ಕೊತ್ತನೂರು ಗ್ರಾಮದಲ್ಲಿ 250 ಕೋಟಿ ಆಸ್ತಿ ವಶ

ಬೆಂಗಳೂರು ದಕ್ಷಿಣ ತಾಲ್ಲೂಕು, ಉತ್ತರಹಳ್ಳಿ ಹೋಬಳಿ ಕೊತ್ತನೂರು ಗ್ರಾಮದ ಸರ್ವೆ ಸಂಖ್ಯೆ 87 ರಲ್ಲಿನ 57 ಎಕರೆ 11 ಗುಂಟೆ ಜಮೀನನ್ನು ಮತ್ತು ಜೆ.ಪಿ. ನಗರ 8ನೇ ಬಡಾವಣೆಯ ನಿರ್ಮಾಣಕ್ಕಾಗಿ 1988ರಲ್ಲಿ ಸ್ವಾಧೀನಪಡಿಸಿಕೊಳ್ಳಲು ಪ್ರಾಧಿಕಾರವು ಅಧಿಸೂಚನೆ ಹೊರಡಿಸಿತ್ತು. ಕೆಲವು ವ್ಯಕ್ತಿಗಳು ಜಮೀನಿನ ಮೇಲೆ ಹಕ್ಕು ಸಾಧಿಸಿ ನ್ಯಾಯಾಲಯಗಳಲ್ಲಿ ಮೊಕದ್ದಮೆ ಹೂಡಿದ್ದರು. ಈ ಪೈಕಿ 44 ಎಕರೆ 21 ಗುಂಟೆ ಪರವಾಗಿ ಬಿಡಿಎ ಪರ ತೀರ್ಪು ಬಂದಿರುವ ಹಿನ್ನೆಲೆಯಲ್ಲಿ ಇಂದು ಕಟ್ಟಡಗಳನ್ನು ಕೆಡವಿ ಆಸ್ತಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿತು. ಸುಮಾರು ಏಳು ಎಕರೆಯಲ್ಲಿ ಬೆಳಯಲಾಗಿದ್ದ ನೀಲಗಿರಿಯನ್ನು ಕತ್ತರಿಸಲಾಯಿತು.
ಉಳಿದ ಆಸ್ತಿಯಲ್ಲಿ ನ್ಯಾಯಾಲಯದ ಆದೇಶದಂತೆ, 10 ಎಕರೆ ಜಮೀನಿಗೆ ಮರು ಅಧಿಸೂಚನೆ ಹೊರಡಿಸಲು ಕ್ರಮಕೈಗೊಳ್ಳಲಾಗಿದೆ. ವಶಪಡಿಸಿಕೊಂಡಿರುವ ಜಮೀನಿನಲ್ಲಿ ಬಡಾವಣೆ ನಿರ್ಮಾಣ ಕಾರ್ಯವನ್ನು ಆರಂಭಿಸಲಾಗುವುದು. ಈ ಕಾರ್ಯಾಚರಣೆಯಲ್ಲಿ 20 ಜೆಸಿಬಿಗಳನ್ನು ಬಳಸಲಾಗಿತ್ತು. ಈ ಕಾರ್ಯಾಚರಣೆಯನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಭೂಸ್ವಾಧೀನಾಧಿಕಾರಗಳು, ಉಪ ಅರಣ್ಯ ಸಂರಕ್ಷಣಾಧಿಕಾರಿ ಅಭಿಯಂತರರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications