ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸು.ಕೋರ್ಟ್ ನಲ್ಲಿ ಸರಕಾರಕ್ಕೆ ಹಿನ್ನಡೆ

By Staff
|
Google Oneindia Kannada News

Visheshwara hegde kageri
ನವದೆಹಲಿ, ಜು. 22 : ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಕಲಿಕೆ ಮಾಧ್ಯಮವಾಗಿ ಕನ್ನಡವನ್ನು ಕಡ್ಡಾಯಗೊಳಿಸುವ ರಾಜ್ಯ ಸರಕಾರದ ಕ್ರಮಕ್ಕೆ ಸುಪ್ರಿಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಸರಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸುವುದರೊಂದಿಗೆ ಭಾಷಾ ಮಾಧ್ಯಮ ವಿಷಯದಲ್ಲಿ ಮತ್ತೆ ಸರಕಾರ ಮುಖಭಂಗ ಅನುಭವಿಸಿದೆ.

ಮುಖ್ಯ ನ್ಯಾಯಮೂರ್ತಿ ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ಸದಾಶಿವಂ ಮತ್ತು ಬಿ ಎಸ್ ಚೌಹಾಣ ಅವರಿದ್ದ ಪೀಠ ರಾಜ್ಯದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದು, ಮಾತೃಭಾಷೆಯೊಂದನ್ನು ಮಾತ್ರ ಕಲಿತರೆ ಮಕ್ಕಳು ಕ್ಲರ್ಕ್ ಕೂಡಾ ಆಗಲಾರರು. ಹಳ್ಳಿಯಲ್ಲಿ ಓದುವ ವಿಧ್ಯಾರ್ಥಿಗಳು ನಗರದ ವಿಧ್ಯಾರ್ಥಿಗಳ ಜೊತೆ ಸ್ಪರ್ಧಿಸಲಾರರು. ಕಲಿಯಲು ಇಷ್ಟವಿಲ್ಲದ ವಿದ್ಯಾರ್ಥಿಗಳ ಮೇಲೆ ರಾಜ್ಯಗಳು ತಮ್ಮ ಮಾತೃ ಭಾಷೆಯನ್ನು ಹೇರಲು ಮುಂದಾದರೆ ಅದು ಅನುತ್ಪಾದಕ ಕ್ರಮವಾಗುತ್ತದೆ. ಇದರಿಂದ ವಾಸ್ತವ ಜಗತ್ತಿನಲ್ಲಿ ಉಳಿಯಲು ಕಷ್ಟವಾಗುತ್ತದೆ ಎಂದು ಖೇದ ವ್ಯಕ್ತಪಡಿಸಿತು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X