ಬಂಡಾಯ : ರೇಣುಕಾಚಾರ್ಯ ರಹಸ್ಯ ಸಭೆ

Renukacharya
ಬೆಂಗಳೂರು, ಆ. 6 : ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಶೋಕಾಸ್ ನೋಟೀಸ್ ಪಡೆದಿರುವ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅವರ ಪ್ರಕರಣ ಈಗ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ. ರಾಜ್ಯಾಧ್ಯಕ್ಷ ಸದಾನಂದಗೌಡ ಅವರಿಗೆ ಸಡ್ಡು ಹೊಡೆಯಲು ನಿರ್ಧರಿಸಿರುವ ರೇಣುಕಾ ಬೆಂಬಲಕ್ಕೆ 20 ಶಾಸಕರು ಮುಂದಾಗಿದ್ದಾರೆಂದು ತಿಳಿದು ಬಂದಿದೆ.

ದಾವಣಗೆರೆ, ಶಿವಮೊಗ್ಗ ಮತ್ತು ಉತ್ತರ ಕರ್ನಾಟಕದ ಅತೃಪ್ತ ಶಾಸಕರು ರೇಣುಕಾಚಾರ್ಯ ಬೆಂಬಲಕ್ಕೆ ನಿಂತಿದ್ದು, ಶೋಕಾಸ್ ನೋಟೀಸ್ ಗೆ ಉತ್ತರಿಸಬಾರದೆಂದು ರೇಣುಕಾಚಾರ್ಯಗೆ ಒತ್ತಡ ಹಾಕಿದ್ದಾರೆಂದು ತಿಳಿದು ಬಂದಿದೆ. ತನ್ನ ಬೆಂಬಲಕ್ಕೆ ಧಾವಿಸುತ್ತಿರುವ ಶಾಸಕರನ್ನು ಒಗ್ಗೂಡಿಸುವ ಕಾರ್ಯದಲ್ಲಿ ರೇಣುಕಾ ನಿರತರಾಗಿದ್ದಾರೆ.

ಬುಧವಾರ (ಆ 5) ನಗರದ ಖಾಸಗಿ ಹೋಟೆಲ್ ನಲ್ಲಿ ರಹಸ್ಯ ಸಭೆ ನಡೆಸಿ, ಪಕ್ಷದಲ್ಲಿನ ನಿಷ್ಟಾವಂತವರನ್ನು ಕಡೆಗಣಿಸಿ ಕೆಲವರಿಗೆ ಮಾತ್ರ ಆದ್ಯತೆ ನೀಡುತ್ತಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಯಿತು. ಇದನ್ನು ತಡೆಯಲು ಕೈಗೊಳ್ಳಬೇಕಾದ ಕಾರ್ಯತಂತ್ರಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಹೇಳಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+