ಸತ್ಯಂ ಕಂಪ್ಯೂಟರ್ಸ್ ಈಗ ಮಹೀಂದ್ರ ಸತ್ಯಂ
ಹೈದರಾಬಾದ್, ಜೂ. 22 : ಹಗರಣದಿಂದ ತತ್ತರಿಸಿದ್ದ ಸತ್ಯಂ ಕಂಪನಿಯ ಹೆಸರು ಇನ್ನು ಮುಂದೆ ಮಹೀಂದ್ರ ಸತ್ಯಂ ಎಂದು ಬದಲಾಯಿಸಲಾಗಿದೆ. ಸಂಸ್ಥೆಯ ಈ ಹೊಸ ಬ್ರ್ಯಾಂಡನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ.
ಕಳೆದ ಏಪ್ರಿಲ್ ನಲ್ಲಿ ಸತ್ಯಂ ಕಂಪನಿಯನ್ನು ಟೆಕ್ ಮಹೀಂದ್ರ ಖರೀದಿಸಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಟೆಕ್ ಮಹೀಂದ್ರ ಕಂಪನಿಯ ಕಾರ್ಯ ನಿರ್ವಾಹಕ ಉಪಾಧ್ಯಕ್ಷ ವಿನೀತ್ ನಯ್ಯರ್, ನೂತನ ಆಡಳಿತ ಮಂಡಳಿಯು ಹೊಸ ಮೌಲ್ಯಗಳನ್ನು ಆಳವಡಿಸಿಕೊಳ್ಳಲಿದ್ದು, ಗ್ರಾಹಕರ ನಿರೀಕ್ಷೆ ಮೇರೆಗೆ ಸೇವೆ ಒದಗಿಸಲಾಗುವುದು ಎಂದರು. ಟೆಕ್ ಮಹೀಂದ್ರ ಒದಗುಸುತ್ತಿರುವ ಸೇವೆಯ ಮಾದರಿಯಲ್ಲಿ ಸತ್ಯಂ ಕಾರ್ಯನಿರ್ವಹಿಸಲಿದೆ ಎಂದು ಅವರು ಹೇಳಿದರು.
(ಏಜನ್ಸೀಸ್)












Click it and Unblock the Notifications