• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನವದೆಹಲಿ : ರೆಹಮಾನ್ ಖಾನ್ ಕಾರು ಕಣ್ಮರೆ !

|

ನವದೆಹಲಿ, ಅ. 26 : ರಾಜ್ಯಸಭೆಯ ಉಪಸಭಾಪತಿ , ಕರ್ನಾಟಕದ ರೆಹಮಾನ್ ಖಾನ್ ಅವರ ಬೆಂಗಾವಲಿಗಿರುವ ಬೊಲೆರೋ ವಾಹನ ಕಳುವಾಗಿದೆ. ವಾಹನಕ್ಕೆ ನಿಯೋಜಿತನಾಗಿದ್ದ ಚಾಲಕನೇ ಅವರ ದೆಹಲಿ ನಿವಾಸದಿಂದ ಕಳವು ಮಾಡಿದ ಘಟನೆ ಸೋಮವಾರ (ಅ 26) ಮುಂಜಾನೆ ವರದಿಯಾಗಿದೆ. ಈ ಸಮಯದಲ್ಲಿ ಖಾನ್ ದೆಹಲಿಯಲ್ಲಿರಲಿಲ್ಲ.

ನಂ.28, ಅಕ್ಬರ್ ರಸ್ತೆಯಲ್ಲಿರುವ ಖಾನ್ ನಿವಾಸದಿಂದ ನಿರಂಜನ್ ಮೊಹಂತಿ ಎನ್ನುವ ಚಾಲಕ ಈ ಅಪರಾಧವೆಸಗಿದ್ದಾನೆ. ಮೊಹಂತಿಯನ್ನು ಬಂಧಿಸಿರುವ ಪೊಲೀಸರು ಕಳವಾಗಿರುವ ವಾಹನಕ್ಕಾಗಿ ಭಾರೀ ಹುಡುಕಾಟ ನಡೆಸುತ್ತಿದ್ದಾರೆ. ಈ ವಾಹನದಲ್ಲಿ ಭದ್ರತಾ ರೇಡಿಯೋ ಸಲಕರಣೆ ವ್ಯವಸ್ಥೆ ಇದ್ದು, ಬ್ಯಾರಿಕೇಡ್ ಮೂಲಕ ಸಂಸತ್ತಿಗೆ ನೇರವಾಗಿ ಪ್ರವೇಶಿಸಿಸಬಹುದಾಗಿರುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ನಾನು ತಡರಾತ್ರಿ ಕೆಲಸ ಮುಗಿಸಿ ವಾಹನವನ್ನು ಮನೆಗೆ ತೆಗೆದುಕೊಂಡು ಹೋಗಿದ್ದೆ, ಇಂದು ಮುಂಜಾನೆ ಈ ವಾಹನ ಕಳವಾಗಿತ್ತು ಎಂದು ಮೊಹಾಂತಿ ದೆಹಲಿ ಪೊಲೀಸರಿಗೆ ತಿಳಿಸಿದ್ದಾನೆ. ವಾಹನ ಕಳುವಾದ ವಿಷಯ ಪೊಲೀಸರಿಗೆ ತಿಳಿದ ಸ್ವಲ್ಪ ಹೊತ್ತಿನಲ್ಲೇ ವಾಹನದ ರೇಡಿಯೋ ಸಂಪರ್ಕ ಕಡಿದು ಹೋಗಿದೆ. ಈ ವಾಹನದ ಬಗ್ಗೆ ನಿಗಾಯಿಡಲು ಉತ್ತರಪ್ರದೇಶ ಮತ್ತು ಹರ್ಯಾಣ ಪೊಲೀಸರಿಗೆ ದೆಹಲಿ ಪೊಲೀಸರು ಸೂಚಿಸಿದ್ದಾರೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X