ಭಾರತಕ್ಕೆ ಮತ್ತೆ ಒಲಿದ ನೆಹರು ಕಪ್
ನವದೆಹಲಿ, ಸೆ. 1 : ಸೋಮವಾರ (ಆ 31) ನಡೆದ ರೋಚಕ ಫೈನಲ್ ಪಂದ್ಯದಲ್ಲಿ ಬೈಚುಂಗ್ ಭುಟಿಯಾ ನೇತೃತ್ವದ ಭಾರತ ತಂಡ ಪೆನಾಲ್ಟಿ ಶೂಟ್ಔಟ್ ನಲ್ಲಿ ಸಿರಿಯಾ ತಂಡವನ್ನು 5-4 ಗೋಲುಗಳಿಂದ ಸದೆಬಡಿದು ಸತತ ಎರಡನೇ ಬಾರಿಗೆ ಒಎನ್ ಜಿಸಿ ನೆಹರು ಕಪ್ ಫುಟ್ಬಾಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
ಭಾರತ ತಂಡದ ಯಶಸ್ಸಿನ ರೂವಾರಿ ಗೋಲ್ ಕೀಪರ್ ಸುಬ್ರತಾ ಪಾಲ್ ಎದುರಾಳಿ ತಂಡದ ಮೂರು ಪೆನಾಲ್ಟಿ ಶೂಟ್ಔಟ್ ಅವಕಾಶಗಳನ್ನು ಹಾಳುಗೆಡವಿ ಎಲ್ಲರ ಕೇಂದ್ರಬಿ೦ದುವಾದರು. ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಗೋಲುಗಳಿಸಲು ಸಾಧ್ಯವಾಗಲಿಲ್ಲ. ಹೆಚ್ಚುವರಿ ಸಮಯದ 15 ನಿಮಿಷಗಳ ಅವಧಿಯಲ್ಲಿ ಎರಡು ತಂಡಗಳು 1-1 ಗೋಲುಗಳಿಸಿದಾಗ ಪೆನಾಲ್ಟಿ ಶೂಟ್ಔಟ್ ಅವಕಾಶ ನೀಡಲಾಯಿತು. ಭಾರತದ ಪರವಾಗಿ ಕ್ಲೈಮಾಕ್ಷ ಲಾರೆನ್ಸ್, ಸುನಿಲ್ ಛೆಟ್ರಿ, ಸ್ಟೀವನ್ ಡಯಾಸ್, ಅನ್ವರ್ ಮತ್ತು ಸುರ್ಕುಮಾರ್ ಸಿಂಗ್ ತಲಾ ಒಂದೊಂದು ಗೋಲುಗಳಿಸಿದರು.
(ಏಜನ್ಸೀಸ್)












Click it and Unblock the Notifications