ಸೀತೆಯಷ್ಟೇ ನಾನು ಪವಿತ್ರ : ಸುಧಾಕರ್

ಈ ಪ್ರಕರಣದ ಹಿಂದೆ ನನ್ನ ಏಳ್ಗೆ ಬಯಸದ ಕೆಲವರ ಹಿತಾಸಕ್ತಿ ಅಡಗಿದೆ. ಯಾವುದೇ ಅಪರಾಧ ಮಾಡಿಲ್ಲದ ನಾನು ಸೀತೆಯಷ್ಟೇ ಪವಿತ್ರನಾಗಿದ್ದು, ಮುಖ್ಯಮಂತ್ರಿಯವರು ನನ್ನನ್ನು ಸಂಪುಟದಿಂದ ಕೈಬಿಡಲಿದ್ದಾರೆ ಎಂದು ಭಾವಿಸುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿಬಿಐ ತಮ್ಮ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿರುವ ಬಗ್ಗೆ ತಮಗೆ ಯಾವುದೇ ನೋಟಿಸ್ ಆಗಲೀ ಬಂದಿಲ್ಲ ಎಂದರು.
ತಮ್ಮದು ವ್ಯಾಪಾರಿ ಕುಟುಂಬ. ಏಳು ತಾಲ್ಲೂಕುಗಳಲ್ಲಿ ಸರಾಯಿ ಗುತ್ತಿಗೆದಾರನಾಗಿದ್ದೆ. 2 ಡಿಸ್ಟಲರಿಗಳ ಒಡೆತನ ಹೊಂದಿದ್ದೇನೆ. ಸರಕಾರಕ್ಕೆ ವಾರ್ಷಿಕ 100 ಕೋಟಿ ರುಪಾಯಿಗಳನ್ನು ಪಾವತಿಸುತ್ತೇನೆ. ರಿಯಲ್ ಎಸ್ಟೇಟ್ ವ್ಯವಹಾರವನ್ನೂ ನಡೆಸುತ್ತೇನೆ. ತ್ರಿಶೂಲ್ ಮತ್ತು ಸೆವೆನ್ ಹಿಲ್ಸ್ ಸಂಸ್ಥೆ ಹೆಸರಿನಲ್ಲಿ ನಿವೇಶನ ನಿರ್ಮಿಸಿ ಹಂಚಿಕೆ ಮಾಡಿದ್ದೇನೆ ಎಂದು ಸುಧಾಕರ್ ವಿವರಿಸಿದರು.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications