ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯಡಿಯೂರಪ್ಪ ಸರ್ಕಾರ ಪತನ: ಬಸವನಗೌಡ ಯತ್ನಾಳ್

By Staff
|
Google Oneindia Kannada News

K S Eshwarappa
ಬೆಂಗಳೂರು, ಮೇ. 31: ಒಂದು ವರ್ಷದ ಸಂಭ್ರಮಾಚರಣೆಯಲ್ಲಿ ಮೈಮರೆತಿರುವ ಯಡಿಯೂರಪ್ಪ ಹಾಗೂ ಸಂಗಡಿಗರಿಗೆ , ಬಿಜೆಪಿಯಿಂದ ಉಚ್ಚಾಟನೆಗೊಂಡ ನಾಯಕ ಬಸವಗೌಡ ಪಾಟೀಲ್ ಯತ್ನಾಳ್ ಎಚ್ಚರಿಕೆ ಗಂಟೆ ನೀಡಿದ್ದಾರೆ. ಯಡಿಯೂರಪ್ಪ ಅವರ ಸರ್ಕಾರ ಶೀಘ್ರದಲ್ಲೇ ಪತನವಾಗಲಿದ್ದು, ಉತ್ತರಕರ್ನಾಟಕ ಮೂಲದ ನಾಯಕರು ಸಿಎಂ ಪಟ್ಟಏರಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸಾರಿಗೆ ಸಚಿವ ಆರ್ ಅಶೋಕ್ ಅವರು ಇದು ತಿರುಕನ ಕನಸು, ಯತ್ನಾಳ್ ಅವರ ಬಂಡವಾಳ ಏನು ಎಂಬುದು ಕಳೆದ ಚುನಾವಣೆ ಫಲಿತಾಂಶದಲ್ಲಿ ಸಾಬೀತಾಗಿದೆ. ಸರ್ಕಾರವನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದಿದ್ದಾರೆ.

"ಸಿಎಂ ಮೇಲೆ ರೆಡ್ಡಿ ಸಹೋದರರಿಗೆ ಅಸಮಾಧಾನವಿದೆ. ಸದ್ಯದಲ್ಲೇ ಬಿಜೆಪಿ ವರಿಷ್ಠರಿಂದ ಭಿನ್ನಮತ ಸ್ಫೋಟಗೊಳ್ಳಲಿದೆ. ನಾನು ಎಂದೂ ಪಕ್ಷ ವಿರೋಧಿ ಚಟುವಟಿಕೆ ನಡೆಸಿಲ್ಲ. ಶಿಸ್ತು ಸಮಿತಿ ಶಿಫಾರಸು ಇಲ್ಲ. ಬಹುಶಃ ಹೈ ಕಮಾಂಡ್ ಗಮನಕ್ಕೆ ಬರದೇ ರಾಜ್ಯಾಧ್ಯಕ್ಷರು ಕ್ರಮ ಕೈಗೊಂಡಿದ್ದಾರೆ. ಮೊದಲು ನನ್ನ ಬಹಿಷ್ಕಾರ ಮಾಡಲು ಸರಿ ಕಾರಣ ನೀಡಲಿ" ಎಂದು ಯತ್ನಾಳ್ ಸವಾಲೆಸಿದಿದ್ದಾರೆ. ಉಚ್ಚಾಟನೆ ಕ್ರಮವನ್ನು ಪ್ರಶ್ನಿಸಿ ಹೈಕಮಾಂಡ್ ಜೊತೆ ಚರ್ಚೆ ನಡೆಸುವುದಾಗಿ ಹೇಳಿದರು.

ಉತ್ತರ ಕರ್ನಾಟಕ ಮೂಲದ ನಾಯಕರಿಗೆಗೆ ಈ ಬಾರಿ ಸಿಎಂ ಆಗುವ ಯೋಗ ಒದಗಲಿದೆ. ಸಿಎಂ ಕುಟುಂಬ ಭ್ರಷ್ಟಾಚಾರದಲ್ಲಿ ಭಾಗಿ, ಅಪರೇಷನ್ ಕಮಲ, ವರ್ಗಾವಣೆ ದಂಧೆಯ ಮೂಲ ಸ್ಥಾನ ಸಿಎಂ ಅವರ ಕುಟುಂಬ ಎಂದಿದ್ದಾರೆ. ರಾಜ್ಯದ ಲಿಂಗಾಯತ ಮುಖಂಡರನ್ನು ಒಡೆಯುವ ತಂತ್ರವನ್ನು ಸಿಎಂ ಅನುಸರಿಸುತ್ತಿದ್ದಾರೆ ಎಂದಿದ್ದಾರೆ. 40 ಕ್ಕೂ ಅಧಿಕ ಜನ ಶಾಸಕ, ಸಂಸದರ ಬೆಂಬಲ ಇದೆ. ರೇಣುಕಾಚಾರ್ಯ, ಈಶ್ವರಪ್ಪ , ರೆಡ್ಡಿ ಸಹೋದರರ ಬೆಂಬಲ ನನಗಿದೆ. ಮಂತ್ರಿಗಳಿಗೆ ಹೆಚ್ಚಿನ ಅಧಿಕಾರ ನೀಡಿಲ್ಲ. ಎಲ್ಲೆಡೆ ಯಡಿಯೂರಪ್ಪ, ಶೋಭಾ ಕರಂದ್ಲಾಜೆ ಅವರ ಹೆಸರು ರಾರಾಜಿಸುತ್ತಿದೆ.

ಈಶ್ವರಪ್ಪ ಸ್ಪಷ್ಟನೆ: ಈ ಮಧ್ಯೆ ಇಂದಿನ ವಿಕಾಸ ಸಂಕಲ್ಪ ಸಮಾವೇಶಕ್ಕೆ ಗೈರು ಹಾಜರಾಗಿರುವ ಸಚಿವ ಕೆ.ಎಸ್ .ಈಶ್ವರಪ್ಪ ಶಿವಮೊಗ್ಗದಲ್ಲಿ ಮಾತನಾಡಿ, ಈ ಬಗ್ಗೆ ಯಾವುದೇ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ನಾನು ವರಿಷ್ಠರಿಗೆ, ಪಕ್ಷದ ರಾಜ್ಯಾಧ್ಯಕ್ಷರಿಗೆ ಮೊದಲೆ ನನ್ನ ಇಂದಿನ ಕಾರ್ಯಕ್ರಮದ ಬಗ್ಗೆ ತಿಳಿಸಿದ್ದೆ. ಸಿಎಂ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಹೇಳಿದ್ದಾರೆ. ಈ ಮುಂಚೆ ಇತ್ತೀಚೆಗೆ ಶಿವಮೊಗ್ಗ ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಸಿಎಂ ಬಂಗಾರಪ್ಪ ವಿರುದ್ಧ ಯಡಿಯೂರಪ್ಪ ಅವರ ಮಗ ರಾಘವೇಂದ್ರ ಅವರು ಜಯಭೇರಿ ಬಾರಿಸಿ, ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲೂ ಈಶ್ವರಪ್ಪ ಅವರು ಪಾಲ್ಗೊಂಡಿರಲಿಲ್ಲ. ವಿಶೇಷವೆಂದರೆ ಪಕ್ಷದ ರಾಜ್ಯಾಧ್ಯಕ್ಷರಾದ ಸದಾನಂದ ಗೌಡ, ಸರ್ಕಾರದ ಬೆನ್ನಲುಬು ಎಂದೇ ಭಾವಿಸಲಾಗಿರುವ ರೆಡ್ಡಿ ಸಹೋದರರು,ಶ್ರೀರಾಮುಲು, ಈಶ್ವರಪ್ಪ ಸೇರಿದಂತೆ ಪ್ರಮುಖ ನಾಯಕರುಗಳು ವಿಕಾಸ ಸಂಕಲ್ಪ ದಲ್ಲಿ ಪಾಲ್ಗೊಂಡಿಲ್ಲ.
(ದಟ್ಸ್ ಕನ್ನಡವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X