ಮಕ್ಕಳ ಪ್ರಶಸ್ತಿಗೆ ಇಬ್ಬರು ನಮ್ಮವರು

Child Bravery awards
ನವದೆಹಲಿ, ನ. 14 : ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಠ ಸಾಧನೆಗೈದಿರುವ ದೇಶದ 25 ಮಕ್ಕಳಿಗೆ ನಾಳೆ (ನ. 14) ಮಕ್ಕಳ ದಿನದ ಅಂಗವಾಗಿ ನಗರದ ವಿಜ್ಞಾನ್ ಭವನದಲ್ಲಿ 'ರಾಷ್ಟ್ರೀಯ ಮಕ್ಕಳ ಪ್ರಶಸ್ತಿ' ಪ್ರಧಾನ ಸಮಾರಂಭ ಆಯೋಜಿಸಲಾಗಿದೆ. ಈ 25 ಮಕ್ಕಳಲ್ಲಿ ರಾಜ್ಯದ ಇಬ್ಬರು ಮಕ್ಕಳು ಪ್ರಶಸ್ತಿ ಪಡೆದುಕೊಳ್ಳಲಿದ್ದಾರೆ.

4-15 ವರ್ಷ ವಯಸ್ಸಿನ ಮಕ್ಕಳಿಗೆ ಮಕ್ಕಳ ದಿನದಂದು ಪ್ರಶಸ್ತಿ ವಿತರಿಸಲಾಗುತ್ತಿದ್ದು, ಮೊದಲ ಪ್ರಶಸ್ತಿ ಚಿನ್ನದ ಫಲಕ ಹಾಗೂ 20 ಸಾವಿರ ರುಪಾಯಿ ಗೌರವ ಧನ ಹೊಂದಿದ್ದರೆ, ಉಳಿದ ಪ್ರಶಸ್ತಿಗಳು ಬೆಳ್ಳಿ ಫಲಕ ಹಾಗೂ 10 ಸಾವಿರ ರುಪಾಯಿಗಳ ಗೌರವಧನವನ್ನು ಹೊಂದಿರುತ್ತದೆ. ಡ್ರಾಯಿಂಗ್ ನಲ್ಲಿ ವಿಶೇಷ ಪ್ರತಿಭೆಯನ್ನು ತೋರಿರುವ ಕರ್ನಾಟಕದ ಎಸ್ ಶ್ರುತಿ ಮಕ್ಕಳ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶ್ರುತಿ ಡ್ರಾಯಿಂಗ್ ನಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿ ಗಳಿಸಿದ್ದಾರೆ. ಇವರ ಜೊತೆಗೆ ಚಿಕ್ಕವಯಸ್ಸಿನಲ್ಲಿ ಗಣಿತ ವಿಷಯದಲ್ಲಿ ಜಿನೀಯಸ್ ಎನಿಸಿಕೊಂಡಿರುವ ಎ ಎಂ ಆನಂದ ಕೂಡಾ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+