ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಟಾಲಿನ್ ತಮಿಳುನಾಡು ಉಪಮುಖ್ಯಮಂತ್ರಿ

By Staff
|
Google Oneindia Kannada News

MK Stalin
ಚೆನ್ನೈ, ಮೇ. 29 : ಕೇಂದ್ರದಲ್ಲಿ ಕ್ಯಾಬಿನೆಟ್ ಕಸರತ್ತು ಮುಗಿದ ತಕ್ಷಣ ಡಿಎಂಕೆ ನಾಯಕ ಮತ್ತು ತಮಿಳುನಾಡು ಮುಖ್ಯಮಂತ್ರಿ ಎಂ ಕರುಣಾನಿಧಿ ತನ್ನ ಪುತ್ರ ಎಂ ಕೆ ಸ್ಟಾಲಿನ್ ಅವರನ್ನು ರಾಜ್ಯದ ಉಪಮುಖ್ಯಮಂತ್ರಿಯಾಗಿ ಘೋಷಿಸಿದ್ದಾರೆ.ರಾಜ್ಯಪಾಲ ಎಸ್ ಎಸ್ ಬರ್ನಾಲ ಮುಖ್ಯಮಂತ್ರಿಗಳ ಶಿಫಾರಸಿನ ಮೇರೆಗೆ ಇದನ್ನು ಇಂದು ಪ್ರಕಟಿಸಿದರು. ತನ್ನ ಇನ್ನೊಬ್ಬ ಮಗ ಅಳಗಿರಿಗೆ ಕೇಂದ್ರದಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನಮಾನ ದೊರಕಿಸಿಕೊಡುವಲ್ಲಿ ಕೂಡ ಅವರು ಯಶಸ್ವಿಯಾಗಿದ್ದಾರೆ.

ಪಕ್ಷದ ಮೂಲಗಳ ಪ್ರಕಾರ ಕರುಣಾನಿಧಿಯವರ ಆರೋಗ್ಯ ಹದೆಗೆಟ್ಟಿರುವ ಹಿನ್ನೆಲೆಯಲ್ಲಿ ಈ ತುರ್ತು ನಿರ್ಧಾರ ಕೈಗೊಂಡಿದ್ದಾರೆಂದು ತಿಳಿದುಬಂದಿದೆ. ಸದ್ಯ ಸರಕಾರದಲ್ಲಿ ಪೌರಾಡಳಿತ ಸಚಿವರಾಗಿರುವ ಸ್ಟಾಲಿನ್ ತನ್ನ 14ನೇ ವಯಸ್ಸಿನಲ್ಲಿ ರಾಜಕೀಯಕ್ಕೆ ಧುಮುಕ್ಕಿದ್ದರು. 1973 ರಲ್ಲಿ ಇವರು ಶಾಸಕಾ೦ಗ ಮಂಡಳಿಯ ಕಾರ್ಯದರ್ಶಿಯಾಗಿದ್ದರು. ನಂತರ 1983 ರಿಂದ ಸತತವಾಗಿ ಶಾಸಕರಾಗಿ ಆಯ್ಕೆಯಾದರು. ಒಂದು ಬಾರಿ ಚೆನ್ನೈ ಮಹಾನಗರಪಾಲಿಕೆಯ ಮೇಯರ್ ಕೂಡ ಆಗಿದ್ದರು.

ಬಹುಶಃ ಗಾಂಧಿ ಮನೆತನದ ನಂತರ ಭಾರತದ ರಾಜಕೀಯ ಇತಿಹಾಸದಲ್ಲಿ ಈ ಪ್ರಮಾಣದಲ್ಲಿ ವಂಶಪರಂಪರೆ ಆಡಳಿತ ನಡೆಸುತ್ತಿರುವುದರಲ್ಲಿ ತಮಿಳುನಾಡಿನ ಧೀಮಂತ ರಾಜಕಾರಣಿ ಎಂ ಕರುಣಾನಿಧಿ ಅವರ ಕುಟುಂಬವೇ ಇರಬೇಕು. ಆದರೆ, ಡಿಎಂಕೆ ಯಲ್ಲಿ ಅನೇಕ ಮಂದಿ ಹಿರಿಯ ಮುಖಂಡರಿದ್ದಾರೆ. ಪಕ್ಷಕ್ಕಾಗಿ ಜೀವನವನ್ನೇ ಧಾರೆ ಎರೆದು ಬೆಳೆಸಿದವರಿದ್ದಾರೆ. ಆದರೂ ಕರುಣಾನಿಧಿ ಅವರು ಮಗನಿಗೆ ಉಪಮುಖ್ಯಮಂತ್ರಿ ಪಟ್ಟಕಟ್ಟಲು ಮುಂದಾದಾಗ ಯಾವ ವಿಭಾಗದಿಂದಲೂ ಅಪಸ್ವರ ಬಂದಿಲ್ಲ. ಇದೇ ಕರುಣಾನಿಧಿ ಅವರ ರಾಜಕೀಯ, ಶಕ್ತಿ ಮತ್ತು ತಾಕತ್ತು. ಕರುಣಾನಿಧಿ ಕುಟುಂಬದ ನಂತರದ ಸ್ಥಾನ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುಟುಂಬ ಇರಬಹುದೇನೂ ?

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X