ಜೈನರಿಗೆ ರಾಜಕೀಯ ಪ್ರಾತಿನಿಧ್ಯ : ಸುರೇಂದ್ರಕುಮಾರ್
ಬೆಂಗಳೂರು, ಆ. 31 : ಜೈನ ಸಮುದಾಯದವರಿಗೆ ರಾಜ್ಯಸಭಾ ಸದಸ್ಯ ಸ್ಥಾನ ಹಾಗೂ ವಿಧಾನ ಪರಿಷತ್ ಸದಸ್ಯತ್ವ ಸ್ಥಾನ ನೀಡಬೇಕು ಎಂದು ಧರ್ಮಸ್ಥಳದ ಸುರೇಂದ್ರ ಕುಮಾರ್ ಸರಕಾರಕ್ಕೆ ಮನವಿ ಮಾಡಿಕೊಂಡರು.
ಸಾಲಿಗ್ರಾಮ ಜೈನ ಮಿತ್ರ ಮಂಡಳಿ ಹಮ್ಮಿಕೊಂಡಿದ್ದ 8ನೇ ವಾರ್ಷಿಕೋತ್ಸವ ಹಾಗೂ ವಿಚಾರಗೋಷ್ಠಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಮುಖ್ಯಮಂತ್ರಿ, ಸಚಿವರು ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರು ಜೈನ ಸಮುದಾಯದ ವ್ಯಕ್ತಿಗಳನ್ನು ತಮ್ಮ ಆಪ್ತೇಷ್ಟರ ಬಳಗದಲ್ಲಿ ಇಟ್ಟುಕೊಂಡಿದ್ದಾರೆ. ಜೈನರು ನಂಬಿಕೆಗೆ ಅರ್ಹರು ಎಂಬುದಕ್ಕೆ ಇದೇ ಸಾಕ್ಷಿ. ಆದರೆ, ಜೈನ ಸಮುದಾಯದವರಗೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ದೊರೆತಿಲ್ಲ. ಈ ಕೊರತೆ ನಿವಾರಣೆಗಲು ಸಮುದಾಯದವರು ಸಂಘಟಿತರಾಗುವುದು ಅವಶ್ಯ ಎಂದು ಸುರೇಂದ್ರಕುಮಾರ್ ಹೇಳಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications