ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರದಿಂದ ಬಡಭಕ್ತರಿಗೆ ವಿಶೇಷ ರಿಯಾಯ್ತಿ

By Staff
|
Google Oneindia Kannada News

Krishnaiah Shetty
ಬೆಂಗಳೂರು, ಮೇ. 27 : ರಾಜ್ಯದ ಭಕ್ತರಿಗೆ ತಿಮ್ಮಪ್ಪನ ಲಾಡು, ಶಿವರಾತ್ರಿ ದಿನ ಗಂಗಾಜಲ ಹಂಚಿದ ನಂತರ ಮುಜರಾಯಿ ಸಚಿವ ಎಸ್ ಎನ್ ಕೃಷ್ಣಯ್ಯ ಶೆಟ್ಟಿ ಬಡಭಕ್ತರ (ಬಿಪಿಎಲ್) ಕಡೆಗೆ ಗಮನ ಹರಿಸಿದ್ದಾರೆ. ರಾಜ್ಯದ ತೀರ್ಥ ಕ್ಷೇತ್ರಗಳಿಗೆ ಹೋಗಿ ಬರುವ ಬಡ ರೋಗಿಗಳಿಗೆ ಪ್ರಯಾಣ ಮತ್ತು ವಸತಿ ಸೌಕರ್ಯದಲ್ಲಿ ರಿಯಾಯಿತಿ ನೀಡಲು ಚಿಂತನೆ ನಡೆಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕುಕ್ಕೆ ಸುಭ್ರಮಣ್ಯ, ಮಹದೇಶ್ವರ ಬೆಟ್ಟ, ಕೊಲ್ಲೂರು, ನಂಜನಗೂಡು ಮೊದಲಾದ ಯತ್ರಾಸ್ಥಳಗಳಿಗೆ ಹೋಗಿ ಬರುವ ಬಡ ಭಕ್ತರಿಗೆ ಇಲಾಖೆ ವತಿಯಿಂದ ನೆರವು ನೀಡುವ ಯೋಜನೆ ನಮ್ಮದಾಗಿದೆ. ಈ ಯೋಜನೆಯ ರೂಪುರೇಷೆಗಳನ್ನು ಅಂತಿಮಗೊಳಿಸಬೇಕಾಗಿದೆ ಎಂದರು.

ನನ್ನ ಚಲನವಲನಗಳ ಬಗ್ಗೆ ಯಾರೂ ಬೇಹುಗಾರಿಕೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಬನಶಂಕರಿ ದೇವಸ್ಥಾನ ಬಳಿ ನಡೆದ ಘಟನೆ ಕೇವಲ ಆಕಸ್ಮಿಕವಷ್ಟೇ. ಅಂದು ಚಿತ್ರೀಕರಣ ಮಾಡುತ್ತಿದ್ದ ವ್ಯಕ್ತಿ ಗುಪ್ತಚರ ಇಲಾಖೆಗೆ ಸೇರಿದವನಲ್ಲ ಎಂದರು. ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಸೋಲಿಗೆ ನಾನು ಕಾರಣ ಎಂದು ಬಿಂಬಿಸಲಾಗುತ್ತಿದೆ. ಇದು ಶುದ್ಧ ಸುಳ್ಳು. ನನ್ನ ಖಾತೆ ಮೇಲೆ ತೂಗುಕತ್ತಿ ಇದೆ ಎನ್ನುವುದು ಬರೀ ಉಪಾಪೋಹವಷ್ಟೆ. ಕೊನೆಗೆ ಹಣಬರಹ ಇದ್ದ ಹಾಗೆ ಆಗುತ್ತೆ ಎಂದು ಕೃಷ್ಣಯ್ಯ ಶೆಟ್ಟಿ ಹೇಳಿದರು. ಕೋಲಾರದಲ್ಲಿ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ ಎಸ್ ವೀರಯ್ಯ ಅವರು ನನ್ನ ಸೋಲಿಗೆ ಸಚಿವ ಕೃಷ್ಣಯ್ಯ ಶೆಟ್ಟಿ ಕಾರಣ ಎಂದು ಆರೋಪಿಸಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X