ್ಲಿರುವ ಹೋಟೆಲ್ ವೊಂದಕ್ಕೆ ನವೆಂಬರ್ 10 ರಂದು ಕರೆದೊಯ್ದು ವರ್ಗೀಸ್ ಪಾನೀಯವೊಂದರಲ್ಲಿ ನಿದ್ದೆ ಬರುವ ಮಾತ್ರೆ ಹಾಕಿ ಅತ್ಯಾಚಾರ ನಡೆಸಿದ್ದಾನೆ. ನಂತರ ಆಕೆಯನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾನೆ ಎಂದು ವಂಚಿತ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ. ಸದ್ಯ ಯುವತಿ ಎಎಂಆರ್ ಟೆಕ್ ಪಾರ್ಕ್ ನಲ್ಲಿ ಮತ್ತು ಆರೋಪಿ ವರ್ಗೀಸ್ ಜೆಪಿ ನಗರದ ಆರಿಸ್ ಗ್ಲೋಬಲ್ ಸಾಫ್ಟ್ ವೇರ್ ನಲ್ಲಿ ಕೆಲಸ ಮಾಡುತ್ತಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications