ಶ್ರೀಲಂಕಾ ಪೊಲೀಸ್ ಪಡೆಗೆ ತಮಿಳರು?
ಕೊಲೊಂಬೊ,
ಸೆ.30: ತಮಿಳರನ್ನು ತನ್ನ ಪೊಲೀಸ್ ಪಡೆಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಶ್ರೀಲಂಕಾ ಸರ್ಕಾರ ಮಂಗಳವಾರ ಘೋಷಿಸಿದೆ. ಉತ್ತರ ಜಾಫ್ನಾ ಪ್ರಾಂತ್ಯದಲ್ಲಿ ಪೊಲೀಸ್ ಪೇದೆ ಹುದ್ದೆಗೆ ಉತ್ತಮ ಪ್ರತಿಕ್ರಿಯೆ ಬಂದಿದ್ದು ಅನೇಕ ತಮಿಳರು ಅರ್ಜಿ ಸಲ್ಲಿಸಿದ್ದಾರೆ ಎಂದು ಪೊಲೀಸ್ ವಕ್ತಾರ ನಿಮಲ್ ಮೆದಿವಾಕ ಹೇಳಿದ್ದಾರೆ. id="toptextpromo">ಸುಮಾರು
500 ಹುದ್ದೆಗಳಿಗೆ 6 ಸಾವಿರಕ್ಕೂ ಹೆಚ್ಚು ಅರ್ಜಿಗಳು ಬಂದಿವೆ. 1979 ರ ನಂತರ ತಮಿಳರ ಜೊತೆ ಕಾಳಗದಿಂದ ಈ ಪ್ರಾಂತ್ಯದಲ್ಲಿ ನೇಮಕಾತಿ ಸಾಧ್ಯವಿರಲಿಲ್ಲ. ಕಳೆದ ಮೇ ತಿಂಗಳಿನಲ್ಲಿ ಎಲ್ ಟಿಟಿಇ ಸರ್ವಪತನವಾದ ಮೇಲೆ ತಮಿಳು ಬಂಡಾಯಗಾರರಿಗೂ ಪೊಲೀಸ್ ಪಡೆಯಲ್ಲಿ ನೇಮಕಾತಿ ಅವಕಾಶವನ್ನು ಶ್ರೀಲಂಕಾ ಸರ್ಕಾರ ಕಲ್ಪಿಸಿದೆ ಎಂದು ಮೆದಿವಾಕಾ ಹೇಳಿದರು. id='are-slot-1' class='oiad oi-axt oiadv'> id='top-searched-articles'>1980ರ
ಎಲ್ ಟಿಟಿಇ ಬಂಡಾಯದ ಕಾರಣ ತಮಿಳರು ಹೆಚ್ಚಾಗಿರುವ ಭಾಗಗಳಲ್ಲಿ ಪೊಲೀಸ್ ಪಡೆಗೆ ಸಿಂಹಳೀಯರನ್ನು ನೇಮಕ ಮಾಡಲಾಗುತ್ತಿತ್ತು. ತಮಿಳರು ಅಲ್ಪಸಂಖ್ಯಾತರಾಗಿರುವ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಾ ಬಂದಿದ್ದರು.(ಏಜೆನ್ಸೀಸ್)












Click it and Unblock the Notifications