ನೈಸ್ ಚರ್ಚೆಗೆ ಅಧಿವೇಶನ : ಗೌಡರ ಗಡುವು

ಪಕ್ಷದ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡುತ್ತಿದ್ದರು, ಬಿಎಂಐಸಿ ಯೋಜನೆಯ ಎಲ್ಲ ಅಕ್ರಮ ವಂಚನೆಗಳಿಗೆ ಅನುಮೋದನೆ ನೀಡುವ ಮೂಲಕ ಯಡಿಯೂರಪ್ಪ ಸರಕಾರ ಯೋಜನೆಗೆ ಅಧಿಕೃತ ಮುದ್ರೆಯೊತ್ತಿದೆ ಎಂದು ಗೌಡರು ಗಂಭೀರ ಆರೋಪ ಮಾಡಿದರು. ಬಡರೈತರು ಹಾಗೂ ರಾಜ್ಯದ ಆಸ್ತಿ ರಕ್ಷಣೆಯ ಉದ್ದೇಶದಿಂದ ಹೋರಾಟ ನಡೆಸಲಾಗುತ್ತಿದೆ ಎಂದರು.
ಮೂಲ ಒಡಂಬಡಿಕೆಯ ಮೀತಿ, ಷರತ್ತು ಸಡಿಲಗೊಳಿಸಿ ಮೀತಿ ಮೀರಿದ ಹಕ್ಕು ಬಾಧ್ಯತೆಗಳನ್ನು ನೈಸ್ ಸಂಸ್ಥೆಗೆ ನೀಡಲಾಗಿದೆ. 20,193 ಎಕರೆ ಭೂಮಿಯಲ್ಲಿ 6999 ಎಕರೆ ಟೋಲ್ ರಸ್ತೆಯಾಗಿದ್ದು, ಉಳಿದ 14,255 ಎಕರೆ ಭೂಮಿಯನ್ನು ಸರಕಾರಕ್ಕೆ ವಾಪಸ್ ನೀಡಬೇಕು. ಆದರೆ, ಅಭಿವೃದ್ಧಿಪಡಿಸಿದ ಮೇಲೆ ಮಾರಲು ಅವಕಾಶ ಕಲ್ಪಿಸಲಾಗಿದೆ. ಇದು ಹರ್ಷದ್ ಮೆಹ್ತಾನ ಷೇರು ಹಗರಣ, ಸತ್ಯಂ ಕಂಪನಿಯ ಗೋಲ್ ಮಾಲ್ ಪ್ರಕರಣಕ್ಕಿಂತ ದೊಡ್ಡದು ಎಂದು ಎಂದು ಗೌಡರು ಕಿಡಿಕಾರಿದರು.
ಬಿಎಂಐಸಿ ಮೂಲಕ ಒಡಂಬಡಿಕೆಯ ತಿರುಳನ್ನೇ ಸ್ಪಷ್ಟವಾಗಿ ತಿರುಚಲಾಗಿದೆ. ನೈಸ್ ಸಂಸ್ಥೆ ಸ್ವೇಚ್ಛಾಚಾರದಿಂದ ಭೂಮಿ ಬಳಸಲು ಅವಕಾಶ ಮಾಡಿಕೊಡಲಾಗಿದೆ ಎಂದುಪ ಅವರು ಆರೋಪಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications