38318ಯಡಿಯೂರಪ್ಪಅರ್ಧ ಮೀಸೆ ಪಣಕ್ಕಿಟ್ಟ ಜಮೀರ್ ಅಹ್ಮದ್ /news/2008/12/24/bjp-wont-encore-bet-my-mustache-zameer-ahmed.htmlದೊಡ್ಡಬಳ್ಳಾಪುರ, ಡಿ.24: ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಅಸಾಧ್ಯ. ಆ ತರಹದ ಕನಸು ಕಾಣುತ್ತಿದ್ದರೆ ನಿರಾಶೆ ಖಂಡಿತ. ಒಂದು ವೇಳೆ ಬಿಜೆಪಿ ಏನಾದರೂ ಎಲ್ಲೆಡೆ ಗೆಲುವು ಸಾಧಿಸಿದರೆ ನಾನು ನನ್ನ ಅರ್ಧ ಮೀಸೆ ಬೋಳಿಸಿಕೊಳ್ಳುತ್ತೇನೆ ಹಾಗೂ ಸಿಎಂ ಮನೆ ವಾಚ್ ಮನ್ ಆಗುತ್ತೇನೆ ಎಂದು ಬೆಂಗಳೂರು ಚಾಮರಾಜಪೇಟೆ ಶಾಸಕ, ಜೆಡಿಎಸ್ ನ ಮುಖಂಡ ಜಮೀರ್ ಅಹಮದ್ 33690http://kannada.oneindia.com/img/2008/12/24-zameer-ahmed1.jpg38318ಯಡಿಯೂರಪ್ಪಎಂಟು ಕ್ಷೇತ್ರಗಳಲ್ಲಿ ಜಯಭೇರಿ- ಯಡ್ಡಿ/news/2008/12/25/bjp-will-sweep-by-election-bsy-turuvekere.htmlತುರುವೇಕೆರೆ, ಡಿ.25: 'ಉಪ ಚುನಾವಣೆ ನಂತರ ಬಿಜೆಪಿ ಸರ್ಕಾರ ಕರ್ನಾಟದಲ್ಲಿ ಮತ್ತಷ್ಟು ಸುಭದ್ರವಾಗಲಿದೆ. ಮುಂದೆಂದೂ ಉಪಚುನಾವಣೆಗಳು ನಡೆಯುವ ಪರಿಸ್ಥಿತಿ ಉದ್ಭವಿಸುವುದಿಲ್ಲ. ಈ ಉಪ ಚುನಾವಣೆಯಲ್ಲಿ ಬಿಜೆಪಿ 8 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ಸರ್ಕಾರ ಮತ್ತಷ್ಟು ಸ್ಥಿರವಾಗಲಿದೆ' ಎಂದು ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಗುರುವಾರ ವಿಶ್ವಾಸ ವ್ಯಕ್ತಪಡಿಸಿದರು. ತುರುವೇಕೆರೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ 33706http://kannada.oneindia.com/img/2008/12/25-yediyurappa3e.jpg38318ಯಡಿಯೂರಪ್ಪಕನ್ನಡ ಅನುಷ್ಠಾನಕ್ಕೆ ಕಟಿ ಬದ್ಧ: ಯಡಿಯೂರಪ್ಪ/news/2009/01/02/kannada-implementation-is-yeddyurappa-resolution.htmlಬೆಂಗಳೂರು, ಜ. 2 : ಕರ್ನಾಟಕದಲ್ಲಿ ಕನ್ನಡ ಭಾಷೆ ಬಳಕೆಯು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಸರ್ಕಾರ ಕಟಿಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಾ ಬಿ ಎಸ್ ಯಡಿಯೂರಪ್ಪ ಅವರು ತಿಳಿಸಿದರು. ಗೃಹ ಕಚೇರಿ ಕೃಷ್ಣ ದಲ್ಲಿ ಕನ್ನಡ ಪ್ರಾಧಿಕಾರವು 2009 ರ ವರ್ಷವನ್ನು ಕನ್ನಡ ಅನುಷ್ಠಾನ ವರ್ಷವೆಂದು ಘೋಷಿಸಿ ಅನುಷ್ಠಾನಗೊಳಿಸುವ ಬಗ್ಗೆ ಹೊರತಂದಿರುವ 'ದಾರಿ ದೀವಿಗೆ' ಎಂಬ ಕೈಪಿಡಿ, 33824http://kannada.oneindia.com/img/2009/01/02-kannada-anustana-varsha.jpg38318ಯಡಿಯೂರಪ್ಪನೂತನ ಡಿಜಿಪಿಯಾಗಿ ಅಜಯ್ ಕುಮಾರ್ ಸಿಂಗ್ /news/2009/01/03/ajay-kumar-singh-as-new-dgp.htmlಬೆಂಗಳೂರು, ಜ.3: ರಾಜ್ಯದ ನೂತನ ಪೊಲೀಸ್ ಮಹಾ ನಿರ್ದೇಶಕರಾಗಿ ಡಾ.ಅಜಯ್ ಕುಮಾರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶುಕ್ರವಾರ ಪ್ರಕಟಿಸಿದ್ದಾರೆ. ಹಾಲಿ ಡಿಜಿಪಿ ಶ್ರೀಕುಮಾರ್ ಅವರ ಅಧಿಕಾರ ಅವಧಿ ಜ.31ಕ್ಕೆ ಕೊನೆಗೊಳ್ಳಲಿದೆ. ಸೇವಾ ಜ್ಯೇಷ್ಠತೆ ಆಧಾರದ ಮೇಲೆ ಅಜಯ್ ಕುಮಾರ್ ಸಿಂಗ್ ಅವರನ್ನು ನೂತನ ಡಿಜಿಪಿಯಾಗಿ ನೇಮಿಸಲಾಗುತ್ತಿದೆ. ಸಿಒಡಿ ಡಿಜಿಪಿಯಾಗಿ ಅಧಿಕಾರ 33845http://kannada.oneindia.com/img/2009/01/03-ajay-kumar-singh.jpg38318ಯಡಿಯೂರಪ್ಪಭಯೋತ್ಪಾದನೆ ವಿರುದ್ಧ ಸಮರ : ಯಡಿಯೂರಪ್ಪ/news/2009/01/04/anti-terrorism-campaign-for-youths-yeddyurappa.htmlಮಂಡ್ಯ, ಜ. 14 : ದೇಶದ ಅಭಿವೃದ್ಧಿ ಪಥವನ್ನು ದಾರಿತಪ್ಪಿಸುವ ಯತ್ನವೇ ಭಯೋತ್ಪಾದನೆ. ಭಯೋತ್ಪಾದನೆಯ ಮೂಲೋತ್ಪಾಟನೆ ಹಾಗೂ ದೇಶದ ಅಭಿವೃದ್ಧಿ ಪಥವನ್ನು ಸುಭದ್ರಗೊಳಿಸುವ ನಿಟ್ಟಿನಲ್ಲಿ ಪಕ್ಷಾತೀತವಾಗಿ ಹಿರಿಯರು, ಚಿಂತಕರುಗಳ ಮಾರ್ಗದರ್ಶನದ ಮೂಲಕ ನಾವೆಲ್ಲ ರಾಷ್ಟ್ರದ ಯುವಶಕ್ತಿಯನ್ನು ನಿರ್ಮಿಸುವ ಕಾರ್ಯ ಮಾಡೋಣ. ಆಗ ಮಾತ್ರ ದೇಶದ ಐಕ್ಯತೆ, ಸುಭದ್ರತೆ ಹಾಗೂ ಅಭಿವೃದ್ಧಿಯ ಕಾರ್ಯ ಯಶ ಸಾಧಿಸಬಲ್ಲದು ಎಂದು ರಾಜ್ಯದ 33864http://kannada.oneindia.com/img/2009/01/04-cm-srirangapatna1.jpg155581ಜನಾರ್ದನರೆಡ್ಡಿತೆಲುಗು ಚಿತ್ರ ಅರ್ಪಿಸಿದ ಸಚಿವ ಜನಾರ್ದನರೆಡ್ಡಿ/news/2009/03/16/janardhan-reddy-presents-upendra-telugu-film.htmlಬೆಂಗಳೂರು, ಮಾ. 16 : ಬಳ್ಳಾರಿ ಗಡಿ ವಿಷಯಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯ ವೈ ಎಸ್ ರಾಜಶೇಖರರೆಡ್ಡಿ ಹಾಗೂ ಪ್ರವಾಸೋಧ್ಯಮ ಸಚಿವ, ಗಣಿಧಣಿ ಜನಾರ್ದನರೆಡ್ಡಿ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಮಾಜಿ ಪ್ರಧಾನ ದೇವೇಗೌಡ ಮಾಡುತ್ತಿರುವ ಆರೋಪದಲ್ಲಿ ಸತ್ಯವಿದೆಯೋ ಏನೂ ಗೊತ್ತಿಲ್ಲ. ಆದರೆ, ಮಾನ್ಯ ಸಚಿವರು ತೆಲುಗು ಚಿತ್ರವೊಂದನ್ನು ಅರ್ಪಿಸುತ್ತಿರುವುದು ಸುದ್ದಿ ಮಾತ್ರ ನೂರಕ್ಕೆ ನೂರರಷ್ಟು ಸತ್ಯ. 35244http://kannada.oneindia.com/img/2009/03/16-upendra-buddimanthudu26.jpg155581ಜನಾರ್ದನರೆಡ್ಡಿಸುಳ್ಳುಗಾರ ದೇವೇಗೌಡರಿಗೆ ಬುದ್ಧಿ ಕಲಿಸಿ, ರೆಡ್ಡಿ/news/2009/03/16/hd-devegowda-is-a-big-fraudster-minister-reddy.htmlಬಳ್ಳಾರಿ, ಮಾ. 16 : ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಬಹುದೊಡ್ಡ ನಾಟಕಕಕಾರ, ಮುಸ್ಲಿಮರ ಮತ ದೋಚುವ ಸಲುವಾಗಿ ನನಗೆ ಮುಂದಿನ ಜನ್ಮವೊಂದಿದ್ದರೆ ಮುಸ್ಲಿಂ ಆಗಿ ಹುಟ್ಟುವೆ ಎಂದು ಸುಳ್ಳು ಹೇಳುವ ಆ ಸಮುದಾಯಕ್ಕೆ ಭಾರಿ ಮೋಸ ಮಾಡಿದ್ದಾರೆ ಎಂದು ಗೌಡರ ಕುಟುಂಬದ ವೈರಿ ಎಂದೇ ಪರಿಗಣಿಸಲ್ಪಟ್ಟಿರುವ ಪ್ರವಾಸೋಧ್ಯಮ ಖಾತೆ ಸಚಿವ ಜಿ ಜನಾರ್ದನರೆಡ್ಡಿ ಆರೋಪಿಸಿದ್ದಾರೆ. 35262http://kannada.oneindia.com/img/2009/03/16-janardhan-reddy1.jpg155581ಜನಾರ್ದನರೆಡ್ಡಿಜನಾರ್ದನರೆಡ್ಡಿ-ಎಚ್ಡಿಕೆ ನಡುವೆ ಜಂಗೀಕುಸ್ತಿ /news/2009/04/01/kumarswamy-janardhanreddy-fight-over-mining-issue.htmlಬಳ್ಳಾರಿ, ರಾಮನಗರ, ಏ. 1 : ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗಣಿ ಧಣಿ, ಪ್ರವಾಸೋಧ್ಯಮ ಸಚಿವ ಜಿ ಜನಾರ್ದನರೆಡ್ಡಿ ಹಾಗೂ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ನಡುವೆ ಮತ್ತೆ ವಾಕ್ಸಮರ ಆರಂಭವಾಗಿದೆ. ಸೋಮವಾರ ಬಳ್ಳಾರಿ ಪ್ರವಾಸ ಕೈಗೊಂಡಿದ್ದ ಕುಮಾರಸ್ವಾಮಿ ಸದ್ದಿಲ್ಲದೇ ವಿವಾದಿತ ಎಂ ಎಸ್ ಪಿಎಲ್ ಗಣಿಗಾರಿಕೆ ಸ್ಥಳಕ್ಕೆ ಭೇಟಿ ನೀಡಿರುವುದು ಉಭಯ ನಾಯಕರ ಮಾತಿನ 35658http://kannada.oneindia.com/img/2009/04/01-kumaraswami8.jpg155581ಜನಾರ್ದನರೆಡ್ಡಿಜನಾರ್ದನರೆಡ್ಡಿ, ಎಚ್ಡಿಕೆ ಜೈಲಿಗೆ : ಸಿದ್ದರಾಮಯ್ಯ/news/2009/04/14/siddu-breaks-silence-targets-reddy-hdk.htmlಬಿಜಾಪುರ, ಏ. 14 : ಈವರೆಗೂ ಜೈಲಿಗೆ ಕಳಿಸುತ್ತೇವೆ, ಒಂದು ಕೈ ನೋಡಿಕೊಳ್ಳುತ್ತೇವೆ ಎಂದು ಸಚಿವ ಜನಾರ್ದನರೆಡ್ಡಿ ಹಾಗೂ ಎಚ್ ಡಿ ಕುಮಾರಸ್ವಾಮಿ ಧಮಕಿ ಹಾಕುತ್ತಿದ್ದರು. ಇದೀಗ ಕಾಂಗ್ರೆಸ್ ಕೂಡಾ ಧಮಕಿ ಹಾಕಲು ಶುರು ಮಾಡಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಸಚಿವ ಜನಾರ್ದನರೆಡ್ಡಿಗೆ ಕೈಗೆ ಕೋಳ ತೋಡಿಸುವುದಾಗಿ 35927http://kannada.oneindia.com/img/2009/04/14-siddaramaiah3.jpg155581ಜನಾರ್ದನರೆಡ್ಡಿಗಣಿಗಾರಿಕೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ : ರೆಡ್ಡಿ/news/2009/04/27/mining-work-should-continue-says-janardhan-reddy.htmlಬಳ್ಳಾರಿ, ಏ. 27 : ಓಬಳಾಪುರಂ ಕಂಪನಿ ಸೇರಿದಂತೆ 5 ಕಂಪನಿಗಳ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ ಆಂಧ್ರ ಸರಕಾರಕ್ಕೆ ಸೂಚನೆ ನೀಡಿದೆ. ಆದರೆ, ಕಂಪನಿಯ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ಯಾರಿಂದಲೂ ಸಾಧ್ಯವಿಲ್ಲ. ಒಂದು ಕ್ಷಣವೂ ಮೈನಿಂಗ್ ನಿಲ್ಲುವುದಿಲ್ಲ ಎಂದು ಹೇಳುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ 36228http://kannada.oneindia.com/img/2009/04/27-janardhana-reddy2.jpg108819ಸಿದ್ದರಾಮಯ್ಯಕೆಎಸ್ ಅಶ್ವತ್ಥ್ ಅವರಿಗೆ ಬೆಂಗಳೂರಿನಲ್ಲಿ ಸನ್ಮಾನ/news/2009/01/14/kannada-actor-ks-ashwath-felicitated-in-bengaluru.htmlಬೆಂಗಳೂರು, ಜ. 14 : ಕನ್ನಡ ಚಿತ್ರರಂಗದ ಹಿರಿಯ ನಟ ಕೆ.ಎಸ್ ಅಶ್ವತ್ಥ್ ಅವರನ್ನು ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತಂಜಲಿ ಯೋಗಾಶ್ರಮ ಟ್ರಸ್ಟ್ ನ ಬೆಳ್ಳಿಹಬ್ಬ ಆಚರಣೆಯ ಸಂದರ್ಭದಲ್ಲಿ ಸನ್ಮಾನಿಸಿದರು. ಟ್ರಸ್ಟ್ ನ ಅಧ್ಯಕ್ಷ ಪ್ರಕಾಶ್ ಯೋಗಿ ಮತ್ತು ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಚಿರಂಜೀವ್ ಸಿಂಗ್ ಅವರು ಉಪಸ್ಥಿತರಿದ್ದರು. ಚಿತ್ರ : ಎಂ.ಎಂ. 34065http://kannada.oneindia.com/img/2009/01/14-ks-ashwath-felicitation.jpg108819ಸಿದ್ದರಾಮಯ್ಯನನ್ನ ತಲೆ ಕತ್ತರಿಸಿ ಸಿದ್ದರಾಮಯ್ಯ ಸವಾಲು/news/2009/04/08/siddaramaiah-criticises-hindutva-and-bjp.htmlಮೈಸೂರು, ಏ. 8 : ನಾನು ಹಿಂದುತ್ವದ ವಿರೋಧಿಸುತ್ತೇನೆ. ನನ್ನ ತಲೆಯನ್ನು ಕಡಿಯುತ್ತೀರಾ ? ಮಂಗಳವಾರ ನಗರದಲ್ಲಿ ಕಾಂಗ್ರೆಸ್ ಪಕ್ಷ ಏರ್ಪಡಿಸಿದ್ದ ಚುನಾವಣೆ ಪ್ರಚಾರ ಸಭೆಯಲ್ಲಿ ಹೀಗೆ ಪ್ರಶ್ನಿಸಿದವರು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ. ಹಿಂದೂತ್ವ ವಿರೋಧಿಸುವವರ ಕೈ, ತಲೆ ಕತ್ತರಿಸು, ತಿಥಿ ಮಾಡಬೇಕಾಗುತ್ತದೆ ಎಂದು ಹೇಳಿಕೆಗೆ ಸಿದ್ದು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಾನು ಹಿಂದುತ್ವ ವಿರೋಧಿಸಿದರೆ 35802http://kannada.oneindia.com/img/2009/04/08-siddaramaiah2e.jpg108819ಸಿದ್ದರಾಮಯ್ಯಹಳೆ ಮುದುಕಿಗೆ ಚಿರಯುವಕ ಸಿದ್ದು ಕ್ಯಾಪ್ಟನ್?/news/2009/04/11/siddaramaiah-may-appoint-for-kharges-post.html*ಮೃತ್ಯುಂಜಯ ಕಲ್ಮಠಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸತತ ಎರಡು ವರ್ಷಗಳ ಹೋರಾಟ, ಮುಸುಕಿನ ಗುದ್ದಾಟ, ಮುನಿಸಿಕೊಂಡು ರೆಸಾರ್ಟ್ ಗಳ ಗುಪ್ತಸಭೆ ಹಾಗೂ ಸ್ಥಳೀಯ ಮುಖಂಡರ ಕೈಗೆ ಸಿಗದಿರುವ ನಾಟಕಕ್ಕೆ ಕೊನೆಗೂ ತೆರೆ ಬೀಳುವ ಲಕ್ಷಣಗಳು ಕಂಡು ಬಂದಿವೆ. ಪ್ರತಿಪಕ್ಷ ಸ್ಥಾನ ನೀಡದಿದ್ದರೆ ಚುನಾವಣೆ ಪ್ರಚಾರಕ್ಕೆ ತೆರಳುವುದಿಲ್ಲ ಎಂದು ಸೆಡವು ಮಾಡಿಕೊಂಡು ಸಿಟ್ಟಿನಿಂದ ಗುಡುಗಿದ್ದ ಸಿದ್ದುಗೆ ಕಾಂಗ್ರೆಸ್ 35886http://kannada.oneindia.com/img/2009/04/11-siddaramaiah2e.jpg108819ಸಿದ್ದರಾಮಯ್ಯಪ್ರತಿಪಕ್ಷ ಸ್ಥಾನ ಖರ್ಗೆ ರಾಜೀನಾಮೆ ನೀಡಿಲ್ಲ, ಆರ್ ವಿ/news/2009/04/13/kharge-not-to-resign-his-post-says-deshpande.htmlಕೊಪ್ಪಳ, ಏ. 13 : ಮಹತ್ವದ ವಿದ್ಯಮಾನವೊಂದರಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಲ್ಲಿಕಾರ್ಜುನ ಖರ್ಗೆ ಪ್ರತಿಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಈ ಸ್ಥಾನ ಲಭಿಸಲಿದೆ ಎನ್ನುವ ಲೆಕ್ಕಾಚಾರ ಹಾಕಲಾಗಿತ್ತು. ಆದರೆ, ಕೆಪಿಪಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಇದನ್ನು ಸಾರಾಸಗಟಾಗಿ ತಳ್ಳಿಹಾಕಿದ್ದು, ಮಲ್ಲಿಕಾರ್ಜುನ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ 35905http://kannada.oneindia.com/img/2009/04/13-kharge2.jpg108819ಸಿದ್ದರಾಮಯ್ಯಜನಾರ್ದನರೆಡ್ಡಿ, ಎಚ್ಡಿಕೆ ಜೈಲಿಗೆ : ಸಿದ್ದರಾಮಯ್ಯ/news/2009/04/14/siddu-breaks-silence-targets-reddy-hdk.htmlಬಿಜಾಪುರ, ಏ. 14 : ಈವರೆಗೂ ಜೈಲಿಗೆ ಕಳಿಸುತ್ತೇವೆ, ಒಂದು ಕೈ ನೋಡಿಕೊಳ್ಳುತ್ತೇವೆ ಎಂದು ಸಚಿವ ಜನಾರ್ದನರೆಡ್ಡಿ ಹಾಗೂ ಎಚ್ ಡಿ ಕುಮಾರಸ್ವಾಮಿ ಧಮಕಿ ಹಾಕುತ್ತಿದ್ದರು. ಇದೀಗ ಕಾಂಗ್ರೆಸ್ ಕೂಡಾ ಧಮಕಿ ಹಾಕಲು ಶುರು ಮಾಡಿದ್ದು, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮತ್ತು ಸಚಿವ ಜನಾರ್ದನರೆಡ್ಡಿಗೆ ಕೈಗೆ ಕೋಳ ತೋಡಿಸುವುದಾಗಿ 35927http://kannada.oneindia.com/img/2009/04/14-siddaramaiah3.jpgnews"> ಆರೋಗ್ಯ ಇಲಾಖೆ ಸತ್ತಿದೆ :ಎಂಸಿ ನಾಣಯ್ಯ | Yeddyurappa | Janardhan Reddy | M C Nanaiah | Siddaramaiah | Session | Sriramulu | ಆರೋಗ್ಯ ಇಲಾಖೆ ಸತ್ತಿದೆ :ಎಂಸಿ ನಾಣಯ್ಯ - Kannada Oneindia

ಆರೋಗ್ಯ ಇಲಾಖೆ ಸತ್ತಿದೆ :ಎಂಸಿ ನಾಣಯ್ಯ

MC Nanaiah
ಬೆಂಗಳೂರು, ಜು. 13 : ಮೈಸೂರಿನ ಕ್ಯಾತಮಾರನಹಳ್ಳಿ ಗಲಭೆಯ ತಿಕ್ಕಾಟ ಮುಗಿದ್ದು, ಆರೋಗ್ಯ ಇಲಾಖೆಗಳ ಅವ್ಯವಸ್ಥೆಗಳಿಗೆ ಸಂಬಂಧಿಸಿದಂತೆ ಇಂದು ವಿಧಾನ ಪರಿಷತ್ ನಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ ಪ್ರತ್ಯಾರೋಪಗಳ ಸುರಿಮಳೆಯಾಯಿತು. ಜೆಡಿಎಸ್ ಸದಸ್ಯರಿಂದ ಬಾವಿಗಿಳಿದು ಪ್ರತಿಭಟನೆ. ಸಚಿವರಾದ ಜನಾರ್ದನರೆಡ್ಡಿ, ಶ್ರೀರಾಮುಲು ಮತ್ತು ಜೆಡಿಎಸ್ ನ ಎಂಸಿ ನಾಣಯ್ಯ ಅವರ ನಡುವೆ ವಾಕ್ಸಮರ. ಸರಕಾರದ ವಿರುದ್ದ ಸಿದ್ದರಾಮಯ್ಯ ಅವರ ಟೀಕಾ ಪ್ರಹಾರ ಹಾಗೂ ಸಿದ್ದರಾಮಯ್ಯ ಮತ್ತು ಸಚಿವ ಈಶ್ವರಪ್ಪ ನಡುವಿನ ಜಟಾಪಟಿ ಇಂದಿನ ವಿಧಾನ ಮಂಡಲ ಅಧಿವೇಶನದ ವಿಶೇಷವಾಗಿದೆ.

ಆರೋಗ್ಯ ಇಲಾಖೆ ಸತ್ತಿದೆ. ಕೆಲಸಕ್ಕೆ ಬಾರದ ಇಂತಹ ಇಲಾಖೆ ಏಕೆ ಬೇಕು ? ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ ರೋಗಗಳಿಂದ ಕಾಯಿಲೆಗಳು ಜನರನ್ನು ಕಿತ್ತು ತಿನ್ನತೊಡಗಿವೆ. ಇದ್ದೂ ಇಲ್ಲದಂತಾಗಿರುವ ಇಲಾಖೆಯನ್ನು ಮುಚ್ಚಿಬಿಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಶ್ರೀರಾಮುಲು, ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರಿಲ್ಲದಿರುವುದು ನಾವು ಮಾಡಿದ ತಪ್ಪಲ್ಲ. ಈ ಹಿಂದೆ ಇದ್ದವರು ಮಾಡಿದ ತಪ್ಪು ಎಂದು ಹೇಳಿದ ಮಾತಿಗೆ ಪ್ರತಿಪಕ್ಷಗಳಿಗೆ ಕೆರಳಿಸುವಂತೆ ಮಾಡಿತು. ಸಚಿವರ ವಿರುದ್ಧ ಹರಿಹಾಯ್ದ ಪ್ರತಿಪಕ್ಷಗಳು ನೀವು ಮಾಡುತ್ತಿರುವ ಘನಕಾರ್ಯವನ್ನು ತೋರಿಸಿ ಎಂದು ಏರಿದ ಧ್ವನಿಯಲ್ಲಿ ಮಾತಿಗಿಳಿದರು.

ಕೂಡಲೇ ಶ್ರೀರಾಮುಲು ಬೆಂಬಲಕ್ಕೆ ನಿಂತ ಸಚಿವ ಜನಾರ್ದನರೆಡ್ಡಿ, ನಾವು ಆಡಳಿತಕ್ಕೆ ಬಂದು ಒಂದು ವರ್ಷವಾಗಿದೆ. ಆಡಳಿತ ನಡೆಸಿದ ಇವರು ರಾಜ್ಯವನ್ನು ಹಾಳು ಮಾಡಿದ್ದಾರೆ. ಹಿರಿಯರಾದ ನಾಣಯ್ಯ ಅವರು ಹುಚ್ಚುಚ್ಚಾಗಿ ಮಾತನಾಡುತ್ತಿದ್ದಾರೆ. ಮೊದಲು ಬಿಪಿಯನ್ನು ಚೆಕ್ ಮಾಡಿಸಿಕೊಳ್ಳಿ ಎಂದು ಹೇಳಿದ ಮಾತಿಗೆ ಸದನದಲ್ಲಿ ತೀವ್ರ ಕೋಲಾಹಲ ಉಂಟಾಯಿತು. ಈ ಮಾತಿಗ ತೀವ್ರವಾಗಿ ಕೋಪಗೊಂಡ ಸದಸ್ಯ ಶ್ರೀಕಂಠೇಗೌಡ, ಪ್ರತಿಪಕ್ಷದವರು ಪ್ರಶ್ನೆ ಕೇಳಿದರೆ ಸಮಾಧಾನದಿಂದ ಉತ್ತರಿಸಬೇಕಾಗಿರುವುದು ಸರಕಾರದ ಕರ್ತವ್ಯ. ಅದನ್ನು ಬಿಟ್ಟು ಸಚಿವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ ಎಂದು ಬಾವಿಗಿಳಿದು ಪ್ರತಿಭಟನೆ ಆರಂಭಿಸಿದರು.

ಸರಕಾರದ ವಿರುದ್ಧ ಸಿದ್ದು ಪ್ರಹಾರ

ರಸಗೊಬ್ಬರ ಹಾಗೂ ಬಿತ್ತನೆ ಬೀಜ ಒದಗಿಸುವಲ್ಲಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡ ಘಟನೆ ವಿಧಾನಸಭೆಯಲ್ಲಿಂದು ನಡೆಯಿತು. ರಸಗೊಬ್ಬರ ಸಮಸ್ಯೆ ಹಿನ್ನೆಲೆಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆಂಬ ವಿಷಯ ಆಧರಿಸಿ ನಿಯಮ 60ರ ಅಡಿಯಲ್ಲಿ ನಿಲುವಳಿ ಮಂಡಿಸಲು ಪ್ರಾಸ್ತವಿಕ ಭಾಷಣ ಮಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ರಸಗೊಬ್ಬರ ಸಮಸ್ಯೆದ ಕೊರತೆಯೇ ಇಲ್ಲ. ಆದರೆ, ಸಮರ್ಪಕವಾಗಿ ವಿತರಣೆ ಮಾಡುವಲ್ಲಿ ಸರಕಾರ ವಿಫಲವಾಗಿದೆ.

ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಬಿದ್ದಿದ್ದು, 70 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೃಷಿಗೆ ಸಿದ್ಧತೆ ನಡೆಸಲಾಗಿದ್ದು, ಇನ್ನು 244 ಹೋಬಳಿಗಳಲ್ಲಿ ಮಳೆ ಬಿದ್ದಿಲ್ಲ ಎಂದು ಸದನದಲ್ಲಿ ವಿವರಣೆ ನೀಡಿದರು. ರಾಜ್ಯಕ್ಕೆ 4 ಲಕ್ಷ ಟನ್ ಯೂರಿಯಾ ಸಾಕು. ಇಷ್ಟು ಯೂರಿಯಾ ರಾಜ್ಯದಲ್ಲಿ ಲಭ್ಯವಿದ್ದರೂ, ಆಭಾವ ಸೃಷ್ಟಿಸಿದ ಕಾರಣವೇನು ಎಂದು ಪ್ರಶ್ನಿಸಿದರು. ಯಡಿಯೂರಪ್ಪ ಹಾಗೂ ಕೃಷಿ ಸಚಿವರು ಭಿನ್ನ ಹೇಳಿಕೆಗಳ ಮೂಲಕ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದರು.

ಸಿದ್ದ-ಈಶ್ವರಪ್ಪ ಜಟಾಪಟಿ

ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಕೆ ಎಸ್ ಈಶ್ವರಪ್ಪ ನಡುವೆ ಮಾತಿನ ಚಕಮಕಿ ನಡೆದ ಘಟನೆ ವಿಧಾನಸಭೆಯಲ್ಲಿಂದು ನಡೆಯಿತು. ಪ್ರಶ್ನೋತ್ತರ ಕಲಾಪ ನಂತರ ಸರಗೊಬ್ಬರ ಕೊರತೆ ಸಂಬಂಧ ನಿಲುವಳಿ ಸೂಚನೆಗೆ ಮುಂದಾದ ಸಿದ್ದರಾಮಯ್ಯ ಅವರಿಗೆ ಛೇಡಿಸಿದ ಈಶ್ವರಪ್ಪ, ಮೊನ್ನೆ ಮೈಸೂರು ಕೋಮುಗಲಭೆ ವಿಷಯವನ್ನು ಪ್ರಸ್ತಾಪಿಸಿದ್ರಿ, ಆದರೆ ಈ ವಿಷಯವನ್ನು ಕೈಬಿಟ್ಟು ಈಗ ರಸಗೊಬ್ಬರ ಎತ್ತಿದ್ದೀರಿ ಎಂದು ಚುಚ್ಚಿದರು. ಅಲ್ಲದೇ ಮೊದಲ ಎತ್ತಿದ ವಿಷಯ ಬಿಟ್ಟು ಬೇರೆ ವಿಷಯದತ್ತ ಹೋಗುವುದು ನಿಯಮ ಆದರೆ, ಮೊದಲಿನ ವಿಷಯ ಬಿಟ್ಟು ಬೇರೊಂದು ವಿಷಯವನ್ನು ಪ್ರಸ್ತಾಪಿಸುತ್ತಿರುವ ಪ್ರತಿಪಕ್ಷದ ಬಗ್ಗೆ ಜನರು ಏನಂದುಕೊಂಡಾರು ಎಂದರು.

ಇದರಿಂದ ಕೆರಳಿದ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ಹೇಳಿಗೆ ಗದ್ದಲ ಆರಂಭಿಸಿದರು. ತಕ್ಷಣ ಎದ್ದು ನಿಂತ ಸಿದ್ದರಾಮಯ್ಯ ನಗೆಪಾಟಲಿಗೆ ಈಡಾಗಿರುವುದು ಯಾರೆಂಬುದು ಇಡೀ ದೇಶಕ್ಕೆ ಗೊತ್ತಿದೆ. ನಿಮ್ಮಿಂದ ಕಲಿಯುವ ಅಗತ್ಯವಿಲ್ಲ ಎಂದು ಈಶ್ವರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡರು.

(ದಟ್ಸ್ ಕನ್ನಡ ವಾರ್ತೆ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+