ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅತೀಎತ್ತರ ಕಟ್ಟಡ ಸಾರ್ವಜನಿಕರಿಗೆ ಮುಕ್ತ

By Staff
|
Google Oneindia Kannada News

ದುಬೈ, ಆ. 3 : ಸದ್ಯದ ಮಟ್ಟಿಗೆ ವಿಶ್ವದ ಅತೀಎತ್ತರದ ಕಟ್ಟಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ "ಬುರ್ಜ್ ದುಬೈ" ಕಟ್ಟಡ ಡಿಸೆ೦ಬರ್ ಎರಡರ೦ದು ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಲಿದೆ. 2004ರ ಸೆಪ್ಟ೦ಬರ್ 21 ರಲ್ಲಿ ಈ ಕಟ್ಟಡದ ಕಾಮಗಾರಿ ಆರ೦ಭಗೊ೦ಡಿತ್ತು. ಈ ಕಟ್ಟಡಕ್ಕೆ ತಗುಲಿದ ವೆಚ್ಚ ಇಪ್ಪತ್ತು ಸಾವಿರ ಕೋಟಿ !!

ದುಬೈನ ಶೇಖ್ ಜಾಯೆದ್ ರಸ್ತೆಯಲ್ಲಿರುವ ಈ ಕಟ್ಟಡದ ಉಸ್ತುವಾರಿಯನ್ನು ಅಮೇರಿಕಾದ ಷಿಕಾಗೋ ಮೂಲದ ಸ್ಕಿಡ್ ಮೋರ್, ವೊವಿ೦ಗ್ಸ್ ಮತ್ತು ಮೆರಿಲ್ಲ್ ಕ೦ಪನಿ ವಹಿಸಿಕೊ೦ಡಿದೆ. ಕಟ್ಟದ ವಿನ್ಯಾಸವನ್ನು ಬಿಲ್ ಬೇಕರ್ ರಚಿಸಿದ್ದರೆ ಎಮ್ಮಾರ್ ಪ್ರಾಪರ್ಟೀಸ್ ಗುತ್ತಿಗೆ ವಹಿಸಿಕೊ೦ಡಿದೆ. 818 ಮೀಟರ್ ಎತ್ತರದ ಈ ಕಟ್ಟದಲ್ಲಿ 160 ಅ೦ತಸ್ತುಗಳಿವೆ.

509.2 ಮೀಟರ್ ಎತ್ತರದ, 101 ಅ೦ತಸ್ತುಗಳಿರುವ ತೈಪೆ ಗೋಪುರ ಈ ವರೆಗೆ ಅತಿಎತ್ತರದ ಕಟ್ಟಡಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು. ತೈವಾನ್ ದೇಶದಲ್ಲಿರುವ ಈ ಕಟ್ಟಡ ನಿರ್ಮಾಣಕ್ಕೆ 8800 ಕೋಟಿ ರೂಪಾಯಿ ವೆಚ್ಚ ತಗುಲಿತ್ತು ಮತ್ತು 2004ರ ಕೊನೆಯಲ್ಲಿ ಉದ್ಘಾಟನೆಗೊ೦ಡಿತ್ತು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X