ಎದ್ದುಬಿದ್ದು ಗಹಗಹಿಸಿ ನಕ್ಕ ಮಾನ್ಯ ದೇವೇಗೌಡರು

ಈ ಎಲ್ಲ ಅವರ ಬಗೆಗಿನ ಅನಿಸಿಕೆಗಳನ್ನು ದೇವೇಗೌಡರು ಸುಳ್ಳುಮಾಡಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ನೋಡಿ ಗಹಗಹಿಸಿ ನಕ್ಕಿದ್ದಾರೆ, ಎದ್ದುಬಿದ್ದು ನಕ್ಕಿದ್ದಾರೆ. ಅವರ ಮೊಗದಲ್ಲಿ ಇಂಥ ಬಗೆಯ ನಗುವನ್ನು ನೋಡಿ ಯಾವ ಕಾಲವಾಗಿತ್ತೋ? ಅವರನ್ನು ಈ ರೀತಿ ನಗುವಲು ಕಾರಣವಾಗಿದ್ದು, ಬಿಜೆಪಿಯಲ್ಲಿ ಭುಗಿಲೆದ್ದಿರುವ ಆಂತರಿಕ ಭಿನ್ನಮತ. ಅದು ಜೋಕಲ್ಲ ಅಂತ ಅವರಿಗೆ ಖಂಡಿತ ಗೊತ್ತು.
ಜನಾರ್ಧನ ರೆಡ್ಡಿ ಮತ್ತು ಯಡಿಯೂರಪ್ಪ ನಡುವಿನ ಕದನ ಕುತೂಹಲ ತಾರಕಕ್ಕೇರಿರುವುದನ್ನು ಸೈಡ್ ವಿಂಗ್ ನಿಂದಲೇ ನೋಡುತ್ತಿದ್ದ ಜೆಡಿಎಸ್ ರಾಷ್ಟ್ರನಾಯಕ ದೇವೇಗೌಡ ಪ್ರಥಮ ಬಾರಿಗೆ ತಮ್ಮ ಅನಿಸಿಕೆಗಳನ್ನು ಹೊರಗೆಡಹಿದ್ದಾರೆ. ಎರಡು ಬಣಗಳ ನಡುವಿನ ತಿಕ್ಕಾಟ ಜೋರಾದಾಗ ಬೆಂಕಿ ತಾನಾಗಿಯೇ ಹತ್ತುತ್ತದೆ ಎಂದು ತಣ್ಣಗಿನ ಮಾತಲ್ಲಿ ಹೇಳಿದ್ದಾರೆ.
ಆಪರೇಷನ್ ಕಮಲ ಪ್ರಾರಂಭವಾದಾಗ ಮುಂಚೂಣಿಯಲ್ಲಿದ್ದಿದ್ದೇ ರೆಡ್ಡಿ ಬ್ರದರ್ಸ್. ಸರಕಾರ ಉಳಿಯಲು ಅವರೇ ಕಾರಣ. ಇಲ್ಲದಿದ್ದರೆ ಯಡಿಯೂರಪ್ಪನವರ ಸರಕಾರ ಮೈನರ್ ಗೌವರ್ನಮೆಂಟ್ ಎಂದು ವ್ಯಂಗ್ಯವಾಡಿದ್ದಾರೆ ಗೌಡರು. ಈಗ ರೆಡ್ಡಿಗಳ ವಿರುದ್ಧವೇ ಯಡಿಯೂರಪ್ಪ ಸೆಡ್ಡುಹೊಡೆದಿರುವುದು ಸಹಜವಾಗಿ ಅವರಿಂದ ಈ ಮಾತುಗಳನ್ನು ಹೊರಡಿಸಿದೆ ಮತ್ತು ನಗುವ ಸರದಿ ದೇವೇಗೌಡರದಾಗಿದೆ.
(ದಟ್ಸ್ ಕನ್ನಡ ವಾರ್ತೆ)
-
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
ವಿಶ್ವಕಪ್ ಕಿರೀಟದ ಹಿಂದೆ ದೈವಬಲ: ಕರಾವಳಿಯ ಅಳಿಯ ಸೂರ್ಯಕುಮಾರ್ ಯಾದವ್ ನಡೆಗೆ ಮೆಚ್ಚುಗೆಗಳ ಸುರಿಮಳೆ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
KSRTC: ಸಾರಿಗೆ ಲೋಕಕ್ಕೆ 'ಪಲ್ಲಕ್ಕಿ' ಮೆರುಗು: ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ 115 ಹೊಸ ಬಸ್ಗಳ ಲೋಕಾರ್ಪಣೆ -
ಬೆಂಗಳೂರಲ್ಲಿ ಗ್ಯಾಸ್ ಏಜೆನ್ಸಿಗಳ ಭರ್ಜರಿ ದಂಧೆ: ಸಿಲಿಂಡರ್ ಸಿಗದೇ ಗ್ರಾಹಕರು ಕಂಗಾಲು; ಕಾಳಸಂತೆಯಲ್ಲಿ ₹3,000ಕ್ಕೆ ಮಾರಾಟ -
LPG Gas: ಎಲ್ಪಿಜಿ ನಿಯಮಗಳಲ್ಲಿ ಭಾರೀ ಬದಲಾವಣೆ; ಗ್ರಾಹಕರು ದೂರು ನೀಡಲು ಸಹಾಯವಾಣಿ ಸಂಖ್ಯೆಗಳ ಬಿಡುಗಡೆ -
Gold Rate March 13: ಸತತ 3ನೇ ದಿನವೂ ಚಿನ್ನ - ಬೆಳ್ಳಿ ಬೆಲೆ ಭರ್ಜರಿ ಕುಸಿತ, ಎಷ್ಟಾಗಿದೆ ಇಂದಿನ ಬಂಗಾರದ ಬೆಲೆ -
Resort: ಕರ್ನಾಟಕದಲ್ಲಿ ಶುರುವಾಯ್ತು ರೆಸಾರ್ಟ್ ರಾಜಕೀಯ: ‘ಅವರು ನಮ್ಮ ಅತಿಥಿಗಳು’ ಎಂದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ -
Horoscope March 13: ಈ ರಾಶಿಯವರ ಬದುಕಲ್ಲಿ ಸಕಾರಾತ್ಮಕ ಬೆಳವಣಿಗೆ, ಅಧಿಕ ಲಾಭ; ದಿನ ಭವಿಷ್ಯ












Click it and Unblock the Notifications