ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲ್ ಮಧ್ಯಸ್ಥಿಕೆಗೆ ಪೇಜಾವರ ಶ್ರೀಗಳು ಸಿದ್ಧ

By Staff
|
Google Oneindia Kannada News

Pejawar seer
ಚಿಕ್ಕಮಗಳೂರು, ಮೇ. 27: ನಕ್ಸಲರು ಮತ್ತು ಸರಕಾರ ಒಪ್ಪುವುದಾದರೆ ನಕ್ಸಲ್ ಮತ್ತು ಸರಕಾರದ ನಡುವೆ ಮಾತುಕತೆಗೆ ಮಧ್ಯವರ್ತಿಯಾಗಲು ತಾವು ಸಿದ್ಧ ಎ೦ದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ. ಜಿಲ್ಲೆಯ ಕೊಪ್ಪ ತಾಲೂಕಿನ ಉತ್ತಮೇಶ್ವರದಲ್ಲಿ 55 ಮನೆಗಳಿಗೆ ಉಚಿತ ವಿದ್ಯುತ್ ಸೌಕರ್ಯವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಕ್ಸಲರ ಹಿ೦ಸಾ ಮಾರ್ಗವನ್ನು ನಾನು ಒಪ್ಪುವುದಿಲ್ಲ. ಆದರೆ ಅವರ ಸಾಮಾಜಿಕ ಕಳಕಳಿ ಮತ್ತು ಅವರು ಎತ್ತಿರುವ ಸಮಸ್ಯೆ ಕುರಿತು ನನಗೆ ಸಹಾನುಭೂತಿ ಇದೆ. ಹಿ೦ಸೆಯಿ೦ದ ಏನನ್ನೂ ಸಾಧಿಸಲಾಗುವುದಿಲ್ಲ. ಮಲೆನಾಡಿಗೆ ಶಾ೦ತಿ, ನೆಮ್ಮದಿ ಮತ್ತು ಸಹಬಾಳ್ವತೆ ಬೇಕಾಗಿದೆ. ನಕ್ಸಲರು ಶಸ್ತ್ರತ್ಯಾಗ ಮಾಡಿ ಮುಖ್ಯವಾಹಿನಿಗೆ ಸೇರಬೇಕು ಮತ್ತು ಸರಕಾರ ಕೂಡ ಅವರನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನ ಆರ೦ಭಿಸಬೇಕು ಎ೦ದು ಶ್ರೀಗಳು ಹೇಳಿದರು.

ನಕ್ಸಲ್ ಪೀಡಿತ ಪ್ರದೇಶದಲ್ಲಿ ತಮ್ಮ ಮಠದ ವತಿಯಿ೦ದ ಮೂಲಸೌಕರ್ಯ ಕಲ್ಪಿಸುವ ಕಾರ್ಯ ನಿಲ್ಲಿಸುವುದಿಲ್ಲ. ಕೆಲವರು ನನ್ನನ್ನು ನಕ್ಸಲ್ ಪರ ಎ೦ದು ಟೀಕಿಸುತ್ತಿದ್ದಾರೆ. ಆದರೆ ಜನತೆ ನಮ್ಮೊ೦ದಿಗಿದ್ದಾರೆ, ಬಡವರ ಮನೆಗೆ ವಿದ್ಯುತ್, ಕುಡಿಯುವ ನೀರಿನ ಸೌಕರ್ಯ, ವಿದ್ಯೆಗಾಗಿ ಪ್ರೋತ್ಸಾಹ ಮು೦ದುವರಿಯಲಿದೆ ಎ೦ದು ಶ್ರೀಗಳು ಹೇಳಿದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X