ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿವಮೊಗ್ಗ : 61 ಬಡ ವೃದ್ಧರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ

By * ಶಿ.ಜು.ಪಾಶ, ಶಿವಮೊಗ್ಗ
|
Google Oneindia Kannada News

Free eye surgery camp by Meggan hospital in Shivamogga
ಶಿವಮೊಗ್ಗ, ಜು. 27 : ವೈದ್ಯರೆಂದರೆ ದೇವರೆಂದು ನಂಬುವವರು ನಾವು. ಸರ್ಕಾರಿ ಆಸ್ಪತ್ರೆ ಎಂದರೆ ಕೀಳು ಭಾವನೆ ಜನರಲ್ಲಿದೆ. ವೈದ್ಯರುಗಳು ಯಾವ ರೋಗಿಗೂ ಹಾನಿ ಮಾಡಲು ಬಯಸುವುದಿಲ್ಲ. ಇಂತಹ ಭಾವನೆಯನ್ನು ಬಿಡಬೇಕೆಂದು ಮಾಜಿ ಶಾಸಕ ಎಚ್.ಎಂ.ಚಂದ್ರಶೇಖರಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋಮವಾರ ಜಿಲ್ಲಾ ಮೆಗ್ಗಾನ್ ಆಸ್ಪತ್ರೆಯಲ್ಲಿ ಜನಹಿತ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಂಸ್ಥೆ, ಜಿಲ್ಲಾ ಸಂಚಾರಿ ನೇತ್ರ ಚಿಕಿತ್ಸಾ ಘಟಕ, ಜಿಲ್ಲಾ ಅಂಧತ್ವ ನಿವಾರಣಾ ಸಮಿತಿ, ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ 3 ದಿನಗಳ ಕಾಲ ಹಮ್ಮಿಕೊಂಡಿದ್ದ ನೇತ್ರಾ ಚಿಕಿತ್ಸೆ ಮತ್ತು ಮಸೂರ ಅಳವಡಿಕೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದ ಅವರು, ಮನುಷ್ಯನಿಗೆ ಎಲ್ಲಾ ಅಂಗಗಳು ಮುಖ್ಯ. ಅದರಲ್ಲೂ ಕಣ್ಣಿಲ್ಲದಿದ್ದರೆ ಯಾವುದೇ ದೃಶ್ಯವನ್ನು ನೋಡಲು ಆಗುವುದಿಲ್ಲ. ದೃಷ್ಟಿ ಮನುಷ್ಯನಿಗೆ ಬಹಳ ಮುಖ್ಯವಾಗಿದೆ ಎಂದರು.

ಜನಹಿತ ಸಂಸ್ಥೆ ಮತ್ತು ಆಸ್ಪತ್ರೆ ಸಿಬ್ಬಂದಿಗಳು ಅನೇಕರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲು ಸಹಕಾರ ಮಾಡಿದ್ದಾರೆ. ಈ ರೀತಿ ಮುಂದೆಯು ಇಂತಹ ಶಿಬಿರಗಳನ್ನು ಹಮ್ಮಿಕೊಳ್ಳಬೇಕು. ಇದರಿಂದಾಗಿ ಅನೇಕ ಬಡವರಿಗೆ ಉಪಕಾರ ಮಾಡಿದಂತಾಗುತ್ತದೆ. ಚಿಕಿತ್ಸೆ ಮೂಲಕ ದೃಷ್ಟಿ ಬಂದಾಗ ಮಾನಸಿಕವಾಗಿ ಬಲಗೊಳ್ಳುವುದರ ಜೊತೆಗೆ ಶಕ್ತಿಯೂ ಬಂದಂತಾಗುತ್ತದೆ ಎಂದು ತಿಳಿಸಿದರು. ಜನಹಿತ ಸಂಸ್ಥೆಯು ಶಿಬಿರ ನಡೆಸಲು ನೆರವನ್ನು ನೀಡಿದ್ದಾರೆ. ಕಣ್ಣು ತುಂಬಾ ಸೂಕ್ಷ್ಮ ಅಂಗವಾಗಿದ್ದು, ಗಮನಹರಿಸಬೇಕು. ಇಂತಹ ಶಿಬಿರ ನಡೆದಾಗ ಸದುಪಯೋಗಪಡಿಸಿಕೊಳ್ಳಬೇಕೆಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ|| ಭಾಗ್ಯಲಕ್ಷ್ಮಿ ಮಾತನಾಡಿ, ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡವರು ಬಹಳ ಹುಷಾರಾಗಿ ಕಣ್ಣುಗಳನ್ನು ನೋಡಿಕೊಳ್ಳಬೇಕು. ಕೊಟ್ಟಿರುವ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ಪಾಲಿಸಬೇಕೆಂದು ಹೇಳಿದರಲ್ಲದೆ, ಮರಣದ ನಂತರ ನೇತ್ರದಾನ ಮಾಡಬೇಕೆಂದು ಸಲಹೆ ನೀಡಿದರು. ಈ ಶಿಬಿರದಲ್ಲಿ 61 ಜನ ಬಡ ವೃದ್ಧರಿಗೆ ಕಣ್ಣಿನ ಶಸ್ತ್ರ ಚಿಕಿತ್ಸೆ ನಡೆಸಲಾಯಿತು. 200ಕ್ಕೂ ಹೆಚ್ಚಿನ ಹೊರ ರೋಗಿಗಳು ತಮ್ಮ ಕಣ್ಣುಗಳನ್ನು ಪರೀಕ್ಷೆಗೊಳಪಡಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X