ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಧಿಕೃತ ಶಾಲೆಗಳಲ್ಲಿ ಮಕ್ಕಳನ್ನು ಸೇರಿಸಬೇಡಿ

By Staff
|
Google Oneindia Kannada News

ಬೆಂಗಳೂರು, ಮೇ. 27 : ಬೆಂಗಳೂರು ಪೂರ್ವ ತಾಲ್ಲೂಕಿನಲ್ಲಿ ರಾಜ್ಯದ ಭಾಷಾ ನೀತಿಯನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಸುಮಾರು 90 ಶಾಲೆಗಳ ಮಾನ್ಯತೆಯನ್ನು ಶಿಕ್ಷಣ ಇಲಾಖೆಯು ರದ್ದುಗೊಳಿಸಲಾಗಿದೆ ಎಂದು ಬೆಂಗಳೂರು ದಕ್ಷಿಣ ವಲಯದ ಶಿಕ್ಷಣಾಧಿಕಾರಿಗಳು ಅವರು ಪ್ರಕಟಣೆ ಮೂಲಕ ತಿಳಿಸಿದ್ದು, ಈ ಶಾಲೆಗಳಿಗೆ ಪೋಷಕರು ತಮ್ಮ ಮಕ್ಕಳನ್ನು ದಾಖಲು ಮಾಡಬಾರದೆಂದು ಮನವಿ ಮಾಡಿದ್ದಾರೆ.

ಅಲ್ಲದೆ, ಇದೇ ವಲಯಕ್ಕೆ ಸಂಬಂಧಿಸಿದಂತೆ ಸರ್ಕಾರದ ಅನುಮತಿ ಪಡೆಯದೇ ಅನಧಿಕೃತವಾಗಿ ಈ ಕೆಳಕಂಡ 7 ಶಾಲೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿದ್ದು, ಈ ಶಾಲೆಗಳಲ್ಲೂ ಸಹ ಮಕ್ಕಳನ್ನು ದಾಖಲು ಮಾಡಬಾರದೆಂದು ಸೂಚಿಸಿದೆ.

* ಅಲ್ಫ ಒಮೇಗಾರ ಪ್ರೈಮರಿ ಸ್ಕೂಲ್ ಚಲ್ಲಘಟ್ಟ, ಬೆಂಗಳೂರು
* ಎನ್‌ಲೈಟ್ ಪ್ರೈಮರಿ ಸ್ಕೂಲ್ ಅನ್ನಸಂದ್ರಪಾಳ್ಯ, ಬೆಂಗಳೂರು
* ಗೋಲ್ಟನ್ ಪಬ್ಲಿಕ್ ಸ್ಕೂಲ್ 3 ನೇ ಕ್ರಾಸ್ ರಾಮಕೃಷ್ಣ ಹೆಗ್ಗಡೆ ನಗರ, ಬೆಂಗಳೂರು
* ನ್ಯೂ ಹೊರೈಜಾನ್ ಸಕೂಲ್ ಆಶ್ವಥ್ ನಗರ (ವಿದ್ಯಾಸಾಗರ) ಬೆಂಗಳೂರು
* ಸೆಂಟ್ ಪಾಲ್ ಸ್ಕೂಲ್ ಚೇಳಕೆರೆ, ಬೆಂಗಳೂರು ಪೂರ್ವ ತಾಲ್ಲೂಕು
* ಗ್ಲೋಬಲ್ ನರ್ಸರಿ ಮತ್ತು ಪ್ರೈಮರಿ ಸ್ಕೂಲ್ ಪಣತ್ತೂರು, ಬೆಂಗಳೂರು ಪೂರ್ವ ತಾಲ್ಲೂಕು
* ರಾಯಲ್ ಇಂಗ್ಲೀಷ್ ಪ್ರೈಮರಿ ಸ್ಕೂಲ್ ಸಿದ್ದಾಪುರ, ಬೆಂಗಳೂರು ಪೂರ್ವ ತಾಲ್ಲೂಕು, ಬೆಂಗಳೂರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X