ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಸಾಯಿಖಾನೆ ನಿಷೇಧ : ವಿ ಎಸ್ ಆಚಾರ್ಯ

By Staff
|
Google Oneindia Kannada News

VS Acharya
ಬೆಂಗಳೂರು, ಜು. 3 : ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಅವ್ಯಾಹತವಾಗಿ ಗೋವುಗಳ ಹತ್ಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಗೋವುಗಳ ರಕ್ಷಣೆಗೆ ಸರಕಾರ ಕಸಾಯಿಖಾನೆಗಳನ್ನು ನಿಷೇಧಿಸಲು ಮುಂದಾಗಿದ್ದು, ಗೋವು ಹತ್ಯೆ ನಿಯಂತ್ರಣ ಕಾಯ್ದೆ ಜಾರಿಗೊಳಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ಆಚಾರ್ಯ, 1964ರಲ್ಲಿ ಭಾರತೀಯ ಸಂವಿಧಾನದಲ್ಲಿ ರೂಪಿಸಲಾಗಿರುವ ಕಲಂ 48 ಅಡಿಯ ಪ್ರಕಾರ ಗೋವು ರಕ್ಷಣೆ ಏಕೈಕ ಉದ್ದೇಶದಿಂದ ರಾಜ್ಯದಲ್ಲಿ ಗೋವು ಹತ್ಯೆ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಸಮಗ್ರ ಚಿಂತನೆ ನಡೆಸಲಾಗಿದೆ. ದೈವಿಸ್ವರೂಪವೆಂದು ಭಾವಿಸಿರುವ ಗೋವುಗಳ ಹತ್ಯೆ ಇತ್ತೀಚೆಗೆ ವ್ಯಾಪಕವಾಗಿದೆ. ಗೋವುಗಳನ್ನು ಕಸಾಯಿಖಾನೆಗೆ ತಳ್ಳುವ ದೊಡ್ಡ ಜಾಲವೇ ರಾಜ್ಯದಲ್ಲಿ ಸೃಷ್ಟಿಯಾಗಿದೆ. ಇದನ್ನು ತಡೆಗಟ್ಟಲು ಕ್ರಮಕೈಗೊಳ್ಳುವ ದೃಷ್ಟಿಯಿಂದ ಕಾನೂನು ರೂಪಿಸುವುದು ಉಚಿತ ಎನ್ನುವ ಸಲಹೆಗಳು ಕೇಳಿ ಬಂದಿವೆ ಎಂದರು.

ಗೋವುಗಳ ಹತ್ಯೆ ತಡೆಯುವುದು ಸರಕಾರದ ಕರ್ತವ್ಯ. ಈ ಹಿನ್ನೆಲೆಯಲ್ಲಿ ಗೋವುಗಳ ಹತ್ಯೆ ನಿಯಂತ್ರಣ ತಡೆ ಕಾಯ್ದೆ ಜಾರಿಗೆ ಚಿಂತನೆ ನಡೆಸಲಾಗಿದೆ. ಇದರ ಸಾಧಕ ಬಾಧಕಗಳನ್ನು ಚರ್ಚಿಸಿ ಅಧಿಕೃತವಾಗಿ ಘೋಷಿಸಲಾಗುವುದು ಎಂದು ಆಚಾರ್ಯ ಸ್ಪಷ್ಟಪಡಿಸಿದರು. ಗೋವು ಹತ್ಯೆ ನಿಯಂತ್ರಣ ಕಾಯ್ದೆಯನ್ನು ದೇಶದ ಒಂಬತ್ತು ರಾಜ್ಯಗಳಲ್ಲಿ ಈಗಾಗಲೇ ಜಾರಿಗೆ ತರಲಾಗಿದೆ.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X