ಮೇಯರ್ ಇನ್ ಕೌನ್ಸಿಲ್ ಕಾಯಿದೆ ಜಾರಿ: ಸುರೇಶ್

ಕರ್ನಾಟಕ ಮೇಯರ್ಸ್ ಫೋರಂ ಪದಾಧಿಕಾರಿಗಳು ನೀಡಿದ 11 ಅಂಶಗಳ ಮನವಿಯನ್ನು ಸ್ವೀಕರಿಸಿದ ನಂತರ ಅವರು ಮಾತನಾಡುತ್ತಿದ್ದರು. ಮೇಯರ್ ಇನ್ ಕೌನ್ಸಿಲ್ ಕಾಯಿದೆಯನ್ನು ಜಾರಿಗೆ ತರುವ ಹಾಗೂ ಮೇಯರ್ ಗಳ ಅಧಿಕಾರವಧಿ ಹೆಚ್ಚಿಸುವ ಕುರಿತು ಕೂಲಂಕಷವಾಗಿ ಚರ್ಚಿಸಲು ಡಿಸೆಂಬರ್ ಮೊದಲ ವಾರದಲ್ಲಿ ಕಾರ್ಯಾಗಾರ ನಡೆಸಲಾಗುವುದು. ಅದರಲ್ಲಿ ಮೇಯರ್ ಗಳು, ಆಯುಕ್ತರು, ಸಂಬಂಧಿಸಿದ ಹಿರಿಯ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಸುರೇಶಕುಮಾರ್ ವಿವರಿಸಿದರು.
ಮಹಾನಗರ ಪಾಲಿಕೆಗಳ ನಡುವೆ ಅಧಿಕಾರಿ ಮತ್ತು ನೌಕರರ ಅಂತರ ವರ್ಗಾವಣೆ ಕರಡು ನೀತಿ ಸಿದ್ಧವಾಗಿದ್ದು, ಪಾಲಿಕೆಗಳಿಂದ ಕರಡು ನೀತಿ ವಾಪಸ್ಸು ಬಂದ ನಂತರ ಅಂತಿಮ ರೂಪ ನೀಡಲಾಗುವುದು ಎಂದು ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications