ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಂಗ್, ಅಡ್ವಾಣಿ ಪರಸ್ಪರ ಕ್ಷಮೆಯಾಚನೆ

By Staff
|
Google Oneindia Kannada News

Manmohan Singh
ನವದೆಹಲಿ, ಜೂ. 17 : ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ವೈಯಕ್ತಿಕ ಟೀಕೆಗಳನ್ನು ಮಾಡಿ ಹಾವು ಮುಂಗುಸುಗಳಂತೆ ಕಚ್ಚಾಡಿದ್ದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಬಿಜೆಪಿ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಪರಸ್ಪರ ಕ್ಷಮೆ ಯಾಚಿಸಿಕೊಂಡಿದ್ದಾರೆ. ಚುನಾವಣೆ ಸಮಯದಲ್ಲಿ ನಡೆದಿರುವ ಕಹಿ ಘಟನೆಗಳನ್ನು ಮರೆತು ಬಿಡಿ ಎಂದು ಉಭಯ ನಾಯಕ ರಾಜೀ ಸಂಧಾನ ಮಾಡಿಕೊಂಡಿದ್ದಾರೆ.

ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ಸಿಂಗ್ ತಮ್ಮ ಏರ್ ಕ್ರಾಫ್ಟ್ ನಲ್ಲಿ ಮನಸ್ಸುಬಿಚ್ಚಿ ಮಾತನಾಡಿದರು. ಚುನಾವಣೆ ಸಮಯದಲ್ಲಿ ನಾನೇನಾದರೂ ತೀವ್ರವಾಗಿ ನಿಮ್ಮ ಮೇಲೆ ವೈಯಕ್ತಿಕವಾಗಿ ಟೀಕೆ ಮಾಡಿದ್ದರೆ ಅದನ್ನು ಮರೆತುಬಿಡಿ ಎಂದರು. ಮೇ 16 ರಂದು ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿತು. ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವು ಸಾಧಿಸಿತು. ಆಗ, ಅಡ್ವಾಣಿ ನನಗೆ ಫೋನಾಯಿಸಿ ನಿಮ್ಮನ್ನು ದುರ್ಬಲ ಪ್ರಧಾನಿ ಎಂದು ಟೀಕಿಸಿದ್ದಕ್ಕೆ ಕ್ಷೆಮೆ ಇರಲಿ ಎಂದರು.

ಪ್ರತಿಯಾಗಿ ನಾನು ಕೂಡ ನಿಮಗೆ ನೋವಾಗುವ ಹಾಗೆ ನಡೆದುಕೊಂಡಿದ್ದರೆ ಕ್ಷಮೆ ಇರಲಿ ಎಂದು ಕೋರಿದೆ. ಅಡ್ವಾಣಿ ದೇಶ ಕಂಡ ಪ್ರಬುದ್ಧ ರಾಜಕಾರಣಿ. ನಾನು ಆಕಸ್ಮಿಕ ರಾಜಕಾರಣಿ. ಆದರೆ, ಸಮಯ ನಮ್ಮಿಂದ ಏನಾದರೂ ಆಡಿಸಿರಬಹುದು ಅದನ್ನೆಲ್ಲಾ ಮರೆತುಬಿಡಿ ಎಂದು ಮನವಿ ಮಾಡಿಕೊಂಡೆ. ಇದೀಗ ಅಡ್ವಾಣಿ ಪ್ರತಿಪಕ್ಷದ ನಾಯಕರಾಗಿದ್ದಾರೆ. ಅವರೊಂದಿಗೆ ದೇಶದ ಅಭಿವೃದ್ಧಿ ಕುರಿತು ಶ್ರಮಿಸುವೆ ಎಂದು ಸಿಂಗ್ ತಮ್ಮ ಮನದಾಳದ ಮಾತು ಬಹಿರಂಗಪಡಿಸಿದರು.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X