ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸು.ಕೋರ್ಟ್:ಪರಿಹಾರ ಕಾಣದ ಕೇಸ್ ಗಳು ಅರ್ಧಲಕ್ಷ!

By Staff
|
Google Oneindia Kannada News

ನವದೆಹಲಿ, ಮೇ. 28 : ದೇಶದ ಸರ್ವೋಚ್ಚ ನ್ಯಾಯಾಲಯದ ಶೀಘ್ರ ನ್ಯಾಯ ನೀಡುವ ತನ್ನ ತತ್ವಕ್ಕೆ ವಿರುದ್ದವಾದ ಒಂದು ಅಂಕಿಅಂಶ ಹೊರಬಿದ್ದಿದ್ದು, ಮಾರ್ಚ್ 2009 ರ ಅಂತ್ಯಕ್ಕೆ ಪರಿಹಾರ ಕಾಣದ ಕೇಸ್ ಗಳ ಸಂಖ್ಯೆ 50,163 ರಷ್ಟಿದೆ. ವ್ಯಾಜ್ಯ ಹೊಡುತ್ತಿರುವವರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿರುವುದು ಇದಕ್ಕೆ ಒಂದು ಕಾರಣವಾದರೆ, ದಿನ ಒಂದಕ್ಕೆ ಕೇವಲ 80 ಕೇಸ್ ಗಳು ಮಾತ್ರ ಇತ್ಯರ್ಥಗೊಳ್ಳುತ್ತಿರುವುದು ಇನ್ನೊಂದು ಕಾರಣವಾಗಿದೆ.

ನ್ಯಾಯಾಲಯದ ಎಲ್ಲ ಕಾರುಬಾರುಗಳು ಗಣಕೀಕೃತ ಗೊಂಡಿದೆ. 1990 ರಲ್ಲಿ ಒಂದು ಲಕ್ಷಕ್ಕೂ ಅಧಿಕವಾಗಿದ್ದ ಈ ಸಂಖ್ಯೆಯನ್ನು 20 ಸಾವಿರಕ್ಕೆ ಇಳಿದಿತ್ತು. ಆದರೆ, ಹೊಸ ವ್ಯಾಜ್ಯ ಹೂಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ 2006 (34649), 2007 (39780), 2008 ರಲ್ಲಿ(46926) ಹೀಗೆ ಕೇಸ್ ಗಳ ಸಂಖ್ಯೆ ಏರುತ್ತಾ ಹೋಗಿದೆ. ಸುಪ್ರಿಂಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ಅಧಿಕಾರ ಸ್ವೀಕರಿಸಿಕೊಂಡ ಕೆ ಜಿ ಬಾಲಕೃಷ್ಣನ್ ಇದನ್ನು ಸರಿಪಡಿಸುವ ಪ್ರಯತ್ನದ ನಡುವೆಯೂ ಕೇಸ್ ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಾ ಹೋಗುತ್ತಿದೆ.

ದೇಶದ ಒಟ್ಟು 21 ಹೈಕೋರ್ಟ್ ನಲ್ಲೂ ಇದೆ ಸಮಸ್ಯೆ ಕಾಡುತ್ತಿದೆ. 836 ನ್ಯಾಯಾಧೀಶರಿರ ಬೇಕಾದ ಜಾಗದಲ್ಲಿ 635 ನ್ಯಾಯಾಧೀಶರಿದ್ದಾರೆ. 2008 ರಲ್ಲಿ 37.4 ಲಕ್ಷ ಕೇಸ್ ಗಳು ಇದ್ದರೆ, 2009 ರಲ್ಲಿ 38.7 ಲಕ್ಷ ನೋಂದಯಿಸಲ್ಪಟ್ಟ ಕೇಸ್ ಗಳು ಪರಿಹಾರ ಕಾಣಬೇಕಿದೆ.

(ಏಜನ್ಸೀಸ್)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X