ಮುಂಬೈ ದಾಳಿ ರುವಾರಿ ಸಯೀದ್ ಬಿಡುಗಡೆ

"ಗೃಹಬಂಧನದಲ್ಲಿದ್ದ ಜಮಾತ್ ಮುಖ್ಯಸ್ಥ ಹಫೀಜ್ ರನ್ನು ಬಂಧಮುಕ್ತಗೊಳಿಸಬೇಕು. ಅವರು ಉಗ್ರಗಾಮಿಯಲ್ಲ" ಎಂದು ಲಹೋರ್ ಹೈ ಕೋರ್ಟ್ ಆದೇಶ ನೀಡಿದೆ ಎಂದು ಜಮಾತ್ ಸಂಘಟನೆಯ ವಕ್ತಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಲಷ್ಕರ್ ಎ ತೋಯ್ಬಾ ಸಂಘಟನೆಯ ಅಂಗ ಸಂಸ್ಥೆಯಾದ ಜಮಾತ್ ಉದ್ ದವಾವನ್ನು ಉಗ್ರಗಾಮಿ ಸಂಘಟನೆ ಎಂದು ವಿಶ್ವಸಂಸ್ಥೆ ಘೋಷಿಸಿದ ಮೇಲೆ , ಪಾಕಿಸ್ತಾನ ಸರ್ಕಾರ ಒತ್ತಾಯ ಪೂರ್ವಕವಾಗಿ ಹಫೀಜ್ ನನ್ನು ಬಂಧಿಸಿ ಗೃಹ ಬಂಧನದಲ್ಲಿರಿಸಿತ್ತು. ನವೆಂಬರ್ 26, 28 ರಂದು ನಡೆದ ಮುಂಬೈ ಉಗ್ರರ ದಾಳಿಯಲ್ಲಿ 170 ಕ್ಕೂ ಅಧಿಕ ಜನ ಹತರಾಗಿದ್ದರು. ಈ ದಾಳಿಯ ಹಿಂದಿನ ರುವಾರಿ ಹಫೀಜ್ ಹಾಗೂ ಸಹಚರ ನಜೀರ್ ನನ್ನು ಬಂಧಿಸಲಾಗಿತ್ತು. ಈಗ ಲಹೋರ್ ಹೈ ಕೋರ್ಟ್ ಆದೇಶದಿಂದ ಈ ಇಬ್ಬರೂ ಸ್ವತಂತ್ರರಾಗಿದ್ದಾರೆ.
(ಏಜೆನ್ಸೀಸ್)












Click it and Unblock the Notifications