ರೆಡ್ಡಿ, ಯಡ್ಡಿ ಕದನದಲ್ಲಿ ಯಾರು ಗೆದ್ದರು ?

Yeddy to continue as CM ; Karunakara Reddy
ಬಳ್ಳಾರಿ, ನ. 10 : ರೆಡ್ಡಿ ಮತ್ತು ಯಡ್ಡಿ ಜಗಳದಲ್ಲಿ ಯಾರು ಗೆದ್ದರು ಎನ್ನುವುದು ಮಾದ್ಯಮಗಳು ತೀರ್ಮಾಸಲಿ ಎಂದು ಕಂದಾಯ ಸಚಿವ ಕರುಣಾಕರರೆಡ್ಡಿ ಹೇಳಿದರು. ಆಗುವುದೆಲ್ಲಾ ಒಳ್ಳೆಯದಕ್ಕೆ, ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಮುಂದುವರೆಯುತ್ತೇವೆ ಎಂದು ಅವರು ಹೇಳಿದರು.

ಬಳ್ಳಾರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಅವರು, ಆ ಭಗವಂತ ಯಾರ ಹಣೆಯಲ್ಲಿ ಏನೇನು ಬರೆದಿದ್ದಾನೋ ಯಾರಿಗೆ ಗೊತ್ತು ಎಂದರು.
ನಿಮಗೆ ಎಲ್ಲಾ ವಿಷಯ ತಿಳಿದಿದ್ದರೂ ಇಕ್ಕಟ್ಟಿಗೆ ಬೀಳುವ ಪ್ರಶ್ನೆಗಳನ್ನು ಯಾಕೆ ಕೇಳುತ್ತೀರಿ ? ಕಂಸನ ತಪ್ಪುಗಳು ಸಾಕಷ್ಟು ಆಗಬೆಕು. ಆಗ ಮುಂದಿನ ಮಾತು. ಸಿಎಂ ಅತ್ತಿದ್ದು ಟಿವಿಯಲ್ಲಿ ನಾನು ನೋಡಿದ್ದೇನೆ, ಅವರು ಯಾರಿಗಾಗಿ ಅತ್ತರು ಎಂದು ನಾನೇನು ಬಾಯಿ ಬಿಟ್ಟು ಹೇಳಬೇಕಾಗಿಲ್ಲ. ರಾಜ್ಯದ ಜನತೆಗೆ ಎಲ್ಲಾ ಗೊತ್ತಿದೆ ಎಂದು ಕರುಣಾಕರ ರೆಡ್ಡಿ ಹೇಳಿದರು.

ಸದ್ಯದ ರಾಜಕೀಯ ಬೆಳವಣಿಗೆಯಿಂದ ನಮಗೆ ಹಿನ್ನೆಡೆಯಾಗಿದೆಯೇ ಎಂದು ನೀವೇ ಹೇಳಬೇಕು. ನನಗಂತೂ ಏನೂ ಗೊತ್ತಿಲ್ಲ. ಪೆನ್ನು ಪೇಪರ್ರೂ ಎರಡೂ ನಿಮ್ಮದು ಏನಾದರೂ ಬರೆದುಕೊಳ್ಳಬಹುದು. ಸಂಧಾನದ ವಿಷಯದಲ್ಲಿ ತೃಪ್ತಿ ಮತ್ತು ಅತೃಪ್ತಿಯ ಪ್ರಶ್ನೆಗಳು ಬರುವುದಿಲ್ಲ ಎಂದು ರೆಡ್ಡಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ಅತೃಪ್ತ ಶಾಸಕರು ತಾವಾಗಿಯೇ ಬಂದಿದ್ದಾರೆಯೇ ಹೊರತು, ನಾವೇನು ಅವರನ್ನು ರಿಸಾರ್ಟ್ಗೆ ಹೊತ್ತೊಯ್ಯಲಿಲ್ಲ. ಅಧಿಕಾರಿಗಳ ವರ್ಗಾವಣೆಗೆ ಸಂಬಂಧಿಸಿದಂತೆ ನಾವು ಯಾವ ಕಂಡೀಷನ್ನೂ ಹಾಕಿಲ್ಲ. ಅದೆಲ್ಲಾ ಸಿಎಂ ವಿಚಾರಕ್ಕೆ ಬಿಟ್ಟ ವಿಷಯ. ನೆರೆ ಸಂತ್ರಸ್ತರ ಸಮಸ್ಯೆಗಳಿಗೆ ಸ್ಪಂದಿಸಲು ಕೂಡಲೇ ತ್ವರಿತಗತಿಯ ಕೆಲಸ ಆರಂಭಿಸುತ್ತೇವೆ ಎಂದು ರೆಡ್ಡಿ ಹೇಳಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+