ಪಂಪ್‌ಸೆಟ್ ಖರೀದಿ ಅಕ್ರಮವಾಗಿಲ್ಲ : ಸುಧಾಕರ್

ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ, ದೇವರಾಜ ಅರಸು ಅಭಿವೃದ್ಧಿ ನಿಗಮ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾ ಕಲ್ಯಾಣ ಯೋಜನೆಯಡಿ 2007-08ನೇ ಸಾಲಿನಲ್ಲಿ ಪಂಪ್‌ಸೆಟ್‌ಗಳ ಖರೀದಿ ನಡೆದಿದೆ. ಆಗ ಬೇರೆ ಸರಕಾರ ಅಧಿಕಾರದಲ್ಲಿ ಇತ್ತು. ವಾಸ್ತವಾಂಶ ತಿಳಿಯದೇ ಹೊರಟ್ಟಿಯವರು ವಿನಾಕಾರಣ ದೂಷಣೆ ಮಾಡಿದ್ದಾರೆ ಎಂದರು.
ಕೊಯಮತ್ತೂರಿನ ಕಂಪನಿಯೊಂದು ವಿಭಿನ್ನ ದರದಲ್ಲಿ ಪಂಪ್‌ಸೆಟ್ ಮಾರಿರುವುದು ನಿಜ. ಅದರಲ್ಲಿ ಸಮಾಜ ಕಲ್ಯಾಣ ಇಲಾಖೆ ಎಲ್ಲರಿಗಿಂತ ಅತಿ ಕಡಿಮೆ ದರದಲ್ಲಿ ಖರೀದಿ ಮಾಡಿದೆ. ಹೀಗಾಗಿ ಯಾವುದೇ ಅವ್ಯವಹಾರ ಇಲ್ಲಿ ನಡೆದಿಲ್ಲ. ಇನ್ನು ಕೊಯಮತ್ತೂರಿನ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಪತ್ರ ಬರೆದಿಲ್ಲ ಹಾಗೂ ಈ ಸಂಬಂಧ ಯಾವ ದೂರುಗಳು ಬಂದಿಲ್ಲ. ಹೀಗಾಗಿ ತನಿಖೆಯ ಅಗತ್ಯ ಕಾಣುತ್ತಿಲ್ಲ. ಈ ಕುರಿತು ಮುಖ್ಯಮಂತ್ರಿಯವರೇ ತೀರ್ಮಾನ ತೆಗೆದುಕೊಳ್ಳಬೇಕು ಎಂದರು.
(ಏಜೆನ್ಸೀಸ್)












Click it and Unblock the Notifications