For Daily Alerts
ಸಾಹಸಿಗರಿಗೆ ಕೃತಕಗೋಡೆ ಹತ್ತುವ ಸ್ಪರ್ಧೆ
ಬೆಂಗಳೂರು ಅ. 26: ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ವತಿಯಿಂದ ನವೆಂಬರ್ 2 ರಿಂದ 4 ರವರೆಗೆ ರಾಜ್ಯ ಮಟ್ಟದ ಕೃತಕಗೋಡೆ ಹತ್ತುವ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಸ್ಫರ್ಧೆಯನ್ನು ಬೆಂಗಳೂರಿನ ಶ್ರೀ ಕಂಠೀರವ ಕ್ರೀಡಾಂಗಣದ ಆವರಣದಲ್ಲಿರುವ ಅಂತಾರಾಷ್ಟ್ರೀಯ ಮಟ್ಟದ ಕೃತಕಗೋಡೆಯಲ್ಲಿ ನಡೆಸಲಾಗುವುದು.
ಆಸಕ್ತ ಸ್ಪರ್ಧಾಳುಗಳ ನವೆಂಬರ್ 2 ರಂದು ಬೆಳಿಗ್ಗೆ 8 ರಿಂದ 9 ಗಂಟೆಯವರೆಗೆ ರೂ 50 ಶುಲ್ಕ ಹಾಗೂ ತಮ್ಮ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು ದೃಢೀಕೃತ ಜನ್ಮ ದಿನಾಂಕದ ಪ್ರಮಾಣ ಪತ್ರದೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು, ಸ್ಪರ್ಧೆಯಲ್ಲಿ ಭಾಗವಹಿಸುವ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಸ್ಪರ್ಧಿಗಳನ್ನು ಹೊರತುಪಡಿಸಿ. ಇತರ ಜಿಲ್ಲೆಗಳ ವಸತಿ ವ್ಯವಸ್ಥೆಯ ಅಗತ್ಯವಿರುವ ಸ್ಪರ್ಧಾಳುಗಳು ಆಯಾ ಜಿಲ್ಲೆಯ ಸಹಾಯಕ ನಿರ್ದೇಶಕರು, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಇವರಿಂದ ದೃಢೀಕೃತ ಪತ್ರವನ್ನು ಸಲ್ಲಿಸಲು ಸೂಚಿಸಿದೆ. ಸ್ಪರ್ಧಾಳುಗಳಿಗೆ ಪ್ರಯಾಣ ಭತ್ಯೆ ನೀಡಲಾಗುವುದಿಲ್ಲವೆಂದು ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯ ಪ್ರಕಟಣೆ ತಿಳಿಸಿದೆ.
(ದಟ್ಸ್ ಕನ್ನಡವಾರ್ತೆ)