ವೈನ್ ಮೇಳಕ್ಕೆ ಸಜ್ಜಾದ ಲಾಲ್ ಬಾಗ್

ವೈನ್ ಬಾಟಲಿಗಳನ್ನು ಮಾರಾಟ ಮಾಡಲು ವೈನ್ ಬಾಟಿಕ್ ಮತ್ತು ತಿನ್ನಬಹುದಾದ ಆಹಾರಗಳ ಜೊತೆ ಮಾರಾಟ ಮಾಡುವ ವೈನ್ ಟ್ಯಾವರಿನ್ ಮಳಿಗೆಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ. ಈ ಎರಡೂ ರೀತಿಯ ವೈನ್ ಅಂಗಡಿಗಳ ಸ್ಥಾಪನೆಗೆ ಆಯಾ ಜಿಲ್ಲಾಧಿಕಾರಿಗಳು ಪರವಾನಿಗೆ 5000 ರುಪಾಯಿ ಮತ್ತು ವೈನ್ ಟ್ಯಾವರಿನ್ ಮಳಿಗೆಗಳಿಗೆ ರುಪಾಯಿ 1000 ಶುಲ್ಕ ಇರುತ್ತದೆ ಎಂದರು.
ಸೂಪರ್ ಮಾರುಕಟ್ಟೆ, ದೊಡ್ಡ ದೊಡ್ಡ ಮಾಲ್ ಗಳಲ್ಲಿ ವೈನ್ ಬಾಟಿಕ್ ಗಳನ್ನು ಸ್ಥಾಪಿಸಬಹುದು. ಸಭೆ ಸಮಾರಂಭಗಳಲ್ಲಿ ವೈನ್ ವಿತರಿಸಲು 1000 ರುಪಾಯಿ ಶುಲ್ಕ ಕಟ್ಟಿ ವಿಶೇಷ ಅನುಮತಿ ಪಡೆಯಬಹುದು ಎಂದು ಅವರ ವಿವರಿಸಿದರು.
ಜುಲೈ 10ರಿಂದ ವೈನ್
ಫಲಪುಷ್ಪ ಪ್ರದರ್ಶನದ ಜೊತೆಗೆ ವೈನ್ ಮೇಳ ಕೂಡ ನಗರದ ಲಾಲ್ ಬಾಗ್ ನ ಗಾಜಿನ ಮನೆಯಲ್ಲಿ ನಡೆಸಲು ನಿರ್ಧರಿಸಿದ್ದು, ಅದು ಇದೇ ಜುಲೈ 10ರಿಂದ ಮೂರು ದಿನ ನಡೆಯಲಿದೆ. ತೋಟಗಾರಿಕೆ ಸಚಿವ ಉಮೇಶ್ ಕತ್ತಿ ವೈನ್ ಮೇಳವನ್ನು ಉದ್ಘಾಟಿಸಲಿದ್ದಾರೆ.
(ದಟ್ಸ್ ಕನ್ನಡ ವಾರ್ತೆ)












Click it and Unblock the Notifications