ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸ್ಕೃತ ವಿವಿ ಸ್ಥಾಪನೆಬೇಡ : ಕಿರಂ ನಾಗರಾಜ್

By Staff
|
Google Oneindia Kannada News

Ki Ram Nagaraj
ಬೆಂಗಳೂರು, ಜು. 13 : ಸಂಸ್ಕೃತ ಓದಲು ಪಂಡಿತರ ಮಧ್ಯಸ್ಥಿಕೆಬೇಕು. ಬಸವಣ್ಣನವರ ವಚನ ಓದಲು ಯಾರ ಮಧ್ಯಸ್ಥಿಕೆಯೂ ಬೇಕಿಲ್ಲ. ಇದು ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆ ಕುರಿತು ಪ್ರೊ ಕಿ ರಂ ನಾಗರಾಜ್ ಆಡಿದ ವ್ಯಂಗ್ಯದ ಮಾತು.

ಬೆಂಗಳೂರು ನಗರ ಜಿಲ್ಲಾ 5ನೇ ಕನ್ನಡ ಸಾಹಿತ್ಯ ಪರಿಷತ್ ಸಾಮರೋಪ ಸಮಾರಂಭ ಭಾಷಣದಲ್ಲಿ ಮಾತನಾಡುತ್ತಿದ್ದರು. ಸಂಸ್ಕೃತವನ್ನು ಸೀಮಿತ ವಲಯ ಓದುತ್ತಿದೆ. ಈಗಾಗಲೇ ದೇಶದಲ್ಲಿ 12 ವಿವಿಗಳಿವೆ. ಅನೇಕ ಸಂಸ್ಥೆಗಳು ಸಂಸ್ಕೃತ ಕಲಿಸುತ್ತವೆ. ಜೊತೆಗೂ ಎಲ್ಲ ವಿವಿಗಳಲ್ಲಿಯೂ ಸಂಸ್ಕೃತ ವಿಭಾಗಗಳಿವೆ. ಸಂಸ್ಕೃತದ ಜ್ಞಾನವನ್ನು ಪ್ರಾದೇಶಿಕ ಭಾಷೆಗೆ ಹರಿಸುವುದೇ ಇವುಗಳ ಉದ್ದೇಶವಾಗಿದೆ. ಹೀಗಿರುವಾಗ ಮತ್ತೊಂದು ಪ್ರತ್ಯೇಕ ವಿವಿ ಅಗತ್ಯವೇ ಎಂದು ಅವರು ಪ್ರಶ್ನಿಸಿದರು.

ಸಂಸ್ಕೃತದ ಎಲ್ಲ ಪ್ರಮುಖ ಗ್ರಂಥಗಳು ಈಗಾಗಲೇ ಬೇರೆ ಬೇರೆ ಭಾಷೆಯಲ್ಲಿ ಅನುವಾದಗೊಂಡಿವೆ. ಸಂಸ್ಕೃತಕ್ಕೆ ಈವರೆಗೆ ಹರಿದ ಹಣದ ಒಂದು ಭಾಗ ಇತರೆ ಭಾಷೆಗೆ ಸಿಕ್ಕಿದ್ದರೆ ಅವು ಉದ್ಧಾರವಾಗುತ್ತಿದ್ದವು ಎಂದು ಹೇಳಿದರು. ಕನ್ನಡ ಭಾಷೆ ನದಿ ಇದ್ದ ಹಾಗೆ. ಅಕ್ಕಪಕ್ಕದ ಮರಗಿಡ, ಪ್ರಾಣಿ ಪಕ್ಷಿ, ಜನರಿಗೆ ನೀರುಣಿಸು ಜೀವಂತವಾಗಿರಿಸುವ ಜೀವನದಿ ಎಂದರು. ಸಂಸ್ಕೃತ ವಜ್ರ ಇದ್ದ ಹಾಗೆ, ವಜ್ರದ ಹಾರ ಬೇಕೋ ? ನದಿ ಬೇಕೋ ? ಸಂಸ್ಕೃತ ವಿವಿ ಕನ್ನಡದ ಬೆಳವಣಿಗೆ ಪೂರಕವಾಗುವ ಬದಲು ಪೆಟ್ಟುಕೊಡುತ್ತವೆ ಎಂದು ಅಭಿಪ್ರಾಯಪಟ್ಟರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X