ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

10 ದಿನದೊಳಗೆ ಭಿನ್ನಮತ ಶಮನ: ಸಿಎಂ

By Staff
|
Google Oneindia Kannada News

Somashekar Reddy meets Yeddyurappa
ಬೆಂಗಳೂರು, ಜೂ. 9 : ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕಾರ್ಯವೈಖರಿಗೆ ಅತೃಪ್ತಿಯನ್ನು ಹೊರಗೆಡವಿದ್ದ ಬಳ್ಳಾರಿ ಶಾಸಕ ಹಾಗೂ ರೆಡ್ಡಿಗಳ ಸಹೋದರ ಸೋಮಶೇಖರರೆಡ್ಡಿ ಇಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಬಳ್ಳಾರಿ ಶಾಸಕರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಿರುವ ಸಿಎಂ, ಶೀಘ್ರದಲ್ಲಿ ಅತೃಪ್ತ ಶಾಸಕರ ಸಭೆ ಕರೆಯುವುದಾಗಿ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಸೋಮಶೇಖರರೆಡ್ಡಿ, ಬಳ್ಳಾರಿ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. 10 ದಿನದೊಳಗೆ ಬಳ್ಳಾರಿಯ ಮೂಲಭೂತ ಸಮಸ್ಯೆಗಳ ಬಗ್ಗೆ ಗಮನ ಹರಿಸಲಾಗುವುದು. ಅಲ್ಲದೇ ಕಳೆದ 23 ವರ್ಷಗಳಿಂದ ದಿನಗೂಲಿ ನೌಕರಿ ಮಾಡುತ್ತಿರುವ ಅನೇಕ ಜನರ ಉದ್ಯೋಗ ಖಾಯಂಗೊಳಿಸುವದು ಸೇರಿ ಅನೇಕ ವಿಚಾರಗಳನ್ನು ಯಡಿಯೂರಪ್ಪ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಬಳ್ಳಾರಿಯ ಅಭಿವೃದ್ಧಿ ಕಾರ್ಯಗಳಿಗೆ ಶೀಘ್ರ ಚಾಲನೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.

ಇತ್ತೀಚೆಗೆ ಮುಖ್ಯಮಂತ್ರಿಗಳು ಶಾಸಕರನ್ನು ನಿರ್ಲಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ಅನೇಕ ಶಾಸಕರಲ್ಲಿ ಅತೃಪ್ತಿ ಇರುವುದು ನಿಜ ಎಂದು ಒಪ್ಪಿಕೊಂಡ ಸೋಮಶೇಖರರೆಡ್ಡಿ, ಅನೇಕ ಶಾಸಕರು ತಮಗೆ ದೂರವಾಣಿ ಮೂಲಕ ಸಂಪರ್ಕಿಸಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇದನ್ನು ಕೂಡಾ ಸಿಎಂ ಅವರಿಗೆ ವಿವರಿಸಲಾಗಿದೆ. ಅತೃಪ್ತ ಶಾಸಕರ ಸಭೆಯನ್ನೂ ಶೀಘ್ರದಲ್ಲಿ ಕರೆಯಲಾಗುವುದು ಯಡಿಯೂರಪ್ಪ ಹೇಳಿದ್ದಾರೆ ಎಂದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X