ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಕ್ಕವರ ಹೆಸರಿನಲ್ಲಿ ಪ್ರಮಾಣವಚನ ಏಕೆ ?

By Staff
|
Google Oneindia Kannada News

K Raju
ಬೆಂಗಳೂರು, ಸೆ. 11 : ನಮ್ಮ ಸಂವಿಧಾನದ ಅನುಸೂಚಿ ಮೂರರಲ್ಲಿ ಜನಪ್ರತಿನಿಧಿಗಳು ಯಾವ ರೀತಿಯಲ್ಲಿ ಪ್ರಮಾಣವಚನ ಸ್ವೀಕರಿಸಬೇಕು ಎನ್ನುವುದಕ್ಕೆ ಸ್ಪಷ್ಟ ನಿರ್ದೇಶನವಿದೆ. 'ನಿಷ್ಠೆಯಿಂದ ಭಗವಂತನ ಅಥವಾ ಸತ್ಯದ ಮೇಲೆ ಪ್ರಮಾಣ ಮಾಡಿ ಭಾರತದ ಸಾರ್ವಭೌಮತ್ವ ಮತ್ತು ಏಕತೆಯನ್ನು ಎತ್ತಿ ಹಿಡಿಯುತ್ತೇನೆ' ಎಂದು ಪ್ರತಿಜ್ಞಾವಿಧಿ ಸ್ವೀಕರಿಸಬೇಕು ಎಂದು ಸ್ಪಷ್ಟವಾಗಿ ಹೇಳಿದೆ. ಹೀಗೆ ಸೂಚಿಸಿರುವ ಮಾದರಿ ಪ್ರಮಾಣವಚನಕ್ಕೆ ಯಾವುದೇ ಹೆಚ್ಚುವರಿ ಪದವನ್ನು ಸೇರಿಸುವ ಅಥವಾ ಕೈಬಿಡುವ ಅಧಿಕಾರ ಯಾರಿಗೂ ಇಲ್ಲ.

ಸಂವಿಧಾನ ಬದ್ಧವಾಗಿ ಪ್ರಮಾಣವಚನ ಸ್ವೀಕರಿಸದ ಯಾವ ಜನಪ್ರತಿನಿಧಿಗಳೂ ಒಂದು ಕ್ಷಣವೂ ವಿಧಾನಸಭೆ, ವಿಧಾನಪರಿಷತ್ ಆಸನದಲ್ಲಿ ಕೂರುವ ಅಧಿಕಾರ ಇರುವುದಿಲ್ಲ ಮತ್ತು ನಿಯಮಾನುಸಾರ ಪ್ರತಿಜ್ಞಾವಿಧಿ ಸ್ವೀಕರಿಸುವ ತನಕ ಪರಿಚ್ಛೇದ 193ರ ಅನ್ವಯ ದಂಡದ ರೂಪದಲ್ಲಿ ದಿನವೊಂದಕ್ಕೆ 500 ರೂಪಾಯಿಗಳಂತೆ ದಂಡವನ್ನು ಸರಕಾರಕ್ಕೆ ಪಾವತಿಸಬೇಕು.

ನಮ್ಮ ರಾಜ್ಯದ ಹೆಚ್ಚಿನ ಶಾಸಕರು ಮತ್ತು ಮಂತ್ರಿಗಳು ಸಂವಿಧಾನ ಬದ್ಧವಾಗಿ ಪ್ರಮಾಣವಚನ ಸ್ವೀಕರಿಸಲಿಲ್ಲ. ಖುದ್ದು ಮುಖ್ಯಮಂತ್ರಿಗಳೇ ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇತ್ತೀಚೆಗೆ ಆಯ್ಕೆಯಾದ ಇಬ್ಬರು ಜನತಾದಳ ಶಾಸಕರು ದೇವೇಗೌಡ ಮತ್ತು ಕುಮಾರಸ್ವಾಮಿ ಅವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಮತದಾರರ ಹೆಸರಿನಲ್ಲಿ, ರೇಣುಕಾಚಾರ್ಯ ಯಡಿಯೂರಪ್ಪ ಹೆಸರಿನಲ್ಲಿ, ಶಾಸಕ ನೇಮಿರಾಜ್ ನಾಯಕ್ ಜನಾರ್ಧನ ರೆಡ್ಡಿ ಹೆಸರಿನಲ್ಲಿ, ಕಡೂರು ಕೃಷ್ಣಮೂರ್ತಿ ಮಹಾತ್ಮಾ ಗಾಂಧಿ ಮತ್ತು ಸುಭಾಸ್ ಚಂದ್ರ ಬೋಸ್ ಹೆಸರಿನಲ್ಲಿ, ಸಂಜಯ್ ಪಾಟೀಲ್ ಕಿತ್ತೂರು ಚನ್ನಮ್ಮ ಹೆಸರಿನಲ್ಲಿ, ಸುರೇಶಗೌಡ ಶಿವಕುಮಾರ ಸ್ವಾಮೀಜಿ ಹೆಸರಿನಲ್ಲಿ ಗೂಳಿಹಟ್ಟಿ ಶೇಖರ್ ವೈಷ್ಣೋದೇವಿ ಹೆಸರಿನಲ್ಲಿ, ಡಿ ಸುಧಾಕರ್ ಮಲೇಮಹದೇಶ್ವರ ಹೆಸರಿನಲ್ಲಿ, ಕೃಷ್ಣಯ್ಯ ಶೆಟ್ಟಿ ತಿರುಪತಿ ತಿಮ್ಮಪ್ಪನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

(ವಿಜಯ ಕರ್ನಾಟಕ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X