ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೆಬ್ ಟಿವಿ ಆರಂಭಿಸಿದ ವಿಎಚ್ ಪಿ

By Staff
|
Google Oneindia Kannada News

Ashok Singhal
ಚೆನ್ನೈ ಸೆ 21 : ಹಿಂದೂ ಧರ್ಮವನ್ನು ಪ್ರಚಾರ ಪಡಿಸುವ ಉದ್ದೇಶದಿಂದ ವಿಶ್ವ ಹಿಂದೂ ಪರಿಷತ್ ತನ್ನ ಅಂತರ್ಜಾಲ ಟಿವಿಯನ್ನು www.vhtv.in ಆರಂಭಿಸಿದೆ. ಹಿಂದೂ ಧರ್ಮದ ಕುರಿತಾದ ವಿವರಗಳು ಮತ್ತು ಅದರ ಮೌಲ್ಯಗಳ ಅರ್ಥ ವಿವರಣೆಯು ಈ ಅಂತರ್ಜಾಲದಲ್ಲಿ ಲಭ್ಯವಿದೆ. ದೀಪಾವಳಿಯ ಸಮಯದಲ್ಲಿ ಈ ವೆಬ್ ಟಿವಿ ಪೂರ್ಣ ಪ್ರಮಾಣದಲ್ಲಿ ಬಳಕೆಗೆ ಸಿಗಲಿದೆ ಎಂದು ವೆಬ್ ಟಿವಿಯನ್ನು ಉದ್ಘಾಟಿಸಿ ಮಾತನಾಡುತ್ತಾ ವಿ ಎಚ್ ಪಿ ಅಂತಾರಾಷ್ಟ್ರೀಯ ಅಧ್ಯಕ್ಷ ಅಶೋಕ್ ಸಿಂಘಾಲ್ ಹೇಳಿದ್ದಾರೆ.

ಹಿಂದೂ ಧರ್ಮ ಸಹಿಷ್ಣುತೆಯ ಧರ್ಮವಾಗಿದೆ. ಪ್ರೀತಿ ಮತ್ತು ಮಮತೆಯನ್ನು ಪ್ರತಿಪಾದಿಸುತ್ತಿರುವ ಹಿಂದೂ ದರ್ಮದ ವಿರುದ್ಧ ಅಪಪ್ರಚಾರ ನಡೆಸಲಾಗುತ್ತಿದೆ. ನಮ್ಮ ಧರ್ಮದ ಮೌಲ್ಯಗಳನ್ನು ಸರಿಯಾದ ರೀತಿಯಲ್ಲಿ ತಿಳಿಸುವ ಉದ್ದೇಶದಿಂದ ಈ ವೆಬ್ ಟಿವಿಯನ್ನು ಆರಂಭಿಸಲಾಗಿದೆ ಎಂದು ಸಿಂಘಾಲ್ ಹೇಳಿದ್ದಾರೆ.

ಚೀನಾ ನಮ್ಮ ಗಡಿಯನ್ನು ಅತಿಕ್ರಮಿಸಿದ್ದರೂ ಕೇಂದ್ರ ಸರಕಾರ ದೇಶದ ಗಡಿಯನ್ನು ರಕ್ಷಿಸುವಲ್ಲಿ ವಿಫಲವಾಗಿದೆ. ಚೀನಾದ ವಿರುದ್ದ ಸೂಕ್ತ ಕ್ರಮ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದೆ ಎಂದು ಸಿಂಘಾಲ್ ವಿಷಾದ ವ್ಯಕ್ತ ಪಡಿಸಿದ್ದಾರೆ. ಗಂಗಾ ನದಿಯನ್ನು ಅವಲಂಬಿಸಿ ಕೇಂದ್ರ ಸರಕಾರ ವಿದ್ಯುತ್ ಯೋಜನೆ ಕೈಗೊಳ್ಳಲು ಮುಂದಾಗಿದೆ, ಇದನ್ನು ನಾವು ವಿರೋಧಿಸುತ್ತೇವೆ. ಈ ಯೋಜನೆಯನ್ನು ತಡೆಯದಿದ್ದಲ್ಲಿ ಗಂಗಾ ನದಿ ಕೆಲವೇ ತಿಂಗಳಲ್ಲಿ ಸಾಯುವುದು ನಿಶ್ಚಿತ ಎಂದು ಈ ಸಂದರ್ಭದಲ್ಲಿ ಹೇಳಿಕೆ ನೀಡಿದ್ದಾರೆ.

(ಏಜೆನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X