ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯರಗೋಳು ಯೋಜನೆ ಶೀಘ್ರ ಜಾರಿ: ವರ್ತೂರು

By Staff
|
Google Oneindia Kannada News

Varthur Prakash
ಕೋಲಾರ, ಜೂ.6: ಕೋಲಾರ ತಾಲ್ಲೂಕಿನ ಅಮ್ಮನಲ್ಲೂರು ಗ್ರಾಮದಲ್ಲಿ ಶುಕ್ರವಾರ ಶಾಸಕರ ನಿಧಿಯಿಂದ 5 ಲಕ್ಷ ರು. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಶಾಸಕ ಹಾಗೂ ನಗರ ನೀರು ಸರಬರಾಜು ಮಂಡಳಿ ಅಧ್ಯಕ್ಷ ವರ್ತೂರ್ ಪ್ರಕಾಶ್ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಕ್ಷೇತ್ರದ 100ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಪ್ರತಿ ಗ್ರಾಮದಲ್ಲಿ 1-5 ಲಕ್ಷದವರೆಗೆ ಶಾಸಕರ ನಿಧಿ ಹಂಚಿಕೆ ಮಾಡಿ ಸಿಮೆಂಟ್ ಹಾಗೂ ಚರಂಡಿ ಕೆಲಸಗಳನ್ನು ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ 10 ಕಡೆ 5 ರಿಂದ 20 ಲಕ್ಷ ರು. ವೆಚ್ಚದಲ್ಲಿ ಚೆಕ್ ಡ್ಯಾಮ್ ನಿರ್ಮಾಣಕ್ಕೆ ಚಾಲನೆ ನೀಡಲಾಗುತ್ತಿದೆ ಎಂದರು. ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಗಮನ ನೀಡುತ್ತಿದ್ದು, ಮುಂದಿನ ವಾರದಲ್ಲಿ ಯರಗೋಳು ಯೋಜನೆಗೆ ಕಾಮಗಾರಿಗೆ ಚಾಲನೆ ನೀಡಲಾಗುವುದೆಂದರು.

ಕೋಲಾರ, ಮಾಲೂರು, ಬಂಗಾರಪೇಟೆ ತಾಲ್ಲೂಕಿಗಳಿಗೆ ಕುಡಿಯುವ ನೀರು ನೀಡುವ ಈ ಯೋಜನೆಯನ್ನು ಒಂದು ವರ್ಷದಲ್ಲಿ ಪೂರ್ಣ ಮಾಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಕಾಮಧೇನಹಳ್ಳಿ ರವಿಚಂದ್ರೇಗೌಡ, ಛತ್ರಕೋಡಹಳ್ಳಿ ರಾಜಗೋಪಾಲ್, ರಾಮು, ನಗರಸಭೆ ಮಾಜಿ ಅಧ್ಯಕ್ಷ ರಘುರಾಮ್, ಚಂದ್ರೇಗೌಡ, ಎಸ್.ಸತೀಶ್, ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X