ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪೈಲೆಟ್ ಗಳ ವಜಾ : ಪೈಲೆಟ್ ಗಳ ಸಾಮೂಹಿಕ ರಜೆ

By Staff
|
Google Oneindia Kannada News

Jet Airways
ನವದೆಹಲಿ, ಸೆ. 8 : ತನ್ನ ಇಬ್ಬರು ಪೈಲಟ್ ಗಳನ್ನೂ ಸಂಸ್ಥೆ ವಜಾಗೊಳಿಸಿದ ಕ್ರಮವನ್ನು ವಿರೋಧಿಸಿ ಸುಮಾರು 600 ಕ್ಕೂ ಹೆಚ್ಚು ಪೈಲಟ್ ಗಳು ಸೋಮವಾರ ತಡರಾತ್ರಿಯಿಂದ ಕಾಯಿಲೆ ರಜೆ (SICK LEAVE) ಮೇಲೆ ತೆರಳಿರುವ ಹಿನ್ನಲೆಯಲ್ಲಿ ಜೆಟ್ ಏರ್ವೇಸ್ ತನ್ನ 10ಕ್ಕೂ ಹೆಚ್ಚು ವಿಮಾನಗಳ ಪ್ರಮಾಣವನ್ನು ರದ್ದುಗೊಳಿಸಿದೆ.

ಜೆಟ್ ಏರ್ವೇಸ್ ನಲ್ಲಿ ಪ್ರಯಾಣಿಸಬೇಕಾಗಿದ್ದ ಪ್ರಯಾಣಿಕರನ್ನು ಈಗ ಏರ್ ಇಂಡಿಯಾ ಮತ್ತು ಇತರ ವಿಮಾನಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ. ಸುಮಾರು 32 ವಿಮಾನಗಳ ಹಾರಾಟದ ಸಮಯವನ್ನು ಬದಲಿಸಲಾಗಿದೆ. ದೆಹಲಿ ಮತ್ತು ಮುಂಬೈ ನಿಂದ ಹೊರಡುವ 7ವಿಮಾನಗಳು ಮತ್ತು ಚೆನ್ನೈನಿಂದ ಹೊರಡುವ 2 ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜೆಟ್ ಅಧಿಕಾರಿಗಳು ತಿಳಿಸಿದ್ದಾರೆ.

ದೆಹಲಿಯಿಂದಲೇ ಬೆಂಗಳೂರು, ಮುಂಬೈ, ತಿರುವನಂತಪುರಂ, ಪುಣೆ, ಮುಂಬೈ ಮತ್ತು ಹೈದರಾಬಾದ್ ಗೆ ತೆರಳಬೇಕಾಗಿದ್ದ ಯಾನವನ್ನು ರದ್ದುಗೊಳಿಸಿದೆ. ಹೈದರಾಬಾದ್ ವಿಮಾನ ನಿಲ್ದಾಣದಿಂದ ಯಾವುದೇ ಜೆಟ್ ಏರ್ವೇಸ್ ವಿಮಾನಗಳು ಹೊರಡಲಿಲ್ಲ. ಪೈಲಟ್‌ಗಳ ಒಂದು ವರ್ಗವು ಅನಾರೋಗ್ಯದ ಕಾರಣ ನೀಡಿ ಮುಷ್ಕರಕ್ಕೆ ಉತ್ತೇಜನ ನೀಡುತ್ತಿದ್ದಾರೆ, ಸೇವೆಯನ್ನು ತೊಂದರೆಗೊಳಿಸುವುದು ಮತ್ತು ಪ್ರಯಾಣಿಕರಿಗೆ ಸಂಸ್ಥೆ ಮೇಲೆ ಅಪನಂಬಿಕೆ ಹುಟ್ಟಿಸುವ ಕೆಲಸ ಮಾಡುವುದು ಇವರ ಉದ್ದೇಶ ಎಂದು ಜೆಟ್ ಸಂಸ್ಥೆ ವಿವರಣೆ ನೀಡಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X