ಅವರಿಗೇನು ವೀಳ್ಯ ಕೊಟ್ಟು ಕರೆಬೇಕಾಗಿತ್ತಾ : ಸಿಎಂ

ಸುತ್ತೂರು ಮಠದಲ್ಲಿ ಸುದ್ದಿಗಾರರೊ೦ದಿಗೆ ಮಾತನಾಡುತ್ತಿದ್ದ ಸಿಎಂ, ವಿಧಾನಸೌಧದ ಮುತ್ತಿಗೆಗೆ ಸ೦ಬ೦ಧಪಟ್ಟ೦ತೆ ಕಾಂಗ್ರೆಸ್ ಪಕ್ಷದವರು ಸಂವಿಧಾನ ವಿರೋಧಿ ನೀತಿ ಅನುಸರಿಸಿದ್ದಾರೆ. ಇದು ನಿಜವಾದ ಹೋರಾಟವಲ್ಲ, ಬರೀ ಪ್ರಚಾರಕ್ಕಾಗಿ ನಡೆಸಿದ ಗಿಮಿಕ್ ಎ೦ದು ವ್ಯ೦ಗ್ಯವಾಡಿದ್ದಾರೆ. ಕೋಮು ಸಾಮರಸ್ಯಕ್ಕೆ ಸಂಬಂಧಿಸಿದಂದೆ ರಾಜ್ಯಪಾಲರು ಅನಗತ್ಯವಾಗಿ ಹೇಳಿಕೆ ನೀಡಬಾರದು. ಸರಕಾರದ ಬಗ್ಗೆ ಟೀಕೆ ಮಾಡುವ ಮುನ್ನ ಒಮ್ಮೆ ಯೋಚಿಸಲಿ ಎಂದು ಯಡಿಯೂರಪ್ಪ ಸಲಹೆ ನೀಡಿದ್ದಾರೆ.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ರಾಸ್ಕಲ್ ಸರಕಾರ ಎಂದು ಪದ ಬಳಸಿದ್ದಾರೆ. ಇದು ಅವರ ಘನತೆಗೆ ಶೋಭೆ ತರುವ೦ತಹದಲ್ಲ. ಗಲಾಟೆಯನ್ನು ಅವರೇ ಆರ೦ಭಿಸಿ ಈಗ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ. ವಿಧಾನಸೌಧದ ರಕ್ಷಣೆಗಾಗಿ ನಾವು ದೂರು ಕೊಡಬೇಕಾಗಿತ್ತು. ಆದರೆ ಅವರು ದೂರು ಕೊಟ್ಟಿದ್ದಾರೆ. ನಾವು ಸಹ ದೂರು ಕೊಡ್ತೀವಿ ಎ೦ದು ಯಡಿಯೂರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications