ಬಿಜೆಪಿಗೆ ಆರ್ಎಸ್ಎಸ್ ನಿಂದ ಗುದ್ದು

ರಾಷ್ಟ್ರದ ಹಿತಾಸಕ್ತಿಗೆ ಅನುಗುಣವಾಗಿ ಪಕ್ಷದ ನೀತಿ ಮತ್ತು ಕಾರ್ಯಕ್ರಮದ ಆಧಾರದ ಮೇಲೆ ಯಾವುದೇ ರಾಜಕೀಯ ಪಕ್ಷವನ್ನು ಬೇಕಾದರೂ ಬೆಂಬಲಿಸಬಹುದು ಬಿಜೆಪಿಯನ್ನು ಮಾತ್ರ ಬೆಂಬಲಿಸಬೇಕೆಂದೇನಿಲ್ಲ ಎಂದು ಸಂಘದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಕಾರ್ಯಕರ್ತರಿಗೆ ಭಾಗವತ್ ಹೇಳಿದರು ಎನ್ನಲಾಗಿದೆ. ಆದರೆ ಆರ್ಎಸ್ಎಸ್ ಇದನ್ನು ನಿರಾಕರಿಸಿದೆ.
ಎರಡು ದಿನಗಳ ಹಿಂದೆಯಷ್ಟೇ ಸಂಘ ರಾಹುಲ್ ಗಾಂಧಿಯವರ ಗ್ರಾಮವಾಸ್ತವ್ಯ ಮತ್ತು ಚಿದಂಬರಂ ಅವರು ನಕ್ಸಲರನ್ನು ನಿಯಂತ್ರಿಸುವ ಕಾರ್ಯತಂತ್ರದ ಬಗ್ಗೆ ಹೊಗಳಿಕೆಯ ಮಾತನಾಡಿತ್ತು. ಅದಕ್ಕೂ ಮುನ್ನ ಬಿಜೆಪಿಯ ನಾಯಕತ್ವ ಬದಲಿಸಲೂ ಮುಂದಾಗಿತ್ತು. ಮೂರು ರಾಜ್ಯಗಳ ಚುನಾವಣೆಯ ಹೊಸ್ತಿಲಿನಲ್ಲಿ ಭಾಗವತ್ ಅವರ ಹೇಳಿಕೆ ಮಹತ್ವ ಪಡೆದಿದೆ.
(ಏಜನ್ಸೀಸ್)












Click it and Unblock the Notifications