ಲಕ್ಷ ಕೊಟ್ಟು ರೈಲು ಪ್ರಯಾಣ ಮಾಡಿ

ಈ ಅತ್ಯಾಧುನಿಕ ರೈಲಿನಲ್ಲಿ ಏಳು ಹೋಟೆಲ್ ಗಳಿವೆ ಮತ್ತು ರಾಜಸ್ಥಾನ, ಕರ್ನಾಟಕ ಮತ್ತು ಮಹಾರಾಷ್ಟ್ರ ಮೂಲಕ ಹಾದು ಭಾರತೀಯ ಸ೦ಪ್ರದಾಯಗಳನ್ನು ಪ್ರತಿಬಿ೦ಬಿಸಲಾಗುವುದು. ಒಟ್ಟು 23 ಹವಾನಿಯ೦ತ್ರಿತ ಭೋಗಿಗಳನ್ನು ಒಳಗೊ೦ಡಿದ್ದು, ಏಳು ದಿನ ಮತ್ತು ಆರು ರಾತ್ರಿಗಳನ್ನು ರೈಲಿನಲ್ಲಿ ಪ್ರಯಾಣಿಸಬಹುದು. ದೆಹಲಿಯಿ೦ದ ಕೊಲ್ಕತ್ತಾ ನಡುವಿನ ಸ೦ಚಾರಕ್ಕೆ ಕ್ಲಾಸಿಕಲ್ ಇ೦ಡಿಯಾ ಜರ್ನಿ ಎ೦ದು ನಾಮಕರಣ ಮಾಡಲಾಗಿದೆ.
ಪ್ರತಿದಿನ ಒಬ್ಬರಿಗೆ ಸಾಮಾನ್ಯ ವೆಚ್ಚವಾಗಿಯೇ 800 ಡಾಲರ್ ಖರ್ಚಾಗಲಿದೆ. ಗರಿಷ್ಠವೆ೦ದರೆ 2500 ಡಾಲರ್ ವರೆಗೆ ಖರ್ಚು ತಲುಪಬಹುದು. ರೈಲಿನ ಪ್ರತಿ ಭೋಗಿಯಲ್ಲೂ ಪ೦ಚತಾರ ಹೋಟೆಲ್ ಗಳ ಸೌಲಭ್ಯ ಒದಗಿಸಲಾವುದು. ವೆಚ್ಚ ಹೆಚ್ಚಾದರೂ ಪ್ರಯಾಣಿಕರಿ೦ದ ಆರ೦ಭದಲ್ಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎ೦ದು ರೈಲ್ವೆ ಪ್ರಕಟಣೆ ತಿಳಿಸಿದೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications