ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ ಗಣೇಶ ಮೆರವಣಿಗೆ ಗಲಭೆ

By Staff
|
Google Oneindia Kannada News

Stone throwing on Ganesh procession, tense
ಶಿವಮೊಗ್ಗ, ಸೆ. 4 : ಹಿಂದೂ ಮಹಾಸಭಾ ಗಣಪತಿ ವಿಸರ್ಜನಾಪೂರ್ವ ರಾಜಬೀದಿ ಉತ್ಸವ ನಡೆಯುತ್ತಿದ್ದಾಗ ಅಮೀರ್ ಅಹಮ್ಮದ್ ವೃತ್ತದಲ್ಲಿ ಕಿಡಿಗೇಡಿಗಳು ಮೆರವಣಿಗೆ ಮೇಲೆ ಕಲ್ಲು ಮತ್ತು ಚಪ್ಪಲಿ ತೂರಾಟ ನಡೆಸಿದ್ದಾರೆ. ಈ ಘಟನೆಯಿಂದ ನಗರದಲ್ಲಿ ಕೆಲಕಾಲ ಬಿಗಿ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ಪೋಲೀಸರ ಮಧ್ಯಪ್ರವೇಶದಿಂದ ಮೆರವಣಿಗೆ ಶಾಂತಿಯುತವಾಗಿ ಮುಕ್ತಾಯಗೊಂಡಿತು. ಗಣಪತಿಯನ್ನು ಕೋಟೆ ಭೀಮೇಶ್ವರ ದೇವಾಲಯದ ಬಳಿಯ ತುಂಗಾ ನದಿಯಲ್ಲಿ ವಿಸರ್ಜಿಸಲಾಯಿತು.

ಇಂಧನ ಸಚಿವ ಈಶ್ವರಪ್ಪ, ಶಾಸಕ ಕುಮಾರಸ್ವಾಮಿ ಭಾಗವಹಿಸಿದ್ದ ಈ ಅದ್ದೂರಿ ಮೆರವಣಿಗೆ ಶಾಂತಿಯುತವಾಗಿ ನಡೆಯುತ್ತಿತ್ತು, ಆದರೆ ಅಮೀರ್ ಅಹಮ್ಮದ್ ವ್ರತ್ತದ ಬಳಿ ಬರುತ್ತಿದ್ದಂತೆ ಕಿಡಿಗೇಡಿಗಳು ಕಲ್ಲು ಚಪ್ಪಲಿ ತೂರಿದರು ಮತ್ತು ಬಿ ಎಚ್ ರಸ್ತೆ ಕಡೆಯಿಂದಲೂ ಕಲ್ಲುಗಳು ತೂರಿ ಬಂದವು. ಇದರಿಂದ ಗಾಬರಿಗೊಂಡ ಜನರು ದಿಕ್ಕಾಪಾಲಾಗಿ ಓಡತೊಡಗಿದರು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಕಲ್ಲು ತೂರಿದವರ ಮೇಲೆ ಲಾಠಿ ಪ್ರಹಾರ ಆರಂಭಿಸಿದರು ಮತ್ತು ಒಬ್ಬ ಕಿಡಿಗೇಡಿಯನ್ನು ವಶಕ್ಕೆ ತೆಗೆದುಕೊಂಡರು. ಕೆಲವೇ ಹೊತ್ತಿನಲ್ಲಿ ಪರಿಸ್ಥಿತಿ ಶಾಂತವಾಗಿ ಮೆರವಣಿಗೆ ಮುಂದುವರಿಯಿತು. ಕಲ್ಲು ತೂರಾಟದಲ್ಲಿ ಒಬ್ಬ ಪೋಲಿಸ್ ಸೇರಿದಂತೆ ಐವರಿಗೆ ಗಾಯಗಳಾಗಿವೆ.

ಗಣೇಶನ ಮೆರವಣಿಗೆಗೂ ಅಮೀರ್ ಅಹ್ಮದ್ ವೃತ್ತಕ್ಕೂ ಬಿಡಲಾಗದ ನಂಟು ಮತ್ತು ಕಗ್ಗಂಟು. ಈ ವೃತ್ತದಲ್ಲಿ ಮೆರವಣಿಗೆ ಹಾದು ಹೋಗುತ್ತಿರುವಾಗ ಉಭಯ ಕೋಮಿನ ನಡುವೆ ಘರ್ಷಣೆಗಳು ನಡೆಯುವುದಕ್ಕೆ ದೀರ್ಘವಾದ ಇತಿಹಾಸವಿದೆ. ಈ ವರ್ಷವೂ ಇಂತಹ ಘಟನೆ ಪುನರಾವರ್ತನೆಯಾಗಿದ್ದು ವಿಷಾಧಕರ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X