ರೆಡ್ಡಿಗಳಿಗೆ ಹಿನ್ನಡೆ,ಸೋಮಯಾಜಿ ಭವಿಷ್ಯ
ಬೆಂಗಳೂರು, ಅ. 30: ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಯಾವುದೇ ಅಪಾಯವಿಲ್ಲ. ಈಗ ತಲೆದೋರಿರುವ ಬಿಕ್ಕಟ್ಟು ಪರಿಸ್ಥಿತಿ ತಿಳಿಯಾಗಲಿದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಸದ್ಯದ ಬಿಕ್ಕಟ್ಟಿನಿಂದ ಮುಖ್ಯಮಂತ್ರಿ ಪಾರಾಗಲಿದ್ದಾರೆ. ಆದರೆ, ಯಡ್ಡಿ ವಿರುದ್ಧ ತಿರುಗಿ ಬಿದ್ದಿರುವ ಬಳ್ಳಾರಿ ರೆಡ್ಡಿ ಸಹೋದರರಿಗೆ ತೀವ್ರ ಹಿನ್ನಡೆಯಾಗಲಿದೆ ಎಂದು ಖ್ಯಾತ ಜ್ಯೋತಿಷಿ ದೈವಜ್ಞ ಕೆ ಎನ್ ಸೋಮಯಾಜಿ ರಾಜಕೀಯ ಭವಿಷ್ಯ ನುಡಿದಿದ್ದಾರೆ.
ಸದ್ಯಕ್ಕೆ ಯಡಿಯೂರಪ್ಪ ತೊಂದರೆಗೆ ಸಿಲುಕಿಕೊಳ್ಳುವುದಿಲ್ಲ. ಆದರೆ ಮುಂಬರುವ ದಿನಗಳಲ್ಲಿ ಅವರು ತೊಂದರೆಗೆ ಸಿಲುಕಿಕೊಳ್ಳುವ ಸಂಭವವಿದೆ. ಅದನ್ನು ದೂರ ಮಾಡಿಕೊಳ್ಳಲು ಪರಿಹಾರ ಮಾರ್ಗ ಕಂಡುಕೊಳ್ಳಬೇಕು. ಇದರಿಂದ ಭವಿಷ್ಯದಲ್ಲಿ ಎದುರಾಗಬಹುದಾದ ವಿಪತ್ತನ್ನು ತಪ್ಪಿಸಬಹುದು ಎಂದು ಸೋಮಯಾಜಿ ಹೇಳಿದ್ದಾರೆ. ಇದೇ ವೇಳೆ ಭವಿಷ್ಯ ನುಡಿಯುವುದರಲ್ಲಿ ಎತ್ತಿ ಕೈ ಎನಿಸಿರುವ ಕರ್ನಾಟಕದ ಇನ್ನೊಬ್ಬ ಜ್ಯೋತಿಷಿ ಕೋಡಿಮಠದ ಸ್ವಾಮಿ ಅವರಿಂದ ಇದುವರೆವಿಗೆ ಯಾವುದೇ ಕಾರಣಿಕ ಹೊರಬಿದ್ದಿಲ್ಲ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications