ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಹನವಾಜ್ ಹುಸೇನ್‌ಗೆ ದಕ್ಕಿತು ವೀಸಾ!

|
Google Oneindia Kannada News

Shahnawaz Hussain
ನವದೆಹಲಿ, ಅ.20: ಮಾಜಿ ಕೇಂದ್ರ ಸಚಿವ, ಬಿಜೆಪಿ ಸಂಸದ ಶಹನವಾಜ್ ಹುಸೇನ್ ಅವರಿಗೆ ವೀಸಾ ನಿರಾಕರಿಸಿದ ವಿಷಯ ಹೊಸ ತಿರುವು ಪಡೆದುಕೊಂಡಿದ್ದು, ಪ್ರಧಾನಿ ಮನಮೋಹನ್ ಸಿಂಗ್ ಮಧ್ಯಸ್ಥಿಕೆಯಿಂದ ಸಂಸದ ಹುಸೇನ್ ಗೆ ವೀಸಾ ದೊರೆತಿದೆ. ಮಂಗಳವಾರ ನ್ಯೂಯಾರ್ಕ್‌ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಭಾಗವಹಿಸುವ ಸಂಸದೀಯ ನಿಯೋಗದೊಡನೆ ಹೊರಟಿದ್ದ ಹುಸೇನ್ ಒಂದು ದಿನ ತಡವಾಗಿ ಪ್ರಯಾಣಿಸಲಿದ್ದಾರೆ.

ಹುಸೇನ್ ಅವರ ವೀಸಾ ಪ್ರಸಂಗದ ಬಗ್ಗೆ ತಿಳಿದಬಿಜೆಪಿಯ ಹಿರಿಯ ಮುಖಂಡಎಲ್ ಕೆ ಅಡ್ವಾಣಿ ಆವರು ನಿನ್ನೆ ಪ್ರಧಾನಿ ಮನಮೋಹನ್ ಸಿಂಗ್ ಅವರೊಡನೆ ಮಾತನಾಡಿ, ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಮೆರಿಕ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ, ಕೂಡಲೇ ವೀಸಾ ದೊರೆಯುವಂತೆ ಮಾಡಿದ್ದಾರೆ ಎನ್ನಲಾಗಿದೆ.

"ಅಕ್ಟೋಬರ್ 20ರಿಂದ 31ರವರೆಗೆ ನಡೆಯುವ ಅಧಿವೇಶನದಲ್ಲಿ ಭಾಗವಹಿಸುವ ನಿಯೋಗದಲ್ಲಿ ನಾನೂ ಸದಸ್ಯನಾಗಿದ್ದೆ. ವಿದೇಶ ವ್ಯವಹಾರ ಸಚಿವಾ
ಲಯ ವೀಸಾಗಳಿಗೆ ಅರ್ಜಿ ಸಲ್ಲಿಸಿತ್ತು. ನಿಯೋಗದ ಇತರ ನಾಲ್ವರು ಸದಸ್ಯರಿಗೆ ವೀಸಾ ಲಭಿಸಿದ್ದು, ಅವರು ಸೋಮವಾರ ರಾತ್ರಿ ಪ್ರಯಾಣಿಸುತ್ತಿದ್ದಾರೆ. ಆಡಳಿತಾ ತ್ಮಕ ಪ್ರಕ್ರಿಯೆಯಿಂದ ನನಗೆ ವೀಸಾ ಲಭಿಸುವುದು ವಿಳಂಬವಾಗಿದೆ" ಎಂದು ಹುಸೇನ್ ತಿಳಿಸಿದ್ದಾರೆ.

ನ್ಯೂಯಾರ್ಕ್ ಗೆ ಹೊರಟಿರುವ ನಿಯೋಗದಲ್ಲಿ ಕಾಂಗ್ರೆಸ್ಸಿನ ಗಿರಿಜಾ ವ್ಯಾಸ್, ಸಂಜಯ್ ನಿರುಪಮ್, ಜೆಡಿಯುನ ಅಲಿ ಅನ್ವರ್ ಹಾಗೂ ಡಿಎಂಕೆಯ ಟಿಕೆಎಸ್ ಇಳಂಗೋವನ್ ಇದ್ದಾರೆ.ಕೇಂದ್ರದ ಕಲ್ಲಿದ್ದಲು ಖಾತೆ ಸಚಿವ, ನಾಗರೀಕ ವಿಮಾನಯಾನ ಸಚಿವ ಹಾಗೂ ಜವಳಿ ಖಾತೆ ಸಚಿವನಾಗಿದ್ದಾಗ ನ್ಯೂಯಾರ್ಕ್ ಗೆ ಭೇಟಿ ಕೊಟ್ಟಿದ್ದೆ. ಆದರೆ, ಈಗ ವಿಳಂಬಕ್ಕೆ ಕಾರಣ ತಿಳಿಯುತ್ತಿಲ್ಲ ಎಂದು ಹುಸೇನ್ ಹೇಳಿದ್ದಾರೆ.

ಈ ಮುಂಚೆ ಬಾಲಿವುಡ್ ನಟ ಶಾರುಖ್ ಖಾನ್ ಅವರು ಅಮೆರಿಕ ಭೇಟಿ ಸಂದರ್ಭದಲ್ಲಿ ತೀವ್ರವಾದ ತಪಾಸಣೆ ನಡೆಸಿ, ಮುಜುಗರಕ್ಕೀಡುಮಾಡಿದ ಘಟನೆ ನಡೆದಿತ್ತು. ಇತ್ತೀಚೆಗೆ ಸಾಕರ್ ಆಟಗಾರ ಡೇವಿಡ್ ಬೇಕಮ್ ಕೂಡ ಈ ರೀತಿಯ ತೊಂದರೆ ಅನುಭವಿಸಿದ್ದರು.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X