ಎಚ್1ಎನ್1 : ಮಾಹಿತಿ, ಉಚಿತ ಮಾಸ್ಕ್ ಬೇಕೆ

Indus Westside hospital creating awarness about H1N1 Flu
ಬೆಂಗಳೂರು, ಸೆ. 17 : ಕಳೆದೆರಡು ತಿಂಗಳಿನಿಂದ ರಾಜ್ಯ ಸೇರಿದಂತೆ ದೇಶದಲ್ಲಿ ಮರಣಮೃದಂಗ ಬಾರಿಸುತ್ತಿರುವ ಎಚ್1ಎನ್1 ಮಾರಿ ತಡೆಗಟ್ಟಲು ಸರಕಾರ ಸಾಕಷ್ಟು ಪ್ರಯತ್ನಪಟ್ಟರೂ ಸಾವುಗಳ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ನಿಟ್ಟಿನಲ್ಲಿ ಎಚ್1ಎನ್1 ಸೋಂಕಿನಿಂದ ಜನರನ್ನು ರಕ್ಷಿಸಲು ನಗರದ ಕೆಂಗೇರಿ ಬಳಿ ಜ್ಞಾನಭಾರತಿ ಲೇಔಟ್ ನಲ್ಲಿರುವ ಇಂಡಿಸ್ ವೆಸ್ಟ್ ಸೈಡ್ ಆಸ್ಪತ್ರೆ ಮುಂದಾಗಿದ್ದು, ಉಚಿತವಾಗಿ ಮುಖಕವಚ (ಮಾಸ್ಕ್) ವಿತರಣೆ ಮಾಡಲು ನಿರ್ಧರಿಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಂಡಿಸ್ ವೆಸ್ಟ್ ಸೈಡ್ ಆಸ್ಪತ್ರೆಯ ಚೇರಮನ್ ಡಾ ಅಶೋಕ್ ಜೈನ್, ಎಚ್1ಎನ್1 ಸೋಂಕು ವ್ಯಾಪಕವಾಗುತ್ತಿದ್ದು. ಸಾವುಗಳ ಸಂಖ್ಯೆ ಮುಂದುವರೆದಿದೆ. ಈ ಸೋಂಕಿನಿಂದ ಜನರನ್ನು ರಕ್ಷಿಸಲು ಆಸ್ಪತ್ರೆ ನಿರ್ಧರಿಸಿದ್ದು. ನಗರದಲ್ಲಿ ಕ್ಲಿನಿಕ್, ನರ್ಸಿಂಗ್ ಹೋಮ್, ಶಾಲೆಗಳು, ಬ್ಯಾಂಕ್ ಗಳು, ಮಾಲ್ ಗಳು, ಕೈಗಾರಿಕೆ ಸೇರಿದಂತೆ ಅಗತ್ಯ ಸ್ಥಳಗಳಲ್ಲಿ ಉಚಿತವಾಗಿ ಮಾಸ್ಕ್ ವಿತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಕೆಂಗೇರಿ ಬಳಿಯ ಜ್ಞಾನಭಾರತಿ ಲೇಔಟ್ ನಲ್ಲಿ 300 ಬೆಡ್ ಗಳುಳ್ಳ ಸುಸಜ್ಜಿತ ಇಂಡಸ್ ವೆಸ್ಟ್ ಸೈಡ್ ಆಸ್ಪತ್ರೆಯಿದೆ. ಎಚ್1ಎನ್1 ಸೋಂಕಿನ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಬೇಕಿದ್ದಲ್ಲಿ ದೂರವಾಣಿ 99806 83926 ಸಂಪರ್ಕಿಸಿ ಅಥವಾ ಮಾಸ್ಕ್ ಬೇಕಿದ್ದಲ್ಲಿ ಖುದ್ದಾಗಿ ಆಸ್ಪತ್ರೆ ಭೇಟಿ ನೀಡಿ ಸಲಹೆ ಸೂಚನೆಗಳನ್ನು ಪಡೆದುಕೊಳ್ಳಬಹುದು ಎಂದು ಡಾ ಜೈನ್ ತಿಳಿಸಿದ್ದಾರೆ.

ಎಚ್1ಎನ್1 ಸೋಂಕಿಗೆ ಬಲಿಯಾದವರ ಸಂಖ್ಯೆ ದೇಶದಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ. ಈವರೆಗೊ ರಾಜ್ಯದಲ್ಲಿ 73 ಮಂದಿ ಈ ಮಾರಿಗೆ ಬಲಿಯಾಗಿದ್ದಾರೆ. ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 300 ದಾಟಿದೆ. ಅಲ್ಲದೇ ಅನೇಕ ಮಂದಿ ಸೋಂಕಿನಿಂದ ಗುಣಮುಖರಾಗಿರುವ ಉದಾಹರಣೆಗಳೂ ಇವೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+