ನ್ಯಾನೋ ಕಾರ್ ಹೈದರಾಬಾದ್ ಪುರ ಪ್ರವೇಶ

ರೈಲ್ವೆಯ ವಿಶೇಷ ಕೋಚ್ ನಲ್ಲಿ ಹೈದರಾಬಾದ್ ನ ರೈಲು ನಿಲ್ದಾಣ ಬಂದಿಳಿದ ನ್ಯಾನೋ ಕಾರ್ ಇಷ್ಟರಲ್ಲಿಯೇ ಹೈದಾರಬಾದ್ ನ ರಸ್ತೆಯಲ್ಲಿ ಫಳಪಳಿಸಲಿವೆ. ಮಧ್ಯಮ ವರ್ಗದ ಜನ ತೀವ್ರ ಕುತೂಹಲದಿಂದ ಕಾಯುತ್ತಿರುವ ಟಾಟಾ ನ್ಯಾನೋ ಕಾರನ್ನು ಟಾಟಾ ಕಂಪನಿಯ ಮುಖ್ಯಸ್ಥ ರತನ್ ಟಾಟಾ ಮಾರ್ಚ್ 23 ರಂದು ಅಧಿಕೃತವಾಗಿ ಮಾರುಕಟ್ಟೆ ಬಿಡುಗಡೆ ಮಾಡಿದ್ದರು. ಏಪ್ರಿಲ್ 9 ರಿಂದ 25ರ ವರೆಗೆ ಟಾಟಾ ನ್ಯಾನೋ ಕಾರಿನ ಬುಕ್ಕಿಂಗ್ ಆರಂಭವಾಗಿತ್ತು. 2,999 ರುಪಾಯಿಗಳನ್ನು ನೀಡಿ ಬುಕ್ಕಿಂಗ್ ಮಾಡಿಕೊಳ್ಳಲಾಗಿತ್ತು.
ನ್ಯಾನೋ ಕಾರಿನಲ್ಲಿ ಮೂರು ಬಗೆಯಲ್ಲಿದ್ದು, ಸ್ಟ್ಯಾಂಡರ್ಡ್, ಸಿಎಕ್ಸ ಮತ್ತು ಎಲ್ ಎಕ್ಸ್ ಎಂಬ ಹೆಸರಿನ ನ್ಯಾನೋ ಕಾರುಗಳನ್ನು ಬಿಡುಗಡೆ ಮಾಡಲಾಗುವುದು. ಜುಲೈ ತಿಂಗಳಿನಿಂದ ಕಾರಿನ ಮಾರಾಟ ಆರಂಭವಾಗುವುದು. ಪ್ರತಿ ಲೀಟರ್ ಗೆ 24 ಕಿ ಮೀ ಮೈಲೇಜ್ ನೀಡಲಿದೆ ಎಂದು ಟಾಟಾ ಹೇಳಿದ್ದರು.
(ಏಜನ್ಸೀಸ್)












Click it and Unblock the Notifications