ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಸಗೊಬ್ಬರಗಳ ಪೂರೈಕೆಗೆ ಕೇಂದ್ರಕ್ಕೆ ಸಿಎಂ ಪತ್ರ

By Staff
|
Google Oneindia Kannada News

Yeddyurappa
ಬೆಂಗಳೂರು, ಜು. 14 : ಉತ್ತಮ ಮಳೆಯಾಗಿ ಕೃಷಿ ಚಟುವಟಿಕೆಗಳು ಭರದಿಂದ ಪ್ರಾರಂಭವಾಗಿರುವ ಹಿನ್ನೆಲೆಯಲ್ಲಿ ರಾಜ್ಯಕ್ಕೆ ತುರ್ತಾಗಿ ಅಗತ್ಯವಿರುವ ಯೂರಿಯಾ, ಕಾಂಪ್ಲೆಕ್ಸ್ ಹಾಗೂ ಎಂ.ಒ.ಪಿ. ರಸಗೊಬ್ಬರಗಳನ್ನು ಬೇಡಿಕೆಗನುಗುಣವಾಗಿ ಸಮರ್ಪಕವಾಗಿ ಸರಬರಾಜು ಮಾಡಲು ಆಗ್ರಹಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ.

ಕೃಷಿ ಸಚಿವ ಶರದ್‌ ಪವಾರ್ ಮತ್ತು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರಗಳ ಸಚಿವ ಎಂ.ಕೆ. ಅಳಗಿರಿ ರವರಿಗೆ ಪತ್ರ ಅವರಿಗೆ ಪತ್ರ ಬರೆಯಲಾಗಿದೆ. ರಾಜ್ಯದ ಜುಲೈ ತಿಂಗಳ ಯೂರಿಯಾ ಬೇಡಿಕೆಯ ಪ್ರಮಾಣವು 1,70,000 ಟನ್‌ಗಳಾಗಿದ್ದು, ಕೇಂದ್ರ ಸರ್ಕಾರವು ಕೇವಲ 93,500 ಟನ್ ಮಾತ್ರ ಹಂಚಿಕೆ ಮಾಡಲಾಗಿದೆ. ಜುಲೈ 12ರವರೆಗೆ ಕೇವಲ 48,048 ಟನ್‌ಗಳಷ್ಟು ಮಾತ್ರ ಸರಬರಾಜಾಗಿದೆ. ಈ ಕೊರತೆಯಿಂದಾಗಿ ಯೂರಿಯಾ ಅಗತ್ಯವಿರುವ ರೈತರು, ವಿಶೇಷವಾಗಿ ಹಾವೇರಿ ಹಾಗೂ ದಾವಣಗೆರೆಗಳಲ್ಲಿ ತೀವ್ರ ಸಂಕಷ್ಟಕ್ಕೊಳಗಾಗಿದ್ದು, ಕಾನೂನು ಹಾಗೂ ಸುವ್ಯವಸ್ಥೆ ಹದಗೆಡುತ್ತಿದೆ.

ಹಾಗೆಯೇ ಜುಲೈ ತಿಂಗಳಿಗೆ ರಾಜ್ಯದ ಕಾಂಪ್ಲೆಕ್ಸ್ ರಸಗೊಬ್ಬರ ಹಾಗೂ ಎಂ.ಒ.ಪಿ. ರಸಗೊಬ್ಬರದ ಬೇಡಿಕೆಯು ಕ್ರಮವಾಗಿ 1,24,000 ಟನ್ ಹಾಗೂ 54,000 ಟನ್‌ಗಳಷ್ಟಿದ್ದು, ಕೇಂದ್ರವು ಈ ಬಾಬ್ತು ಕೇವಲ 45,400 ಟನ್‌ಗಳು ಹಾಗೂ 17,500 ಟನ್‌ಗಳನ್ನು ಹಂಚಿಕೆ ಮಾಡಿದೆ. ಪರಿಸ್ಥಿತಿಯ ತೀವ್ರತೆಯನ್ನರಿತು, ರೈತರ ಸಹನೆ ಮೀರಿ ಅಹಿತಕರ ಘಟನೆಗಳು ಜರುಗುವ ಮುನ್ನ ಕೇಂದ್ರ ಸರ್ಕಾರವು ಎಲ್ಲಾ ರಸಗೊಬ್ಬರಗಳನ್ನು ಬೇಡಿಕೆಗನುಗುಣವಾಗಿ ಅಗತ್ಯ ಪ್ರಮಾಣದಲ್ಲಿ ಸರಬರಾಜು ಮಾಡುವಂತೆ ಕೇಂದ್ರ ಸಚಿವರಿಗೆ ಮುಖ್ಯಮಂತ್ರಿಗಳು ಈ ಪತ್ರದಲ್ಲಿ ಆಗ್ರಹಿಸಿದ್ದಾರೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X