ಮಹಾರಾಷ್ಟ್ರ : ಕಾಂಗ್ರೆಸ್, ಎನ್ಸಿಪಿ ಪೀಕಲಾಟ

ವಿಧಾನಸಭೆ ಚುನಾವಣೆಗಳ ಫಲಿತಾಂಶ ಹೊರಬಿದ್ದು 13 ದಿನಗಳು ಸಂದಿವೆ. ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿನ ಅಶೋಕ್ ಚವಾಣ್ ಮತ್ತು ಉಪಮುಖ್ಯಮಂತ್ರಿಯಾಗಿ ಎನ್ಸಿಪಿ ಛಗನ್ ಭುಜಬಲ್ ಆಯ್ಕೆಯಾಗಿದ್ದಾರೆ.ಯ ಆದರೆ, ಸಚಿವ ಸಂಪುಟ ವಿಸ್ತರಣೆಯಲ್ಲಿ ವಿಳಂಬವಾಗಿದೆ. ಉಭಯ ಪಕ್ಷಗಳು ನಿರ್ದಿಷ್ಟ ಖಾತೆಗಳು ಬೇಕು ಎಂದು ಪಟ್ಟು ಹಿಡಿದಿರುವುದು ಉಭಯ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.
ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಬೇಸತ್ತಿರುವ ಎನ್ಸಿಪಿ ಕಾಂಗ್ರೆಸ್ ಪಕ್ಷ ನಾವು ಹೊರಗಿನಿಂದ ಬೆಂಬಲ ನೀಡಲು ಸಿದ್ದ ಎನ್ನುವ ಮಟ್ಟಕ್ಕೆ ಬಂದು ತಲುಪಿದೆ. ಆದರೆ, ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಅಶೋಕ್ ಚವಾಣ್, 48 ಗಂಟೆಯೊಳಗೆ ಸಂಪೂರ್ಣ ಸರಕಾರ ಅಸ್ತಿತ್ವಕ್ಕೆ ಬರುತ್ತದೆ ಎಂದು ಹೇಳಿದ್ದಾರೆ. ಈ ಮಧ್ಯೆ ಪ್ರತಿಪಕ್ಷ ಬಿಜೆಪಿ ಮತ್ತು ಶಿವಸೇನೆ ರಾಜ್ಯಪಾಲರನ್ನು ಭೇಟಿ 24 ಗಂಟೆಯೊಳಗೆ ಸರಕಾರ ಜಾರಿಗೆ ಬರಬೇಕು. ಇಲ್ಲದಿದ್ದರೆ, ರಾಷ್ಟ್ರಪತಿ ಆಡಳಿಕ ಜಾರಿ ಮಾಡಿ ಎಂದು ಒತ್ತಾಯಿಸಿವೆ.
(ಏಜನ್ಸೀಸ್)












Click it and Unblock the Notifications