ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರಾಠಿಗರ ಸಮ್ಮೇಳನಕ್ಕೆ ಕರವೇ ವಿರೋಧ

|
Google Oneindia Kannada News

 Narayana gowda
ಬೆಂಗಳೂರು, ಅ.20: ಬೆಳಗಾವಿಯಲ್ಲಿ ಅ.26 ರಂದು ಎಂಇಎಸ್ ನವರು ನಡೆಸಲು ಉದ್ದೇಶಿಸಿರುವ ಮಹಾಮೇಳವಕ್ಕೆ ಅನುಮತಿ ನೀಡಿರುವುದನ್ನು ಹಿಂದಕ್ಕೆ ಪಡೆಯಬೇಕು ಇಲ್ಲದಿದ್ದರೆ ಪರಿಣಾಮ ಕೆಟ್ಟದಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರು ರಾಜ್ಯ ಬಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕರವೇಯ ನಿಲುವಿಗೆ ಬೆಂಬಲ ಸೂಚಿಸಿರುವ ವಾಟಾಳ್ ನಾಗರಾಜ್ ಅವರು, ರಾಜ್ಯವ್ಯಾಪ್ತಿ ಪ್ರತಿಭಟನೆ ನಡೆಸುವ ಬೆದರಿಕೆ ಒಡ್ಡಿದ್ದಾರೆ

ಗಡಿಭಾಗದ ಅಲ್ಪಸಂಖ್ಯಾತರ ಓಲೈಕೆಗೆ ಮುಂದಾಗಿರುವ ಸರ್ಕಾರದ ಈ ಕ್ರಮ ಖಂಡನಾರ್ಹ. ರಾಜ್ಯ ನೆರೆ ಹಾವಳಿಯಿಂದ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಸರ್ಕಾರ ಮಹಾಮೇಳವಕ್ಕೆ ಅನುಮತಿ ನೀಡಿರುವುದು ಎಷ್ಟು ಸಮಂಜಸ. ಬೆಳಗಾವಿಯಲ್ಲಿ ನಡೆಯಬೇಕಿದ್ದ ವಿಶೇಷ ಅಧಿವೇಶನವನ್ನು ಮಹಾರಾಷ್ಟ್ರ ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಲಾಯಿತು. ನೆರೆ ಹಾವಳಿ ಹಿನ್ನೆಲೆಯಲ್ಲಿ ವಿಶ್ವ ಕನ್ನಡ ಸಮ್ಮೇಳನವನ್ನು ಮುಂದೂಡಿದ ಸರ್ಕಾರ, ಇದೇ 26 ರಂದು ನಡೆಸಲು ಉದ್ದೇಶಿಸಿರುವ ಮರಾಠಿ ಮಹಾಮೇಳಕ್ಕೆ ಅನುಮತಿ ನೀಡಿ ನಾಡಿನ ಎಲ್ಲಾ ಕನ್ನಡಿಗರನ್ನು ಕೆರಳಿಸಿದೆ.

ಕರ್ನಾಟಕ , ಕನ್ನಡ ಎಂದರೆ ಕಿಡಿಕಾರುವ ಮಹಾರಾಷ್ಟ್ರದ ರಾಜಕಾರಣಿಗಳ ಪ್ರಭಾವಿ ಭಾಷಣಗಳು ಬಿಜೆಪಿ ಸರ್ಕಾರದ ಕಿವಿಗಳನ್ನು ತಟ್ಟಿಲ್ಲ. ಶ್ರೀಲಂಕಾದ ತಮಿಳಿರ ಪರ ಬೆಂಗಳೂರಿನ ಶ್ರೀರಾಮಪುರದಲ್ಲಿ ತಮಿಳು ಸಂಘಟನೆಗಳು ನಡೆಸಿದ ಎಲ್ ಟಿಟಿಇ ಬೆಂಬಲಿತ ಸಭೆ ರಾಷ್ಟ್ರದ್ರೋಹದ ಕೆಲಸ ಎನಿಸುವುದಿಲ್ಲ. ಅಲ್ಪಸಂಖ್ಯಾತರನ್ನು ಓಲೈಸಲು ಪ್ರತಿಮೆಗಳ ಅನಾವರಣ, ವೋಟ್ ಬ್ಯಾಂಕ್ ರಾಜಕಾರಣದಲ್ಲಿ ತೊಡಗಿರುವ ಬಿಜೆಪಿ ಸರ್ಕಾರ ಕನ್ನಡಿಗರ ಹಿತಾಸಕ್ತಿಗೆ ಮಾರಕವಾಗಿದೆ ಎಂದು ನಾರಾಯಣ ಗೌಡ ಕಿಡಿ ಕಾರಿದರು.

ರಾಜ್ಯೋತ್ಸವ ಸರಳವಾಗಿ ಆಚರಣೆ
ನೆರೆ ಹಾವಳಿಯ ಹಿನ್ನೆಲೆಯಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ಸರಳವಾಗಿ ಆಚರಿಸುವಂತೆ ಕರವೇ ಅಧ್ಯಕ್ಷರು ಕರೆ ನೀಡಿದರು. ಇದಕ್ಕೆ ಪೂರಕವಾಗಿ ರಾಷ್ಟ್ರಕವಿ ಜಿಎಸ್ ಶಿವರುದ್ರಪ್ಪ ಅವರು ದನಿಗೂಡಿಸಿದ್ದು, ಕನ್ನಡ ಹಬ್ಬವನ್ನು ಸರಳವಾಗಿ ಆಚರಿಸುವ ನಿರ್ಧಾರಕ್ಕೆ ಬಂದಿರುವ ಸಂದರ್ಭದಲ್ಲಿ, ಮರಾಠಿಗರ ಮೇಳಕ್ಕೆ ಅನುಮತಿ ನೀಡುವುದು ತರವಲ್ಲ ಎಂದರು.

(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X