ಇಂಜಿನಿಯರುಗಳಿಗೆ ಮತ್ತೆ ಕೆಲಸಕ್ಕೆ ಬುಲಾವ್

ಕಳೆದ ಒಂದು ವರ್ಷ ಪಿಂಕ್ ಸ್ಲಿಪ್ ಹಾವಳಿಯಿಂದ ಸಾಕಪ್ಪ ಸಾಕು ಈ ಸಾಫ್ಟ್ ವೇರ್ ನೌಕರಿ ಎಂದು ಆತಂಕದಿಂದ ದಿನದೂಡುತ್ತಿದ್ದ ಟೆಕ್ಕಿಗಳು ಇನ್ನು ಭಯಬೀಳುವ ಅಗತ್ಯವಿಲ್ಲ. ಇನ್ಫೋಸಿಸ್, ಟಿಸಿಎಸ್, ವಿಪ್ರೋ, ಅಕ್ಸೆಂಚರ್ ಸೇರಿದಂತೆ ಅನೇಕ ಸಾಫ್ಟ್ ವೇರ್ ಕಂಪನಿಗಳು ಉದ್ಯೋಗ ಬೇಟೆ ಆರಂಭಿಸುವ ಸಿದ್ಧತೆಯಲ್ಲಿ ತೊಡಗಿವೆ. ಮುಂದಿನ ಮಾರ್ಚ್ 2010ರ ವೇಳೆಗೆ ಸುಮಾರು 70-80 ಸಾವಿರ ಇಂಜಿನಿಯರ್ ಗಳನ್ನು ನೇಮಕ ಮಾಡಿಕೊಳ್ಳುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.
ಕ್ಯಾಂಪಸ್ ಸಂದರ್ಶನವೂ ಶೀಘ್ರದಲ್ಲಿ ಆರಂಭವಾಗಲಿದ್ದು, 6 ಮತ್ತು 7ನೇ ಸೆಮಿಸ್ಟರ್ ನಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳನ್ನು ನೇಮಕ ಮಾಡಿಕೊಳ್ಳುವ ಸುಳಿವನ್ನು ಕಂಪನಿಗಳು ನೀಡಿವೆ ಎಂದು ನಾಸ್ಕಾಮ್ ಅಧಿಕಾರಿಗಳು ಎಕನಾಮಿಕ್ ಟೈಮ್ಸ್ ಪತ್ರಿಕೆಗೆ ತಿಳಿಸಿದೆ.
(ಏಜನ್ಸೀಸ್)












Click it and Unblock the Notifications