558140ಆಸ್ತಿ ವಿವರನ್ಯಾಯಾಧೀಶರ ಆಸ್ತಿವಿವರದ ಕಗ್ಗಂಟು ಬಿಚ್ಚುವವರಾರು?/news/2009/08/26/my-lord-judges-are-accountable.htmlಎತ್ತರದ ಸ್ಥಾನದಲ್ಲಿ ಕುಳಿತು ಜನರಿಗೆ ನ್ಯಾಯ ನೀಡುವ ನ್ಯಾಯಮೂರ್ತಿಗಳು ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕೆ ಬೇಡವೆ ಎಂಬ ಕುರಿತು ನ್ಯಾಯಮೂರ್ತಿಗಳೇ ಪ್ರಶ್ನೆಗಳನ್ನೆತ್ತಿದ್ದಾರೆ. ಈಕುರಿತು ನ್ಯಾಯಾಂಗದಲ್ಲಿಯೇ ಸಾಕಷ್ಟು ಚರ್ಚೆಗಳಾಗುತ್ತಿವೆ. ಕರ್ನಾಟಕದ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ಅವರು ಆಸ್ತಿವಿವರ ಪರವಾಗಿ ವಾದಿಸಿದ್ದರೆ, ಕೆಲ ನ್ಯಾಯಮೂರ್ತಿಗಳು ಪ್ರತಿವಾದ ಮಂಡಿಸಿದ್ದಾರೆ. ಇದಕ್ಕೆ ಜನಸಾಮಾನ್ಯರಾದ ನಿಮ್ಮ ಅಭಿಪ್ರಾಯವೇನು?* ಆನಂದರಾಮ ಶಾಸ್ತ್ರೀ, ಬೆಂಗಳೂರು ಉನ್ನತ 38837http://kannada.oneindia.com/img/2009/08/26-shylendra-kumar-justice1.jpg558140ಆಸ್ತಿ ವಿವರ ಆಸ್ತಿ ಬಹಿರಂಗಕ್ಕೆ ಒಪ್ಪಿದ ನ್ಯಾಯಮೂರ್ತಿಗಳು /news/2009/08/27/sc-judges-to-declare-assets.htmlನವದೆಹಲಿ, ಆ. 27 : ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಕೊನೆಗೂ ತಮ್ಮ ಆಸ್ತಿ ವಿವರ ಬಹಿರಂಗಪಡಿಸಲು ಒಪ್ಪಿಕೊಂಡಿದ್ದಾರೆ. ನ್ಯಾಯಮೂರ್ತಿಗಳೆಲ್ಲರೂ ನ್ಯಾಯಾಲಯದ ವೆಬ್ ಸೈಟ್ ನಲ್ಲಿ ಆಸ್ತಿಪಾಸ್ತಿ ಘೋಷಿಸಿಕೊಳ್ಳಲಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಡಿ ವಿ ಶೈಲೇಂದ್ರ ಕುಮಾರ್ ಆಸ್ತಿ ವಿವರ ಬಹಿರಂಗ ಪಡಿಸುವುದು ಹಿತಕರವೆ೦ಬ ಪ್ರತಿಪಾದನೆಗೆ ಮನ್ನಣೆ ಸಿಕ್ಕಂತಾಗಿದೆ. ಸೋಮವಾರ (ಆ 27) ಶೈಲೇಂದ್ರ ಕುಮಾರ್ ತಮ್ಮ ಆಸ್ತಿ 38848http://kannada.oneindia.com/img/2009/08/27-kg-balakrishnan1e.jpg558140ಆಸ್ತಿ ವಿವರಪಿಡಿ ದಿನಕರನ್ ಮೇಲೆ ಆಕ್ರಮ ಆಸ್ತಿ ಆರೋಪ/news/2009/09/16/judges-assets-karnataka-chief-justice-in-trouble.htmlಬೆಂಗಳೂರು, ಸೆ. 16 : ಕರ್ನಾಟಕದ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿ ಪಿ ಡಿ ದಿನಕರನ್ ಅವರು ಅಕ್ರಮ ಆಸ್ತಿ ಹೊಂದಿರುವ ಆರೋಪಕ್ಕೆ ಒಳಗಾಗಿರುವ ಸಂಗತಿ ಬೆಳಕಿಗೆ ಬಂದಿದೆ. ಅಗತ್ಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಸುಪ್ರಿಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಕೆ ಜಿ ಬಾಲಕೃಷ್ಣನ್ ಅವರು ವಿವರಣೆ ನೀಡುವಂತೆ ದಿನಕರನ್ ಗೆ ಸೂಚನೆ ನೀಡಿದ್ದಾರೆ. 39204http://kannada.oneindia.com/img/2009/09/16-pd-dinakaran1.jpg558140ಆಸ್ತಿ ವಿವರಪತ್ರಕರ್ತರ ಆಸ್ತಿಪಾಸ್ತಿ ಬಯಲಾಗಲಿ/mixed-bag/blogs/2009/1021-journalists-asset-declaration-manual.htmlಪ್ರಜಾತಂತ್ರದ ನಾಲ್ಕನೇ ಸ್ಥಂಭ ಮಾಧ್ಯಮರಂಗ. ಇತರ ಮೂರು ಅಂಗಗಳಾದ ನ್ಯಾಯಾಂಗ, ಕಾರ್ಯಾಂಗ ಮತ್ತು ಶಾಸಕಾಂಗದಿಂದ ಪಾರದರ್ಶಕತೆಯನ್ನು ಬಯಸುವ ಪತ್ರಕರ್ತರು ತಮ್ಮ ಆಸ್ತಿ ವಿವರಗಳನ್ನು ಸ್ವಪ್ರೇರಣೆಯಿಂದ ಬಹಿರಂಗಗೊಳಿಸಲಿ ಎನ್ನುವುದೇ ಈ ಕೆಳಗಿನ ಬರಹದ ಅನ್ನಾಂಗ-ದಟ್ಸ್ ಕನ್ನಡ.ನಮ್ಮ ನಾಡಿನ ಹಿರಿಯ ಹುದ್ದೆಗಳಲ್ಲಿ ಇರುವ ಪತ್ರಕರ್ತರು ಸಾರ್ವಜನಿಕ ಹಿತಾಸಕ್ತಿಯಿಂದ ಸ್ವಯಂಪ್ರೇರಿತರಾಗಿ ತಮ್ಮ ಆಸ್ತಿ ವಿವರಗಳನ್ನು ಪ್ರಕಟಿಸುವುದು ಯಾವಾಗ? ಇತ್ತೀಚೆಗೆ ದಿ ನ್ಯೂ 39778http://kannada.oneindia.com/img/2009/10/21-pens1.jpg558140ಆಸ್ತಿ ವಿವರವೆಬ್ನಲ್ಲಿ ಬಯಲಾದ ನ್ಯಾಯಮೂರ್ತಿಗಳ ಆಸ್ತಿ/news/2009/11/03/asset-declaration-kg-balakrishnan-supreme-court.htmlನವದೆಹಲಿ, ನ. 3 : ಭಾರತದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಕೆಜಿ ಬಾಲಕೃಷ್ಣನ್ ಮತ್ತು ಇತರ 20 ಮಂದಿ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರಗಳನ್ನು ಬಹಿರಂಗಗೊಳಿಸಿದ್ದಾರೆ. ಅವರ ಆಸ್ತಿವಿವರಗಳನ್ನು ಸಾರ್ವಜನಿಕರು ನ್ಯಾಯಾಯಲದ ವೆಬ್ ತಾಣ http://www.supremecourtofindia.nic.in/assets.htm ದಲ್ಲಿ ನೋಡಬಹುದು. ಈ ವಿವರಗಳನ್ನು ನವಂಬರ್ 2ರ ಸೋಮವಾರ ವೆಬ್ಬಿಗೆ ಹಾಕಲಾಗಿದೆ.ಮಾಹಿತಿ ಹಕ್ಕು ಕಾಯ್ದೆ ಅನ್ವಯ ನೀವು ಮತ್ತು 40024http://kannada.oneindia.com/img/2009/11/03-kg-balakrishnan1.jpg399317ಆನಂದರಾಮ ಶಾಸ್ತ್ರೀಬೀಜಾಂಕುರ/festivals/ugadi/2009/0326-beejankura-poem-by-anandram-shastri.htmlಯುಗಾದಿಎಂಬ ಹಕ್ಕಿಹಿಡಿದು ಕೊಕ್ಕಿನಲ್ಲಿ ಆಸೆಯ ಬುತ್ತಿಬಂದಿದೆ ನಮ್ಮ ನೆತ್ತಿಯ ಮೇಲೆ ಹಾರಿಬುತ್ತಿಯೊಳಗೆಸಿದ್ಧ ತಿನಿಸಿಲ್ಲಇದೆ ಬರಿಯ ಕಾಳು;ಬಿತ್ತಿ ಇಳೆಗೆಬೆಳೆ ಬೆಳೆಯಬೇಕು ನಾವ್ಇಲ್ಲದಿರೆಕಾಳು ಹಾಳುಮುಂದೆ ಸಮೃದ್ಧಿಯಫಸಲಿಗಾಗಿ ಅಗತ್ಯಇಂದೇ ಪ್ರಯತ್ನದ ಉಳುಮೆ,ಗುಣದ ಗೊಬ್ಬರ.ಎಂದೇಇಂದುಆ ಹಸುರಿನಾಸೆಯಬೀಜಾಂಕುರ35542http://kannada.oneindia.com/img/2009/03/26-anandram-shastri1.jpg399317ಆನಂದರಾಮ ಶಾಸ್ತ್ರೀಇದೀಗ ತಾನೇ ಬಂದಂತಹ ನಗೆ ಸುದ್ದಿಗಳು/column/humor/2009/0401-humorous-political-news-bytes.htmlರಾಜಕೀಯದಲ್ಲಿ ಕಾಲು ಎಳೆಯುವುದು, ಕೆಸರೆರಚಾಟವಾಡುವುದು, ಕಟಕಿಯಾಡುವುದು ಸೂರ್ಯ ಪೂರ್ವ ದಿಕ್ಕಿನಲ್ಲಿ ಹುಟ್ಟಿದಷ್ಟೇ ಸಹಜ. ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನಾವೂ ನಮ್ಮ ರಾಷ್ಟ್ರೀಯ ಪ್ರತಿನಿಧಿಗಳ ಕಾಲೆಳಿಯೋಣ, ಮಿತಿ ಮೀರದಂತೆ. ಇಲ್ಲಿವೆ ನೋಡಿ ಎಚ್. ಆನಂದರಾಮ ಶಾಸ್ತ್ರೀಯವರ ಹಾಸ್ಯಲೇಪಿತ ರಾಜಕೀಯ ಸುದ್ದಿ ಸ್ವಾರಸ್ಯಗಳು.ವರುಣ್‌ಗೆ ಒಂದು ವರ್ಷ ಶಿಕ್ಷೆವರುಣ್ ಗಾಂಧಿಗೆ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಲಾಗಿದೆ. 35655http://kannada.oneindia.com/img/2009/04/01-anandram-shastri1.jpg399317ಆನಂದರಾಮ ಶಾಸ್ತ್ರೀಬಂಗಾರ-ಕುಮಾರ-ಮಧು-ಚಂದ್ರ-ಯಾನ/column/humor/2009/0406-madhu-kumar-bangarappa-unite.htmlರಾಜಕೀಯದಲ್ಲಿ ಯಾವುದೂ ಶಾಶ್ವತವಲ್ಲ. ಇಲ್ಲಿ ಸ್ನೇಹವೂ ಶಾಶ್ವತವಲ್ಲ, ವೈರತ್ವವೂ. ಅಧಿಕಾರ ಶಾಶ್ವತವಲ್ಲ, ಸಂಬಂಧವಂತೂ ಅಲ್ವೇಅಲ್ಲ, ಹಣ ಮತ್ತು ಕಳಂಕ ಹೊರತಾಗಿ. ಅಂದಿನ ಬದ್ಧ ವೈರಿಗಳು ಇಂದು ನಿನ್ನಂಥ ಅಪ್ಪ ಇಲ್ಲ, ನಿನ್ನಂಥ ಮಗನೂ ಇಲ್ಲ, ನಿನ್ನಂಥ ಬಂಧುವಿಲ್ಲ ಅಂತ ಅಪ್ಪಿಕೊಳ್ಳುವುದನ್ನು ನೋಡುವುದು ರಾಜಕೀಯದಲ್ಲಿ ಮಾತ್ರ ಸಾಧ್ಯ. ಅದನ್ನು ಸಾಧ್ಯವಾಗಿಸಿದವರು, ಕುಮಾರ್, ಮಧು ಮತ್ತು ಒನ್ ಅಂಡ್ ಓನ್ಲಿ 35761http://kannada.oneindia.com/img/2009/04/06-anandram-shastri2.jpg399317ಆನಂದರಾಮ ಶಾಸ್ತ್ರೀಸ್ವರ್ಗ-ನರಕದಲ್ಲಿ ಪತ್ರಿಕಾಗೋಷ್ಠಿ!/column/humor/2009/0409-press-conference-in-hell-and-heaven.htmlಸ್ವರ್ಗ ಮತ್ತು ನರಕಗಳೆರಡರಲ್ಲಿಯೂ ಏಕಕಾಲಕ್ಕೆ ವಿಶೇಷ ಘಟಕಗಳನ್ನು ತೆರೆಯಲು ಈಚೆಗಷ್ಟೇ ನಿರ್ಧರಿಸಲಾಯಿತು. ಭೂಲೋಕದ ಮಾನವರಿಗಾಗಿ ಆ ಘಟಕಗಳಾದ್ದರಿಂದ ಆ ಬಗ್ಗೆ ಎರಡೂ ಕಡೆ ಪತ್ರಿಕಾಗೋಷ್ಠಿ ಏರ್ಪಡಿಸಿ ಭೂಲೋಕದ ಪತ್ರಕರ್ತರನ್ನು ಆಹ್ವಾನಿಸಲಾಯಿತು. ಪತ್ರಕರ್ತರಿಗಾಗಿ ಉಭಯ ಕಡೆಗಳಿಗೂ ದೇವೇಂದ್ರನ ಕಚೇರಿಯು ವಿಶೇಷ ಸಾರಿಗೆ ವ್ಯವಸ್ಥೆ ಮಾಡಿತ್ತು. ಕ್ಯಾಮೆರಾ, ಮೊಬೈಲ್ ಫೋನ್, ಕಂಪ್ಯೂಟರ್, ಚಿತ್ರಗ್ರಾಹಕ ಯಂತ್ರಗಳು ಹಾಗೂ ಧ್ವನಿಮುದ್ರಕ ಯಂತ್ರಗಳನ್ನು ನಿಷೇಧಿಸಲಾಗಿತ್ತು. 35853http://kannada.oneindia.com/img/2009/04/09-anandram-shastri2.jpg399317ಆನಂದರಾಮ ಶಾಸ್ತ್ರೀಇಂಥ ರಾಜಕಾರಣಿಗಳನ್ನು ಪಡೆದ ನಾವೇ ಧನ್ಯರು!/column/humor/2009/0413-honest-secular-polite-politicians-karnataka.htmlನಮ್ಮ ರಾಜಕಾರಣಿಗಳು ಪಾಪ ಏನೂ ಗಳಿಸಿರುವುದಿಲ್ಲ. ಇವರ ಹೆಂಡತಿ ಟೈಲರಿಂಗೋ ಮತ್ತೊಂದೋ ಕೆಲಸ ಮಾಡಿ ಒಂದು ಕೇಜಿ ಬಂಗಾರ, ಎರಡು ಕ್ವಿಂಟಲ್ ಬೆಳ್ಳಿ, ಮೂರು ಬಂಗಲೆ, ನಾಲ್ಕು ಕಾರು, ಐದು ಲಕ್ಷ ನಗದು, ಆರು ಕೋಟಿ ರೂ. ಶೇರ್ ಸರ್ಟಿಫಿಕೇಟು, ಏಳೆಕರೆ ತೋಟ, ಎಂಟು ಸೈಟು, ಒಂಭತ್ತು ಕಪಾಟುಭರ್ತಿ ಉಡುಪು ಮತ್ತು ಹತ್ತು ಜಾತಿನಾಯಿ ಮಾಡಿಕೊಂಡಿರುತ್ತಾರೆ, ಅಷ್ಟೆ.* 35908http://kannada.oneindia.com/img/2009/04/13-politician1.jpgnews"> ನ್ಯಾಯಾಧೀಶರ ಆಸ್ತಿವಿವರದ ಕಗ್ಗಂಟು ಬಿಚ್ಚುವವರಾರು? | Juscice DV Shylendra Kumar | Karnataka High Court | Disclosure of Assets - ನ್ಯಾಯಾಧೀಶರ ಆಸ್ತಿವಿವರದ ಕಗ್ಗಂಟು ಬಿಚ್ಚುವವರಾರು? - Kannada Oneindia

ನ್ಯಾಯಾಧೀಶರ ಆಸ್ತಿವಿವರದ ಕಗ್ಗಂಟು ಬಿಚ್ಚುವವರಾರು?

Justice DV Shylendra Kumar
ಎತ್ತರದ ಸ್ಥಾನದಲ್ಲಿ ಕುಳಿತು ಜನರಿಗೆ ನ್ಯಾಯ ನೀಡುವ ನ್ಯಾಯಮೂರ್ತಿಗಳು ಆಸ್ತಿ ವಿವರಗಳನ್ನು ಬಹಿರಂಗಪಡಿಸಬೇಕೆ ಬೇಡವೆ ಎಂಬ ಕುರಿತು ನ್ಯಾಯಮೂರ್ತಿಗಳೇ ಪ್ರಶ್ನೆಗಳನ್ನೆತ್ತಿದ್ದಾರೆ. ಈಕುರಿತು ನ್ಯಾಯಾಂಗದಲ್ಲಿಯೇ ಸಾಕಷ್ಟು ಚರ್ಚೆಗಳಾಗುತ್ತಿವೆ. ಕರ್ನಾಟಕದ ಪ್ರಸ್ತುತ ಮುಖ್ಯ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ಅವರು ಆಸ್ತಿವಿವರ ಪರವಾಗಿ ವಾದಿಸಿದ್ದರೆ, ಕೆಲ ನ್ಯಾಯಮೂರ್ತಿಗಳು ಪ್ರತಿವಾದ ಮಂಡಿಸಿದ್ದಾರೆ. ಇದಕ್ಕೆ ಜನಸಾಮಾನ್ಯರಾದ ನಿಮ್ಮ ಅಭಿಪ್ರಾಯವೇನು?

* ಆನಂದರಾಮ ಶಾಸ್ತ್ರೀ, ಬೆಂಗಳೂರು

ಉನ್ನತ ನ್ಯಾಯಾಲಯಗಳ ನ್ಯಾಯಾಧೀಶರ ಆಸ್ತಿ ವಿವರವನ್ನು ಇಚ್ಛುಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಬಹಿರಂಗಗೊಳಿಸಬೇಕೇ ಬೇಡವೇ ಎನ್ನುವ ವಿಷಯವು ಎರಡು ಕಾರಣಗಳಿಗಾಗಿ ವಿವಾದಕ್ಕೀಡಾಗಬಾರದಿತ್ತು. ಒಂದನೆಯ ಕಾರಣ, ನ್ಯಾಯಾಲಯಗಳಮೇಲೆ ಜನರು ಹೊಂದಿರುವ ಗೌರವಕ್ಕೆ ಈ ವಿವಾದದಿಂದಾಗಿ ಕೊಂಚವಾದರೂ ಚ್ಯುತಿ ಉಂಟಾಗಿಯೇ ಆಗುತ್ತದೆ. ಎರಡನೆಯ ಕಾರಣ, ಆಸ್ತಿ ವಿವರ ಬಹಿರಂಗಗೊಳಿಸುವುದು ನ್ಯಾಯಾಧೀಶರು ಪಾಲಿಸಬೇಕಾದ ಒಂದು ಸಾಮಾಜಿಕ ನ್ಯಾಯ.

ನ್ಯಾಯಾಧೀಶರಾಗಿ ಅವರು ಮೊಕದ್ದಮೆಗಳ ಬಗ್ಗೆ ನೀಡುವ ತೀರ್ಪು ಸರ್ವೋಚ್ಚ ನ್ಯಾಯಾಲಯದ ತೀರ್ಮಾನದ ನಂತರ ಪ್ರಶ್ನಾತೀತ. ಆದರೆ ವ್ಯಕ್ತಿಗಳಾಗಿ ಅವರು ಸಮಾಜದಲ್ಲಿ ಪ್ರಶ್ನಾತೀತರೇನಲ್ಲ. ಆ "ವ್ಯಕ್ತಿ"ಯೇ "ನ್ಯಾಯಾಧೀಶ"ನೂ ಆಗಿರುವುದರಿಂದ, ವ್ಯಕ್ತಿಯಾಗಿಯೂ ಆತನ ಜೀವನ ಪಾರದರ್ಶಕವಾಗಿರಬೇಕಾದ್ದು ಆತ ನೀಡುವ ತೀರ್ಪಿನಮೇಲೆ ಸಮಾಜಕ್ಕೆ ಅವಿಚ್ಛಿನ್ನ ವಿಶ್ವಾಸದ ದೃಷ್ಟಿಯಿಂದ ಅತ್ಯವಶ್ಯ. ಈ ನಿಟ್ಟಿನಲ್ಲಿ ಆತ ತನ್ನ ಮತ್ತು ಕುಟುಂಬದವರ ಆಸ್ತಿ ವಿವರವನ್ನು ಇಚ್ಛುಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಬಹಿರಂಗಗೊಳಿಸಬೇಕಾದ್ದು ಆತನ ಸಾಮಾಜಿಕ ಹೊಣೆಗಾರಿಕೆ. ಈ ಹೊಣೆಗಾರಿಕೆಯ ಮುಂದೆ, ಮತ್ತು, ಸಮಾಜಕ್ಕೆ ನ್ಯಾಯಾಲಯಗಳ ಮೇಲಣ ವಿಶ್ವಾಸದ ಪ್ರಶ್ನೆಯ ಮುಂದೆ, ಆತ ಆಸ್ತಿ ವಿವರ ಬಹಿರಂಗಗೊಳಿಸದಿರಲು ನೀಡಬಲ್ಲ ಕಾರಣಗಳೆಲ್ಲವೂ ನಗಣ್ಯ.

ಆಸ್ತಿ ವಿವರ ಬಹಿರಂಗಗೊಳಿಸುವುದನ್ನು ಸಮರ್ಥಿಸಿ ನ್ಯಾಯಮೂರ್ತಿ ಶೈಲೇಂದ್ರಕುಮಾರ್ ಅವರು ಪತ್ರಿಕೆಗಳಲ್ಲಿ ಬರೆದಿರುವ ಲೇಖನವು ಯಥೋಚಿತವಾಗಿದೆ. ಒಂದಿಬ್ಬರು ಅತ್ಯಂತ ಹಿರಿಯ ನ್ಯಾಯವೇತ್ತರು ಶೈಲೇಂದ್ರಕುಮಾರ್ ಅವರ ಲೇಖನಕ್ಕೆ ಪ್ರತಿಕ್ರಿಯಿಸುತ್ತ, "ನಿಮ್ಮ ಆಸ್ತಿಯನ್ನು ಬಹಿರಂಗಗೊಳಿಸಲು ಯಾರು ಬೇಡವೆಂದರು? ಬಹಿರಂಗಗೊಳಿಸಿ. ತಾವಾಗಿ ಆಸ್ತಿ ಬಹಿರಂಗಗೊಳಿಸಬಯಸುವ ನ್ಯಾಯಾಧೀಶರನ್ನು ಯಾರು ತಡೆಹಿಡಿದಿದ್ದಾರೆ? ಬಯಸುವವರು ಬಹಿರಂಗಗೊಳಿಸಲಿ", ಎಂಬರ್ಥದ ಮಾತುಗಳನ್ನಾಡಿರುವುದು ನ್ಯಾಯಾಂಗಕ್ಕೆ ಶೋಭೆ ತರುವಂಥದಲ್ಲ.

ಇದು ಹೇಗಾಯಿತೆಂದರೆ, ಸಾಮಾಜಿಕ ವಿಷಯವೊಂದರ ಬಗ್ಗೆ "ಹೋರಾಡೋಣ" ಎಂದು ಕರೆ ನೀಡಿದವರಿಗೆ, "ನೀವು ಹೋರಾಡಿ. ಬೇಡ ಅಂದವರ್‍ಯಾರು?" ಅಂದಂತಾಯಿತು!

ಬಯಸಿದವರಷ್ಟೇ ಆಸ್ತಿ ವಿವರ ಬಹಿರಂಗಪಡಿಸುವುದರಿಂದ ಯಾವ ಪ್ರಯೋಜನವೂ ಇಲ್ಲ. ಎಲ್ಲ ಸ್ತರದ ಎಲ್ಲ ನ್ಯಾಯಾಧೀಶರೂ ಸ್ವಕುಟುಂಬದ ಆಸ್ತಿ ವಿವರ ಸಹಿತ ತಮ್ಮ ಆಸ್ತಿ ವಿವರವನ್ನು ಇಚ್ಛುಕ ಸಾರ್ವಜನಿಕರಿಗೆ ಲಭ್ಯವಾಗುವಂತೆ ಕಡ್ಡಾಯವಾಗಿ ಬಹಿರಂಗಗೊಳಿಸುವಂತಾದಾಗ ಮಾತ್ರ ನ್ಯಾಯವ್ಯವಸ್ಥೆಯ ಮೇಲೆ ಸಮಾಜಕ್ಕೆ ಸಂಪೂರ್ಣ ವಿಶ್ವಾಸ ಉಂಟಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+